ರಾಜ್ಯ

ರೇಡಿಯೊಆ್ಯಕ್ಟಿವ್ ವಸ್ತುವಿನೊಂದಿಗೆ ಕೇಂಪೇಗೌಡ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ

Sumana Upadhyaya

ಬೆಂಗಳೂರು: ವಿಮಾನ ಹಾರಾಟದ ವೇಳೆ ತಮ್ಮ ಬ್ಯಾಗ್ ನಲ್ಲಿ ವಿಕಿರಣಶೀಲ ವಸ್ತುವನ್ನು ಮರೆಮಾಚಿದ್ದಕ್ಕಾಗಿ ಸುಮಾರು 30 ವರ್ಷದ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 

ಪ್ರಯಾಣಿಕ ಪ್ರಯಾಣಿಸುವಾಗ ಕೋಬಾಲ್ಟ್ ನ್ನು ಹೆಚ್ಚಿನ ಮಟ್ಟದ ರೋಂಟ್ಜೆನ್ (ವಿಕಿರಣದ ಘಟಕ) ಹೊಂದಿದ್ದು, ಇದು ಮನುಷ್ಯರಿಗೆ ಸಾಕಷ್ಟು ಅಪಾಯಕಾರಿ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಎಫ್‌ಐಆರ್‌ ದಾಖಲಿಸಿ ಆತನನ್ನು ಬಂಧಿಸಲಾಗಿದೆ.

ವಿಮಾನ ಹಾರಾಟಗಾರ ಇಂಡಿಗೋ ವಿಮಾನದ ಮೂಲಕ ನಿನ್ನೆ ಅಪರಾಹ್ನ 3 ಗಂಟೆಯ ಸುಮಾರಿಗೆ ಭುವನೇಶ್ವರದಿಂದ ಬೆಂಗಳೂರಿಗೆ ತಲುಪಿದ್ದ. ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿದ್ದಂತೆ, ವಿಮಾನ ನಿಲ್ದಾಣದೊಳಗಿನ ವಿಕಿರಣ ಸಂವೇದಕ ಬೀಪ್ ಆಗಿದೆ. ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆಗ ಕೋಬಾಲ್ಟ್ ಸಿಕ್ಕಿದ್ದು, ಅದನ್ನು ಪ್ರಯಾಣಿಕ ಎರಡು ರಾಡ್‌ಗಳ ಒಳಗೆ ಮರೆಮಾಚಿದ್ದ. ಪ್ರತಿ ರಾಡ್ 3 ಇಂಚುಗಳಷ್ಟು ಉದ್ದ ಹೊಂದಿದೆ. ಇದರಿಂದ ಹೊರಬರುವ ವಿಕಿರಣ ಸಾಕಷ್ಟು ಎಂದು ಅಧಿಕಾರಿಗಳು ಹೇಳುತ್ತಾರೆ. 

ಮೇಲ್ನೋಟಕ್ಕೆ ವ್ಯಕ್ತಿಗೆ ತಾನು ಸಾಗಿಸುತ್ತಿದ್ದ ವಸ್ತುವಿನ ಬಗ್ಗೆ ತಿಳಿದಿರಲಿಲ್ಲ. ಅವನನ್ನು ವಾಹಕವಾಗಿ ಬಳಸಿರುವ ಸಾಧ್ಯತೆಯಿದೆ. ಭಾರತದಲ್ಲಿ ವಿಮಾನ ನಿಲ್ದಾಣಗಳಲ್ಲಿ ವಿಕಿರಣಶೀಲ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಚೆಕ್-ಇನ್ ಮತ್ತು ಕ್ಯಾಬಿನ್ ಬ್ಯಾಗೇಜ್ ಎರಡರ ನಿಷೇಧಿತ ಪಟ್ಟಿಯಲ್ಲಿ ಈ ಬಗ್ಗೆ ಅಂಕಿಅಂಶಗಳಿವೆ. 

ವಿಮಾನ ನಿಲ್ದಾಣ ಪೊಲೀಸರು ಐಪಿಸಿ ಸೆಕ್ಷನ್ 284 (ವಿಷಕಾರಿ ವಸ್ತುವಿನ ಬಗ್ಗೆ ನಿರ್ಲಕ್ಷ್ಯ ವರ್ತನೆ) ಮತ್ತು 278 (ಆರೋಗ್ಯಕ್ಕೆ ಹಾನಿಕಾರಕ ವಾತಾವರಣವನ್ನು ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಇಂಡಿಗೊ ವಿಮಾನ ಸಂಸ್ಥೆ ಪ್ರತಿಕ್ರಿಯಿಸಿದೆ.

SCROLL FOR NEXT