ರಾಜ್ಯ

ದೇಗುಲಗಳ ತ್ಯಾಜ್ಯ ನಿರ್ವಹಣೆಗೆ ʻಸ್ವಚ್ಛ ಮಂದಿರ ಅಭಿಯಾನʼ ಆರಂಭಕ್ಕೆ ಮುಜರಾಯಿ ಇಲಾಖೆ ಮುಂದು!

Manjula VN

ಬೆಂಗಳೂರು: ದೇವಾಲಯಗಳನ್ನು ಸ್ವಚ್ಛವಾಗಿಡುವ ಸಲುವಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು "ಸ್ವಚ್ಛ ಮಂದಿರ ಅಭಿಯಾನವನ್ನು ಪ್ರಾರಂಭಿಸಿದೆ.

ರಾಜ್ಯದ 12 ದೇವಾಲಯಗಳಲ್ಲಿ ಆರಂಭಿಕ ಹಂತದಲ್ಲಿ ಈ ಅಭಿಯಾನವು ಫೆಬ್ರವರಿ 10 ರಂದು ಪ್ರಾರಂಭಿಸಲಾಗುತ್ತಿದೆ.

ದೇವಸ್ಥಾನಗಳಲ್ಲಿ ಸ್ವಚ್ಛ ಪರಿಸರ ಒದಗಿಸುವುದಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ ಅವರು ನೀಡಿದ ಸೂಚನೆ ಮೇರೆಗೆ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಇದರಂತೆ, ಮೊದಲ ಹಂತದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ ಪ್ರಮುಖ 12 ದೇಗುಲಗಳಲ್ಲಿ ʻಸ್ವಚ್ಛ ಮಂದಿರ ಅಭಿಯಾನʼ ಯೋಜನೆ ಪ್ರಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಶಶಿಕಲಾ ಜೊಲ್ಲೆ ಅವರು ಫೆ.10ರಂದು ಲೋಕಾರ್ಪಣೆ ಮಾಡಲಿದ್ದಾರೆ.

SCROLL FOR NEXT