ಒಪಿಡಿಯಲ್ಲಿ ಕಾದು ಕುಳಿತಿರುವ ಜನತೆ. 
ರಾಜ್ಯ

ಬೆಂಗಳೂರು: ಹೊರರೋಗಿ ವಿಭಾಗಕ್ಕೆಂದೇ 4 ಅಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ನಿಮ್ಹಾನ್ಸ್ ಮುಂದು!

ವೈದ್ಯರ ಭೇಟಿ ಮಾಡಬೇಕೆಂದರೆ ಬೆಳಿಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಟೋಕಲ್ ಪಡೆದು ಕಾಯುತ್ತಿದ್ದ ಹೊರರೋಗಿಗಳ ಸಮಸ್ಯೆ ದೂರಾಗಿಸಲು ನಿಮ್ಹಾನ್ಸ್‌ ಆಸ್ಪತ್ರೆ ಮುಂದಾಗಿದೆ.

ಬೆಂಗಳೂರು: ವೈದ್ಯರ ಭೇಟಿ ಮಾಡಬೇಕೆಂದರೆ ಬೆಳಿಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಟೋಕಲ್ ಪಡೆದು ಕಾಯುತ್ತಿದ್ದ ಹೊರರೋಗಿಗಳ ಸಮಸ್ಯೆ ದೂರಾಗಿಸಲು ನಿಮ್ಹಾನ್ಸ್‌ ಆಸ್ಪತ್ರೆ ಮುಂದಾಗಿದೆ.

ಹೊರರೋಗಿಗಳ ವಿಭಾಗಕ್ಕೆಂದೇ ನಿಮ್ಹಾನ್ಸ್ 4 ಅಂತಸ್ತಿನ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಹಾನ್ಸ್‌ನ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ ಅವರು, ನೂತನ ಕಟ್ಟಡಕ್ಕೆ 280 ಕೋಟಿ ರೂ.ವರೆಗೆ ವೆಚ್ಚವಾಗಬಹುದು. ಕಟ್ಟಡ ನಿರ್ಮಾಣದ ಧನಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. 1990ರ ದಶಕದಲ್ಲಿ ಆಸ್ಪತ್ರೆಗೆ 400-500 ರೋಗಿಗಳು ಭೇಟಿ ನೀಡುತ್ತಿದ್ದರು. ಆದರೀಗ ಈ ಸಂಖ್ಯೆ ದುಪ್ಪಟ್ಟಾಗಿದೆ. ಹೊರರೋಗಿಗಳ ವಿಭಾಗಕ್ಕೇ ಪ್ರತೀದಿನ 2,000-2,500 ಜನರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಹೊರರೋಗಿ ವಿಭಾಗಕ್ಕೆ ಪ್ರತ್ಯೇಕ ಕಟ್ಟಡದ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಇರುವ ಒಪಿಡಿ ಹಿಂದೆಯೇ ನೂತನ ಒಪಿಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು. ನಂತರ ಹಳೆಯ ಒಪಿಡಿಯನ್ನು ಮುಚ್ಚಲಾಗುತ್ತದೆ. ಇಲ್ಲಿರುವ ಸಿಬ್ಬಂದಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಪ್ರಸ್ತುತದ ಒಪಿಡಿ ವಿಭಾಗವನ್ನು ಸುಂದರವಾದ ಉದ್ಯಾನವನ್ನಾಗಿ ಪರಿವರ್ತಿಸುವ ಚಿಂತನೆಗಳಿವೆ ಎಂದು ತಿಳಿಸಿದ್ದಾರೆ.

ಚಿಕಿತ್ಸೆ ಪಡೆಯಲು ದೂರದ ಪಟ್ಟಣಗಳಿಂದ ಆಸ್ಪತ್ರೆಗೆ ಬರುತ್ತಾರೆ. ಕಾಯಲು ಆರಾಮದಾಯಕ ವಾತಾವರಣ, ಆವರಣದ ಅಗತ್ಯವಿರುತ್ತದೆ. ಇದರಿಂದ ಅವರ ಒತ್ತಡ ಮಟ್ಟ ಕೂಡ ಕಡಿಮೆಯಾಗುವಂತೆ ಮಾಡುತ್ತದೆ ಎಂದಿದ್ದಾರೆ.

ರೋಗಿಗಳ ಕಾಯುವ ಅವಧಿಯನ್ನು ಸುಧಾರಿಸಲು ನಿಮ್ಹಾನ್ಸ್ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ವಯಸ್ಸಾದವರಿಗೆ, ಗರ್ಭಿಣಿಯರಿಗೆ ಮತ್ತು ಮಕ್ಕಳಿರುವವರಿಗೆ ಪ್ರತ್ಯೇಕ ಸರತಿ ಸಾಲುಗಳನ್ನು ಪ್ರಾರಂಭಿಸಿದ್ದೇವೆ, ಇದು ಅವರಿಗೆ ಸಾಕಷ್ಟು ಸಹಾಯ ಮಾಡಿದೆ" ಎಂದು ಹಿರಿಯ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕರು ಹೇಳಿದ್ದಾರೆ.

ರೋಗಿಗಳ ಪ್ರತಿಕ್ರಿಯೆಗಾಗಿ ಸಮೀಕ್ಷೆ ನಡೆಸಲಾಗಿತ್ತು. ಈವೇಳೆ ಹಲವರು ಕಾಯುವ ಅವಧಿ ಹಾಗೂ ಹಣ ನೀಡುವಂತೆ ಸಿಬ್ಬಂದಿಗಳು ಒತ್ತಾಯಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT