ಕಾಫಿ,- ಸಾಂದರ್ಭಿಕ ಚಿತ್ರ 
ರಾಜ್ಯ

ಸಬ್ಸಿಡಿ ಯೋಜನೆ: ಕಾಫಿ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿದ ಕಾಫಿ ಮಂಡಳಿ

ಕಾಫಿ ಮಂಡಳಿಯು ಮಧ್ಯಮಾವಧಿ ಹಣಕಾಸು ಯೋಜನೆಯಡಿ ಸಬ್ಸಿಡಿ ಪಡೆಯಲು ಸಣ್ಣ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಸುಮಾರು 10 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದ್ದು, ಬೆಳೆಗಾರರು ಈ ವರ್ಷದ ಅಕ್ಟೋಬರ್ 31...

ಮಡಿಕೇರಿ: ಕಾಫಿ ಮಂಡಳಿಯು ಮಧ್ಯಮಾವಧಿ ಹಣಕಾಸು ಯೋಜನೆಯಡಿ ಸಬ್ಸಿಡಿ ಪಡೆಯಲು ಸಣ್ಣ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಸುಮಾರು 10 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದ್ದು, ಬೆಳೆಗಾರರು ಈ ವರ್ಷದ ಅಕ್ಟೋಬರ್ 31 ರೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ಕೊಡಗಿನಲ್ಲಿ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ ಮತ್ತು ಜಿಲ್ಲೆಯಲ್ಲಿ 25 ಎಕರೆಯೊಳಗೆ ಎಸ್ಟೇಟ್ ಹೊಂದಿರುವ ಸಣ್ಣ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಸಣ್ಣ ಬೆಳೆಗಾರರನ್ನು ಬೆಂಬಲಿಸಲು, ಕಾಫಿ ಮಂಡಳಿಯು ಎಸ್ಟೇಟ್‌ಗಳ ಅಭಿವೃದ್ಧಿಗೆ ಸಹಾಯಧನ ನೀಡುವ ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ.

ಈ ವರ್ಷ, ಮಂಡಳಿಯು ಆಗಸ್ಟ್‌ನಲ್ಲಿ ಸಣ್ಣ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ ಮತ್ತು ಬೆಳೆಗಾರರಿಗೆ ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಸಬ್ಸಿಡಿ ನೀಡುವುದಾಗಿ ತಿಳಿಸಿದೆ.

"ಸಣ್ಣ ಬೆಳೆಗಾರರು ಈ ವರ್ಷ ICDP-MTF ಯೋಜನೆಯಡಿ ಎರಡು ಮುಖ್ಯ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ಕಾಫಿ ಮಂಡಳಿಯು ಮರು ನೆಡುವಿಕೆ ಮತ್ತು ನೀರಾವರಿ ಸೌಲಭ್ಯಗಳಿಗಾಗಿ ಸಬ್ಸಿಡಿಗಳನ್ನು ವಿಸ್ತರಿಸುತ್ತಿದೆ. ಇದಲ್ಲದೆ, ಎಸ್‌ಸಿ-ಎಸ್‌ಟಿ ವರ್ಗದ ಬೆಳೆಗಾರರಿಗೆ ಗೋದಾಮುಗಳು ಮತ್ತು ಡ್ರೈಯಿಂಗ್ ಯಾರ್ಡ್‌ಗಳ ನಿರ್ಮಾಣಕ್ಕೆ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕಾಫಿ ಮಂಡಳಿ ಗೋಣಿಕೊಪ್ಪಲು ವಿಭಾಗದ ಕಿರಿಯ ಸಂಪರ್ಕಾಧಿಕಾರಿ ಮುಖರೀಬ್ ಡಿಸಿ ಅವರು ತಿಳಿಸಿದ್ದಾರೆ.

ನೀರಾವರಿ ಅಡಿಯಲ್ಲಿ, ಕಾಫಿ ಬೆಳೆಗಾರರು ಅಸ್ತಿತ್ವದಲ್ಲಿರುವ ಪಂಪ್ ಸೆಟ್‌ಗಳು ಮತ್ತು ಮೋಟಾರ್‌ಗಳನ್ನು ನವೀಕರಿಸಲು, HDP ಲೈನ್‌ಗಳು, ಜೆಟ್‌ಗಳು ಮತ್ತು ಸ್ಪ್ರಿಂಕ್ಲರ್‌ಗಳಿಗೆ ಸಹಾಯಧನ ಪಡೆಯಬಹುದು. 

"ನೀರಾವರಿ ಉದ್ದೇಶಗಳಿಗಾಗಿ ಬೆಳೆಗಾರರು ಸುಮಾರು ಶೇ. 40 ರಷ್ಟು ಘಟಕ ಶುಲ್ಕವನ್ನು ಸಬ್ಸಿಡಿಯಾಗಿ ಪಡೆಯಬಹುದು. ಒಬ್ಬ ಬೆಳೆಗಾರ ಗರಿಷ್ಠ ನಾಲ್ಕು ಹೆಕ್ಟೇರ್ ಜಾಗಕ್ಕೆ ಸಬ್ಸಿಡಿ ಪಡೆಯಬಹುದು,'' ಎಂದು ಮುಖರೀಬ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT