ಡಿ.ಕೆ ಶಿವಕುಮಾರ್ 
ರಾಜ್ಯ

ನಾನು ಎಲ್ಲೂ ಜಾತಿಗಣತಿ ವಿರೋಧಿಸಿಲ್ಲ... ಸರಿಯಾದ ಗಣತಿ ವ್ಯವಸ್ಥಿತವಾಗಿ ನಡೆಯಬೇಕೆಂದು ಬಯಸುತ್ತೇನೆ: ಡಿಕೆ ಶಿವಕುಮಾರ್

ನಾನು ಎಲ್ಲೂ ಜಾತಿಗಣತಿ ವಿರೋಧಿಸಿಲ್ಲ... ಸರಿಯಾದ ಗಣತಿ ವ್ಯವಸ್ಥಿತವಾಗಿ ನಡೆಯಬೇಕೆಂದು ಬಯಸುತ್ತೇನೆ. ನನ್ನ ಮನೆಯಿಂದಲೇ ಜಾತಿಗಣತಿಯಾಗಲಿ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ನಾನು ಎಲ್ಲೂ ಜಾತಿಗಣತಿ ವಿರೋಧಿಸಿಲ್ಲ... ಸರಿಯಾದ ಗಣತಿ ತ್ಯಂತ ವ್ಯವಸ್ಥಿತವಾಗಿ ನಡೆಯಬೇಕೆಂದು ಬಯಸುತ್ತೇನೆ. ನನ್ನ ಮನೆಯಿಂದಲೇ ಜಾತಿಗಣತಿಯಾಗಲಿ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಜಾತಿ ಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಿನ್ನ ನಿಲುವು ತಳೆದಿದ್ದಾರೆ. ವರದಿ ಬಿಡುಗಡೆಯಾಗುವುದಕ್ಕೆ ಡಿಕೆ ಶಿವಕುಮಾರ್ ಹಾಗೂ ಇತರೆ ಅನೇಕ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ನಿಲುವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಸೋಮವಾರ ಬಹಿರಂಗವಾಗಿ ಟೀಕಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಜಾತಿ ಗಣತಿ ವರದಿ ವಿರುದ್ಧ "ಎಲ್ಲಾ ಮೇಲ್ಜಾತಿಗಳ ಜನರು ಒಂದುಗೂಡಿದ್ದಾರೆ" ಎಂದು ಖರ್ಗೆ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಒಳಗೆ ಭಿನ್ನಾಭಿಪ್ರಾಯಗಳು ಇರುವುದರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದಾಗ ಖರ್ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, "ನಾನು ಎಲ್ಲಿಯೂ ವಿರೋಧಿಸಿಲ್ಲ, ನನ್ನ ಸ್ವಂತ ಮನೆ ಸೇರಿದಂತೆ ಅತ್ಯಂತ ವ್ಯವಸ್ಥಿತವಾಗಿ ಜಾತಿ ಗಣತಿ ನಡೆಯಬೇಕೆಂದು ನಾವು ಬಯಸುತ್ತೇವೆ. ನಾವು ಆರ್ಥಿಕ ಸಮೀಕ್ಷೆಯನ್ನು ನಂಬಿದ್ದೇವೆ ಮತ್ತು ನಮ್ಮ ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಿದ್ದೇವೆ. ಸಮಾಜದ ಎಲ್ಲಾ ವರ್ಗಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ನಾನು ಪತ್ರವನ್ನು ನೋಡಿದ್ದೇನೆ ಮತ್ತು ಕೇಳಿದ್ದೇನೆ ... ವರದಿಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂದು ಸಹಿ ಮಾಡದಿದ್ದರೆ ಅದು ಹೇಗೆ ಮಾನ್ಯವಾಗಿರುತ್ತದೆ? ಎಂದು ಹೇಳಿದರು.

ಸುಶೀಲ್ ಕುಮಾರ್, ಪ್ರಲ್ಹಾದ್ ಜೋಶಿ ಟೀಕೆ
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ವಿಧೇಯಕಗಳ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹಿರಿಯ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ, ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕಡೆಗಿನ ಕಾಂಗ್ರೆಸ್ ಪ್ರದರ್ಶಿಸುವ ಪ್ರೀತಿ ಒಂದು ನಾಟಕವಷ್ಟೆ. ಇದಕ್ಕೆ ಜಾತಿ ಗಣತಿ ಕುರಿತಾದ ಡಿಕೆ ಶಿವಕುಮಾರ್ ಅವರ ನಿಲುವು ಒಂದು ಉದಾಹರಣೆ ಎಂದು ಟೀಕಿಸಿದರು. ನಿಮ್ಮ ಸರ್ಕಾರವು ಜಾತಿ ಗಣತಿ ವರದಿಯನ್ನು ಯಾವಾಗ ಬಹಿರಂಗಪಡಿಸುತ್ತದೆ ಎಂದು ಮಿ. ಖರ್ಗೆ ಅವರು ನಮಗೆ ಹೇಳಬೇಕು. ವರದಿಯನ್ನು ಬಹಿರಂಗಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ರಕ್ಕೆ ಉಪ ಮುಖ್ಯಮಂತ್ರಿ ಅವರು ಸಹಿ ಹಾಕಿದ್ದಾರೆ" ಎಂದು ಕುಟುಕಿದರು. ಉಪ ಮುಖ್ಯಮಂತ್ರಿ ಮಾತ್ರವಲ್ಲದೆ, ಕಾಂಗ್ರೆಸ್‌ನ ಅನೇಕ ಶಾಸಕರು ಹಾಗೂ ವೀರಶೈವ ಮಹಾಸಭಾದ ನಾಯಕರು ಕೂಡ ಜಾತಿ ಗಣತಿ ವರದಿ ಬಹಿರಂಗಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, ಡಿಕೆ ಶಿವಕುಮಾರ್ ಮತ್ತು ಬಿಜೆಪಿ ನಾಯಕರು ಜಾತಿ ಗಣತಿ ವರದಿ ವಿರುದ್ಧವಾಗಿದ್ದಾರೆ ಎಂದರು. "ಅವರು ಕೂಡ ವಿರೋಧಿಸುತ್ತಿದ್ದಾರೆ, ನೀವು ಕೂಡ ವಿರೋಧಿಸುತ್ತಿದ್ದೀರಿ. ನೀವು ಈ ವಿಷಯದಲ್ಲಿ ಒಂದೇ ಆಗಿದ್ದೀರಿ. ಇದುವೇ ಜಾತಿಯ ಗುಣ. ಮೇಲ್ಜಾತಿಯ ಜನರು ಒಳಗೊಳಗೆ ಒಂದುಗೂಡಿರುತ್ತಾರೆ" ಎಂದು ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT