ರಾಜ್ಯ

ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

Sumana Upadhyaya

ಬೆಂಗಳೂರು: ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ವಿಧಾನಪರಿಷತ್ತಿನ ಕೆಲವು ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. 

ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ. ಚಂದ್ರಶೇಖರ ಬಿ. ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಾ. ವೈ.ಎ. ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೆಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ಅವರು ಜೂನ್ 21, 2024ಕ್ಕೆ ನಿವೃತ್ತಿಯಾಗಲಿದ್ದಾರೆ.

ನೈಋತ್ಯ ಪದವೀಧರ ಕ್ಷೇತ್ರ ಆಯನೂರು ಮಂಜುನಾಥ್ ರಾಜೀನಾಮೆಯಿಂದ ಏಪ್ರಿಲ್ 19 ರಿಂದ ತೆರವಾಗಿದ್ದು, ಈ ಸ್ಥಾನದ ಅವಧಿ 21-06-2024 ತನಕ, ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಣ್ಣ ರಾಜೀನಾಮೆಯಿಂದ ಮಾ.16ಕ್ಕೆ ತೆರವಾದ ಸ್ಥಾನದ ಅವಧಿ 11-11-2026 ತನಕ ಇದೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕ ನೋಟೀಸ್ ಸೆ.30 ಪ್ರಕಟಣೆಯಾಗಲಿದೆ. ಫಾರಂ 18 ಅಥವಾ 19 ರಲ್ಲಿ ಅರ್ಜಿ ಸ್ವೀಕರಿಸಲು ನ.6 ಕಡೆಯ ದಿನವಾಗಿದೆ. ಮತದಾರರ ಕರಡು ಪ್ರತಿ ನ.23 ರಂದು ಪ್ರಕಟವಾಗಲಿದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು ನ.23 ರಿಂದ ಡಿ.9 ವರೆಗೆ ಅವಕಾಶವಿದೆ. ಡಿ.30ಕ್ಕೆ ಮತದಾರರ ಪಟ್ಟಿ ಪ್ರಕಟವಾಗಲಿದೆ.

SCROLL FOR NEXT