ಅಣ್ಣಾಮಲೈ 
ರಾಜ್ಯ

ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಹೀರೋ, ಬಿಜೆಪಿಗೆ ಕಾರ್ಯಕರ್ತರೇ ಹೀರೋಗಳು: ಅಣ್ಣಾಮಲೈ

ಕಾಂಗ್ರೆಸ್‌ಗೆ ಹೀರೋ ರಾಹುಲ್ ಗಾಂಧಿ ಬಿಜೆಪಿಗೆ ಕಾರ್ಯಕರ್ತರೇ ಹೀರೋ. ನಮ್ಮಲ್ಲಿ ಕಾರ್ಯಕರ್ತರು ಹೀರೋ ಆಗಿರೋವರೆಗೂ ಏನೂ ಸಮಸ್ಯೆ ಇಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ಗೆ ಹೀರೋ ರಾಹುಲ್ ಗಾಂಧಿ ಬಿಜೆಪಿಗೆ ಕಾರ್ಯಕರ್ತರೇ ಹೀರೋ. ನಮ್ಮಲ್ಲಿ ಕಾರ್ಯಕರ್ತರು ಹೀರೋ ಆಗಿರೋವರೆಗೂ ಏನೂ ಸಮಸ್ಯೆ ಇಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಶಿಡ್ಲಘಟ್ಟದಲ್ಲಿ  ಹಮ್ಮಿಕೊಂಡಿದ್ದ ಡಿಜಿಟಲ್ ಮೀಡಿಯಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಲಿಂಗಾಯತ ಸಿಎಂ ರಾಜ್ಯವನ್ನು ಹಾಳುಮಾಡಿಬಿಟ್ಟರು ಎಂಬ ಸಿದ್ದರಾಮಯ್ಯನವರ ಹೇಳಿಕೆ ಹಿನ್ನೆಲೆ ಮಾತನಾಡಿದ ಅಣ್ಣಾಮಲೈ, ಎಲ್ಲಾ ಜಾತಿಯವರು ನಮ್ಮ ಪಕ್ಷದಲ್ಲಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿದ್ದಾರೆ, ತಮಿಳುನಾಡಿನಲ್ಲಿ ತಮಿಳುಗರಿದ್ದಾರೆ. ಕರ್ನಾಟಕದಲ್ಲಿ ಒಂದು ಸಮುದಾಯಕ್ಕೆ ಕಪ್ಪು ಚುಕ್ಕೆ ತರುವಂತಹ ಕೆಲಸ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಎಲ್ಲ ಸಮುದಾಯಗಳು ಸೇರಿ ಇದನ್ನು ವಿರೋಧ ಮಾಡಬೇಕು‌ ಎಂದು ಆಗ್ರಹಿಸಿದರು.

ಬಿಜೆಪಿಯಲ್ಲಿ ಸೋತ ಮೇಲು ಉಪ ಮುಖ್ಯಮಂತ್ರಿಯಾಗಿದ್ದಾರೆ. ಎಂಎಲ್‌ಸಿ ಕೊಟ್ಟಿದ್ದೇವೆ. ನಾನು ಏನೂ ಇಲ್ಲದೆ ಕೆಲಸ ಮಾಡ್ತಾ ಇದ್ದೇನೆ. ಆದರೆ, ಡಿಕೆಶಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯವನ್ನು ಎಟಿಎಂ ಎಂದು ತಿಳಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಜಗದೀಶ್ ಶೆಟ್ಟರ್‌ಗೆ ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡುವಂತೆ ಕಾಂಗ್ರೆಸ್‌ ನಾಯಕರು ಕರೆ ನೀಡಿದ್ದಾರೆ. ಇದರಿಂದ ಸ್ಥಳೀಯ ನಾಯಕರು ಇದನ್ನು ಪ್ರಶ್ನಿಸಬೇಕು. ಯಾರಾದರೂ ಕಾಂಗ್ರೆಸ್‌ಗೆ ಹೋದಾಗ ಕೈ ಕುಲುಕುವುದು, ಶಾಲು ಹಾಕುವುದು ಮಾಮೂಲಿ, ಒಂದು ಗಾಡಿಯಲ್ಲಿ ಪೆಟ್ರೋಲ್ ಮುಗಿದ್ರೆ ಇನ್ನೊಂದು ಗಾಡಿ ಹಿಡಿಯುತ್ತಾರೆ. ರಾಹುಲ್ ಗಾಂಧಿ ಅವರೇ ಉತ್ತರ ಕರ್ನಾಟಕದಲ್ಲಿ ಇಷ್ಟು ದಿನ ಕಾಂಗ್ರೆಸ್ ನಾಯಕರು ಇರಲಿಲ್ಲವೇ ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT