ಬಿಎಂಟಿಸಿ ನಿವೃತ್ತ ಚಾಲಕ ಕೆ. ಧನಪಾಲ್ 
ರಾಜ್ಯ

ನನ್ನ ಪರಿಶ್ರಮ ಪ್ರಧಾನಿ ಮೋದಿವರೆಗೂ ತಲುಪುತ್ತದೆ ಎಂದು ಊಹಿಸಿರಲಿಲ್ಲ: ಶಿಲಾಶಾಸನ ಪ್ರೇಮಿ ಧನಪಾಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಆಗಸ್ಟ್​ 27ರಂದು) ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮದ 104ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ, ಬೆಂಗಳೂರು ಮೂಲದ ಧನ್​ಪಾಲ್​ ಎಂಬುವವರನ್ನು ನೆನೆದಿದ್ದರು.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಆಗಸ್ಟ್​ 27ರಂದು) ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮದ 104ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ, ಬೆಂಗಳೂರು ಮೂಲದ ಧನ್​ಪಾಲ್​ ಎಂಬುವವರನ್ನು ನೆನೆದಿದ್ದರು.

ಧನಪಾಲ್ ಕುರಿತಂತೆ ಈ ಹಿಂದೆ ದಿ ನ್ಯೂ ಸಂಡೆ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿರುವ ಮೋದಿಯವರು, ನಿನ್ನೆಯ ಮನ್ ಕಿ ಬಾತ್ ನಲ್ಲಿ ಧನಪಾಲ್ ಅವರನ್ನು ಪ್ರಶಂಸಿಸಿದ್ದಾರೆ.

ಬೆಂಗಳೂರಿನ ಪರಂಪರೆಯ ಅಂಶಗಳನ್ನು ಮರುಶೋಧಿಸುವಲ್ಲಿ ಉತ್ಸಾಹ ಹೊಂದಿರುವ ಧನಪಾಲ್ ಅವರ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ. ಅವರಿಂದ ಸ್ಫೂರ್ತಿ ಪಡೆದು ಬೇರೆಯವರು ಸಹ ಅವರ ನಗರ ಮತ್ತು ಪಟ್ಟಣಗಳಲ್ಲಿ ಇದೇ ರೀತಿ ಮಾಡುವಂತೆ ನಾನು ಒತ್ತಾಯಿಸುತ್ತೇನೆಂದು ಹೇಳಿದ್ದರು.

ಯಾವಾಗ ಸಮಯ ಸಿಕ್ಕರೂ ನಮ್ಮ ದೇಶದ ವಿವಿಧತೆ ಹಾಗೂ ಸಂಪ್ರದಾಯವನ್ನು ನೋಡುವ ಅರಿಯುವ ಪ್ರಯತ್ನ ಮಾಡಿ. ಸಾಕಷ್ಟು ಮಂದಿ ತಮ್ಮ ಊರಿನ ಐತಿಹಾಸಿಕ ಪ್ರದೇಶಗಳ ಬಗ್ಗೆ ಅರಿವೇ ಇರುವುದಿಲ್ಲ. ಹಾಗೆಯೇ ಬೆಂಗಳೂರಿನ ಧನ್​ಪಾಲ್ ಅವರು ಟ್ರಾನ್ಸ್​ಪೋರ್ಟ್​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ದರ್ಶಿನಿಯಲ್ಲಿ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ಜನರಿಗೆ ಬೆಂಗಳೂರು ದರ್ಶನ ಮಾಡುವ ಅವಕಾಶ ದೊರೆಯಿತು. ಆಗ ಒಂದು ದಿನ ಪ್ರವಾಸಿಗರೊಬ್ಬರು ಬೆಂಗಳೂರಿನಲ್ಲಿ ಸ್ಯಾಂಕಿ ಟ್ಯಾಂಕಿ ಇದೆಯಲ್ಲಾ ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವ ಪ್ರಶ್ನೆ ಕೇಳಿದ್ದರು, ಈ ವೇಳೆ ಉತ್ತರ ತಿಳಿಯದಿರುವುದಕ್ಕೆ ಧನ್ ಪಾಲ್ ಅವರಿಗೆ ತಮ್ಮ ಬಗ್ಗೆಯೇ ಬೇಸರವೆನಿಸಿತ್ತು/ ನಂತರ ಕಲಿಕೆ ಶುರು ಮಾಡಿದರು. ಶಿಲಾಲೇಖದಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ, ಈಗ ರಿಟೈರ್ ಆಗಿದ್ದರೂ ಕೂಡ ತಮ್ಮ ಅಭಿರುಚಿ ಒಂದು ಚೂರು ಕಡಿಮೆಯಾಗಿಲ್ಲ ಎಂದು ತಿಳಿಸಿದ್ದರು.

ಮೋದಿಯವರು ತಮಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಧನಪಾಲ್ ಅವರು, ನನ್ನ ಈ ಪರಿಶ್ರಮ ಪ್ರಧಾನಮಂತ್ರಿಗಳ ವರೆಗೆ ತಲುಪುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಮೋದಿಯವರು ನನ್ನ ಕೆಲಸದ ಬಗ್ಗೆ ಮಾತನಾಡುತ್ತಿದ್ದುದ್ದನ್ನು ಕೇಳುತ್ತಿದ್ದೆ. ಅವರ ಈ ಮೆಚ್ಚುಗೆ ಮತ್ತು ಮನ್ನಣೆಯೇ ನಮ್ಮ ಸುತ್ತಲಿನ ಇತಿಹಾಸವನ್ನು ಇನ್ನಷ್ಟು ಅನ್ವೇಷಿಸಲು ಪ್ರೇರಣೆಯನ್ನು ನೀಡುತ್ತಿದೆ. ಇದೀಗ ಬೆಂಗಳೂರಿನ ಸುತ್ತಮುತ್ತಲಿನ ಇತಿಹಾಸವನ್ನು ಅನ್ವೇಷಿಸಲು ನನ್ನು ಪೂರ್ಣ ಸಮಯವನ್ನು ಮೀಸಲಿಡುತ್ತೇನೆಂದು ತಿಳಿಸಿದ್ದಾರೆ.

ಈ ಹಿಂದಿನ ವರದಿಯಲ್ಲಿ ಹೇಳಿಕೆ ನೀಡಿದ್ದ ಧನಪಾಲ್ ಅವರು, ತಾವು ಶಿಲಾಶಾಸನ ಪ್ರೇಮಿಯಾಗಿದ್ದು ಹೇಗೆ ಎಂಬುದನ್ನು ವಿವರಿಸಿದ್ದರು.

ವಿಶ್ವದ ಪ್ರತೀ ಮೂಲೆ ಮೂಲೆಯಲ್ಲಿಯೂ ನಾವು ಪ್ರಯಾಣ ಮಾಡುತ್ತಲೇ ಇರುತ್ತೇವೆ. ಆದರೆ, ಸಾಕಷ್ಟು ಪ್ರದೇಶಗಳ ಬಗ್ಗೆ ನಮಗೆ ಮಾಹಿತಿಯೇ ಇರುವುದಿಲ್ಲ. ಪ್ರಮುಖವಾಗಿ ನಮ್ಮ ರಾಜ್ಯ, ನಾವು ನೆಲೆಸಿರುವ ನಗರದ ಕುರಿತಂತೆಯೇ ತಿಳಿದಿರುವುದಿಲ್ಲ. ನಗರದಲ್ಲಿರುವ ಐತಿಹಾಸಿಕ ಪ್ರದೇಶಗಳ ಕುರಿತು ನಮಗೆ ಮಾಹಿತಿ ಇರುವುದಿಲ್ಲ.

ಬಿಎಂಟಿಸಿ ಬಸ್ ಚಾಲಕನಾಗಿರುವ ಧನಪಾಲ್ ಅವರ ಜೀವನದಲ್ಲಿಯೂ ಇಂತಹುದ್ದನ್ನು ಸ್ಮರಿಸುವ ಪ್ರಸಂಗವೊಂದು ನಡೆದಿತ್ತು. ಒಂದು ದಿನ ಮಲ್ಲೇಶ್ವರಂನ ಸ್ಯಾಂಕಿ ಕೆರೆ ಸುತ್ತ ಕೆಲವು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾಗ ‘ಇದಕ್ಕೆ ‘ಸ್ಯಾಂಕಿ’ ಎಂದು ಏಕೆ ಕರೆಯುತ್ತಾರೆ?’ ಎಂದು ಪ್ರವಾಸಿಗರೊಬ್ಬರು ಕೇಳಿದ್ದರು. ಆದರೆ, ಇದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ನಮ್ಮ ಸುತ್ತಲಿನ ಇತಿಹಾಸ ತಿಳಿಯದೆ ನನಗೆ ಕೊಂಚ ಮುಜುಗರವಾಯಿತು. ಅದು ಕೆರೆಯ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಲು ಪ್ರಚೋದಿಸಿತು.

ನಂತರ ಅದಕ್ಕೆ ಎಂಜಿನಿಯರ್ ರಿಚರ್ಡ್ ಹೈರಾಮ್ ಸ್ಯಾಂಕಿಯ ಹೆಸರಿಡಲಾಗಿದೆ ಎಂದು ತಿಳಿದುಕೊಂಡೆ. ಅದರಂತೆ ಇತಿಹಾಸದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಇಂದು ಬೆಂಗಳೂರಿನ ಪ್ರತಿಯೊಂದು ಸ್ಥಳದ ಹಿಂದಿನ ಕಥೆಯನ್ನು ತಿಳಿದಿದ್ದೇನೆಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT