ಸಂಗ್ರಹ ಚಿತ್ರ 
ರಾಜ್ಯ

'ಭಾರತದಲ್ಲಿ ಮೊದಲ ಬಾರಿ ವರ್ಣಭೇದ ಪ್ರಕರಣ': ಬೆಂಗಳೂರಿನ ವಿಮಾನದಲ್ಲಿ ಭಾರತೀಯನಿಗೆ ಅಮೆರಿಕಾ ಪ್ರಜೆಯಿಂದ ನಿಂದನೆ!

ಏರ್ ವಿಸ್ತಾರಾ ವಿಮಾನದಲ್ಲಿ ಅಮೆರಿಕದ ಪ್ರಜೆಯೊಬ್ಬ ತನಗೆ  ಜನಾಂಗೀಯ ನಿಂದನೆ ಹಾಗೂ ಅವಮಾನ ಮಾಡಿದ್ದಾರೆ ಎಂದು ದಿವ್ಯೇಂದು ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಏರ್ ವಿಸ್ತಾರಾ ವಿಮಾನದಲ್ಲಿ ಅಮೆರಿಕದ ಪ್ರಜೆಯೊಬ್ಬ ತನಗೆ  ಜನಾಂಗೀಯ ನಿಂದನೆ ಹಾಗೂ ಅವಮಾನ ಮಾಡಿದ್ದಾರೆ ಎಂದು ದಿವ್ಯೇಂದು ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಭಾರತದೊಳಗೆ ವರ್ಣಭೇದ ನೀತಿಯನ್ನು ಎದುರಿಸುವುದು ನನಗೆ ಮೊದಲನೆಯದು' ಎಂದು ದೆಹಲಿ ಮೂಲದ ಹಣಕಾಸು ವೃತ್ತಿಪರ ದಿವ್ಯೇಂದು ಶೇಖರ್ ಹೇಳಿದ್ದಾರೆ. ನಿನ್ನೆ ಸಂಜೆ 6.40ಕ್ಕೆ ವಿಮಾನ ಹಾರಾಟಕ್ಕೂ ಮೊದಲೇ ವಿಸ್ತಾರಾ ಸಿಬ್ಬಂದಿ ತನ್ನ ದೂರುಗಳ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂದು ಆರೋಪಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದ ಶೇಖರ್, 'ಇದು ಅತ್ಯಂತ ದುರದೃಷ್ಟಕರ ಘಟನೆ. ಪ್ರಯಾಣದ ಆರಂಭದಲ್ಲೇ   ನಿಂದನೆ ಕುರಿತಂತೆ ಬಗ್ಗೆ ನಾನು ಪದೇ ಪದೇ ಎಚ್ಚರಿಸಿದೆ. ವಿಸ್ತಾರಾ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ವಿಮಾನ ಆಗಸದಲ್ಲಿದ್ದಾಗ ಏನೂ ಮಾಡಲಾಗುವುದಿಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಅವರ ಸಹಾಯವನ್ನು ಕೇಳಿದೆ. ಇದಕ್ಕೆ ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡರು ಎಂದು ಹೇಳಿದ್ದಾರೆ.

'ನಮ್ಮ ಪ್ರಯಮಾಣದ ಸಮಯದಲ್ಲಿ ಎಡಭಾಗದಲ್ಲಿ ಕುಳಿತಿದ್ದ ಮಗುವೊಂದು ನಿರಂತರವಾಗಿ ಮಾತನಾಡುತ್ತಿದ್ದರಿಂದ ಅಮೆರಿಕದ ಪ್ರಜೆ ನಿಂದನೆ ಮಾಡುತ್ತಿದ್ದರು ಎಂದು ಶೇಖರ್ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ 38 ವರ್ಷದ ಶೇಖರ್, ವಿಮಾನವನ್ನು ಪ್ರವೇಶಿಸಲು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಾಗ ಏರೋಬ್ರಿಡ್ಜ್‌ನಲ್ಲಿಯೇ ಸಮಸ್ಯೆ ಪ್ರಾರಂಭವಾಯಿತು. ಓರ್ವ ಅಮೇರಿಕನ್ ವ್ಯಕ್ತಿ(ಅವನ ಹೆಸರು ಗೊತ್ತಿಲ್ಲ). ಆದರೆ ಸುಮಾರು 28-29 ವರ್ಷದ ಆ ವ್ಯಕ್ತಿ. ಕಪ್ಪು ಟೀ ಶರ್ಟ್ ಮತ್ತು ಕಪ್ಪು ಶಾರ್ಟ್ಸ್‌ ಧರಿಸಿದ್ದು ಸರತಿ ಸಾಲಿನಲ್ಲಿ ಮುಂದಕ್ಕೆ ಹೋಗಲು ಪ್ರಯತ್ನಿದ್ದ. ಈ ವೇಳೆ ಆತನನ್ನು ತಡೆದು ಸರತಿ ಸಾಲಿನಲ್ಲಿ ಬರಲು ಹೇಳಿದೆ. ಇದರಿಂದ ಆತ ಕೋಪಗೊಂಡರು ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿಮಾನದಲ್ಲಿ 16E(ಮಧ್ಯ) ಆಸನವನ್ನು ಶೇಖರ್ ಬುಕ್ ಮಾಡಿದ್ದರು. ಈ ಸಾಲಿನ ಕೊನೆಯಲ್ಲಿ 16D ಆಸನದಲ್ಲಿ ಅಮೆರಿಕನ್ ಪ್ರಜೆ ಕುಳಿತಿದ್ದರು. ಅಲ್ಲದೆ ಅವರ ಬಳಿ ಒಂದು ದೊಡ್ಡ ಬ್ಯಾಕ್ ಇತ್ತು. ಅದನ್ನು ಸಿಬ್ಬಂದಿ ಸ್ಟೌ ಕ್ಯಾಬಿನ್ ಮೇಲೆ ಇಡಲು ಹೇಳಿದರು. ಆದರೆ ಆತ ಅದನ್ನು ಸೀಟಿನ ಮೇಲೆ ಇಡಬೇಕೆಂದು ಒತ್ತಾಯಿಸಿದನು. ಈ ವೇಳೆ ತನ್ನ ಬ್ಯಾಕ್ ಅನ್ನು ಆಕ್ರಮಣಕಾರಿಯಾಗಿ ಮುಂದಕ್ಕೆ ತಳ್ಳಲು ಪ್ರಾರಂಭಿಸಿದನು. ಅದು ನನ್ನ ಕಾಲಿಗೆ ತಗುಲಿ ನನಗೆ ನೋವುಂಟು ಮಾಡಿತು ಎಂದರು. 

ಈ ವೇಳೆ ಬ್ಯಾಗ್ ಅನ್ನು ಬೇರೆಡೆ ಇಡುವಂತೆ ಕೇಳಿಕೊಂಡೆ. ಅದಕ್ಕೆ ಆತ ಸೀಟಿನ ಈ ಭಾಗಕ್ಕೆ ನಾನು ಪಾವತಿಸಿದ್ದೇನೆ. ನೀವು ಮಧ್ಯಕ್ಕೆ ಮಾತ್ರ ಪಾವತಿಸಿದ್ದೀರಿ. ಹೀಗಾಗಿ ನನ್ನ ಜಾಗದಲ್ಲಿ ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ನಂತರ ತನ್ನ ಸೀಟನ್ನು ಹಿಂಬದಿಗೆ ತಳ್ಳಿ ಮಲಗಿಕೊಂಡು ಹೇ, ಯು ಇಂಡಿಯನ್ ಪು**ವೈ. ನಾನು ನಿನ್ನ ಈ ಕಂದು ಚರ್ಮವನ್ನು ಒಂದು ಏಟಿಗೆ ಕಪ್ಪಾಗಿಸುತ್ತೇನೆ ನಿಂದಿಸಿದರು ಎಂದು ಶೇಖರ್ ಟ್ವೀಟ್ ಮಾಡಿದ್ದಾರೆ.

ವಿಮಾನ ಸಿಬ್ಬಂದಿಗೆ ಕರೆ ಮಾಡಿ ಆಸನ ಬದಲಾಯಿಸುವಂತೆ ಮನವಿ ಮಾಡಿದೆ. ಅದಕ್ಕೆ ಅಮೇರಿಕನ್ ಉಗ್ರವಾಗಿ ಪ್ರತಿಕ್ರಿಯಿಸಿದ, 'ನೀವು ಭಾರತೀಯರು ಯಾವಾಗಲೂ ಕೊರಗುತ್ತೀರಿ. ನೀವು ಹುಡುಗರೇ s**t ಎಂದು ಹೇಳಿದರು. ನಂತರ 16C ಆಸನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ತಮ್ಮ ಆಸನವನ್ನು ಬದಲಾಯಿಸಿಕೊಳ್ಳಲು ಮುಂದಾದರೂ ಆದರೆ ಅದಕ್ಕೆ ಅಮೆರಿಕಾ ಪ್ರಜೆ ದಾರಿ ಬಿಡಲಿಲ್ಲ ಎಂದು ಶೇಖರ್ ಹೇಳಿದರು. ನಾನು ಈ ವ್ಯಕ್ತಿಯೊಂದಿಗೆ ಪ್ರಯಾಣ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಬೇರೆ ವ್ಯವಸ್ಥೆ ಮಾಡಬಹುದೇ ಎಂದು ನಾನು ಏರ್ ವಿಸ್ತಾರಾವನ್ನು ಕೇಳಿದೆ. ಅದಕ್ಕೆ ಸಿಬ್ಬಂದಿ ಮೌನವಹಿಸಿದರು ಎಂದು ಅವರು ಹೇಳಿದರು.

ಈ ಬಗ್ಗೆ ಏರ್ ವಿಸ್ತಾರಾದ ವಕ್ತಾರರನ್ನು ಪ್ರಶ್ನಿಸಿದಾಗ ಘಟನೆಯ ಬಗ್ಗೆ ಸ್ವಲ್ಪ ಸ್ಪಷ್ಟತೆ ಪಡೆದ ನಂತರ ಒಂದು ದಿನದ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT