ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ವಿಮಾನದಲ್ಲಿ ವಾಲೆಟ್ ಕಳೆದುಕೊಂಡ ಪ್ರಯಾಣಿಕ, ಪತ್ತೆ ಹಚ್ಚಲು ಬಾಂಬ್ ಇದೆ ಎಂದ ಭೂಪನ ಬಂಧನ!

ಸ್ಪೈಸ್‌ಜೆಟ್‌ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ತಮ್ಮ ವಾಲೆಟ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕಾಲ್ ಸೆಂಟರ್ ಸಿಬ್ಬಂದಿಗೆ ದೂರು ನೀಡಿದ್ದಾರೆ. ಆದರೆ ತನ್ನ ದೂರನ್ನು ಗಂಭೀರವಾಗಿ...

ಬೆಂಗಳೂರು: ಸ್ಪೈಸ್‌ಜೆಟ್‌ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ತಮ್ಮ ವಾಲೆಟ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕಾಲ್ ಸೆಂಟರ್ ಸಿಬ್ಬಂದಿಗೆ ದೂರು ನೀಡಿದ್ದಾರೆ. ಆದರೆ ತನ್ನ ದೂರನ್ನು ಗಂಭೀರವಾಗಿ ಪರಿಗಣಿಸದ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಪ್ರಯಾಣಿಕ, ತನ್ನ ವಾಲೆಟ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ವಿಚಿತ್ರ ಘಟನೆ ನಡೆದಿದೆ. 

ಪ್ರಯಾಣಿಕ ಶ್ರೇಯಾಂಶ್ ಚಮಾರಿಯಾ ಅವರು ತಮ್ಮ ವ್ಯಾಲೆಟ್‌ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ನಿನ್ನೆ ಅವರನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 26 ರಂದು ಬೆಳಗ್ಗೆ 9.20 ಕ್ಕೆ ಚಮರಿಯಾ ಎಸ್‌ಜಿ 8536 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮ ವಾಲೆಟ್ ಕಾಣೆಯಾಗಿದೆ ಎಂದು ಅರಿತ ಅವರು ಗುರುಗ್ರಾಮ್‌ನಲ್ಲಿರುವ ಸ್ಪೈಸ್‌ಜೆಟ್ ಕಾಲ್ ಸೆಂಟರ್‌ಗೆ ಬೆಳಗ್ಗೆ 10.16ಕ್ಕೆ ಕರೆ ಮಾಡಿದ್ದಾರೆ. "ಕರೆಗೆ ಉತ್ತರಿಸಿದ ವ್ಯಕ್ತಿ ಅವರಿಗೆ ಎಂದಿನಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಕಾಲ್ ಅನ್ನು ಹೊಲ್ಡ್ ಮಾಡಿದ್ದಾರೆ. ತನ್ನ ಕರೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ವಾಲೆಟ್ ಮರಳಿ ಪಡೆಯಲು ಸಾಧ್ಯವಾಗದೆ ಹತಾಶನಾಗಿ, ಅದರಲ್ಲಿ ಬಾಂಬ್ ಇದೆ ಮತ್ತು ಅದನ್ನು ತಕ್ಷಣವೇ ಪತ್ತೆ ಮಾಡುವಂತೆ ಕೇಳಿಕೊಂಡಿದ್ದಾನೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಲ್ ಸೆಂಟರ್ ಸಿಬ್ಬಂದಿ ಬಾಂಬ್ ಇರುವ ಸ್ಥಳವನ್ನು ಕೇಳಿದಾಗ, ಪ್ರಯಾಣಿಕ ಚಮಾರಿಯಾ, ಹಿಂದಿಯಲ್ಲಿ ಉತ್ತರಿಸಿ, “ನಾನು ನಿಮಗೆ ಹೇಳುವುದಿಲ್ಲ. ಅದು ಯಾವಾಗ ಬೇಕಾದಾರೂ ಸ್ಫೋಟವಾಗಬಹುದು” ಎಂದು ಹೇಳಿದ್ದಾನೆ. ತಕ್ಷಣ ಸ್ಪೈಸ್ ಜೆಟ್ ಅಧಿಕಾರಿಗಳು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಸ್ಪೈಸ್ ಜೆಟ್ ಸಿಬ್ಬಂದಿ ಬೆಳಗ್ಗೆ 10.59 ಕ್ಕೆ ವಿಮಾನದೊಳಗೆ ವಾಲೆಟ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಾಹಿತಿ ನೀಡಿದ್ದು, ಅವರು ವಿಶೇಷ ಬಾಂಬ್ ಪತ್ತೆ ತಂಡವನ್ನು ಕರೆಯಿಸಿ ಪರಿಶೀಲಿಸಿ, ಹುಸಿ ಬಾಂಬ್ ಕರೆ ಎಂದು ಹೇಳಿದ್ದಾರೆ.

ಗಾರ್ಮೆಂಟ್ ವ್ಯಾಪಾರ ನಡೆಸುತ್ತಿದ್ದ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಪೊಲೀಸರು ಸ್ಪೈಸ್‌ಜೆಟ್ ಕೌಂಟರ್ ಬಳಿ ಬಂಧಿಸಿ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

Los Angeles ಭೇಟಿಗೂ ಮುನ್ನ ಟ್ರಂಪ್‌ಗೆ ಆಘಾತ; ಗಾಲ್ಫ್‌ ಮೈದಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿ ಬಂಧನ, ಹತ್ಯೆಗೆ ಸಂಚು ಶಂಕೆ..!

ಭಾರತದ ಯುವಜನತೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ: ಭಾವನಾತ್ಮಕ Video ಮೂಲಕ ಮನದಾಳದ ಮಾತು ಹಂಚಿಕೊಂಡ ಸೋನಂ ವಾಂಗ್‌ಚುಕ್‌