ಸ್ಯಾಂಟ್ರೋ ರವಿ 
ರಾಜ್ಯ

'ಸ್ಯಾಂಟ್ರೋ ರವಿ' ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜ.17ಕ್ಕೆ ಮುಂದೂಡಿಕೆ

'ಸ್ಯಾಂಟ್ರೋ' ರವಿಯನ್ನು ಕೂಡಲೇ ಬಂಧಿಸಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿರುವ ಬೆನ್ನಲ್ಲೇ, ಮೈಸೂರಿನ 6ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸ್ಯಾಂಟ್ರೋ ರವಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿದೆ.

ಮೈಸೂರು: 'ಸ್ಯಾಂಟ್ರೋ' ರವಿಯನ್ನು ಕೂಡಲೇ ಬಂಧಿಸಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿರುವ ಬೆನ್ನಲ್ಲೇ, ಮೈಸೂರಿನ 6ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸ್ಯಾಂಟ್ರೋ ರವಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿದೆ.

ಅರ್ಜಿ ವಿಚಾರಣೆ ಗುರುವಾರ ನಡೆಯಿತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಲಾಗಿದೆ.

ಬಿಜೆಪಿ ಸಚಿವರು ಮತ್ತು ಮುಖಂಡರೊಂದಿಗೆ ನಂಟು ಹೊಂದಿರುವ ಆರೋಪ ಹಾಗೂ ಅತ್ಯಾಚಾರ ಪ್ರಕರಣವನ್ನು ಸ್ಯಾಂಟ್ರೋ ರವಿ ಎದುರಿಸುತ್ತಿದ್ದು, ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಎಂದೂ ಕೂಡ ಹೇಳಲಾಗಿದೆ.

ಸ್ಯಾಂಟ್ರೊ ರವಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಸರ್ಕಾರದ ಕೆಲವು ಸಚಿವರೊಂದಿಗೆ ಸಂಪರ್ಕ ಹೊಂದಿ ಹಲವರು ಅಕ್ರಮ ಚಟುವಟಕೆಯಲ್ಲಿ ಭಾಗಿಯಾಗಿರುವ ಸುದ್ದಿ ವ್ಯಾಪಕವಾಗಿ ಹರಡಿರುವ ಹಿನ್ನೆಲಯಲ್ಲಿ ಆತಂಕಕ್ಕೆ ಒಳಗಾಗಿರುವ ಆರೋಪಿ ಸ್ಯಾಂಟ್ರೊ ರವಿ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ಶರಣಾಗಲಿದ್ದಾನೆ ಎಂಬ ವದಂತಿ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪತ್ರಕರ್ತರು ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಏತನ್ಮಧ್ಯೆ, ರಾಮನಗರ ಬಳಿ ಪೊಲೀಸರು ಆತನ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರವಿ ನಾಪತ್ತೆಯಾದ ದಿನದಿಂದ ತಲೆಮರೆಸಿಕೊಂಡಿದ್ದ ಚಾಲಕನನ್ನು ವಿಶೇಷ ತಂಡ ಬಂಧಿಸಿದೆ. ರಾಮನಗರದ ರೆಸಾರ್ಟ್‌ನಲ್ಲಿ ಆತನನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ದೊಡ್ಡವರು, ಅವರು ಹೇಳಿದ್ದನ್ನು ನಾವು ಚಿಕ್ಕವರು ಕೇಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಮಿಕ ನುಡಿ; ರಾತ್ರಿ ಆಪ್ತ ಶಾಸಕರೊಂದಿಗೆ ಸಭೆ!

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

ತಮಿಳುನಾಡಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ: ಸಿಂಗಂ ಅಣ್ಣಾಮಲೈ ಗೆ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ!

"ದೇಶದ ಭದ್ರತೆಗೆ ಧಕ್ಕೆ ತಂದ್ರೆ ಬಿಡಲ್ಲ": ರಿಸಿನ್ ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕನಿಗೆ ಜೈಲಿನಲ್ಲಿ ಕೈದಿಗಳಿಂದ ಧರ್ಮದೇಟು; ವೈದ್ಯ ಉಗ್ರ ಆಸ್ಪತ್ರೆಗೆ ದಾಖಲು!

News headlines 21-11-2025| CM ಬದಲಾವಣೆ ವಿಷಯ; ಶಾಸಕರಿಗೆ ಹೈಕಮಾಂಡ್ ಮಹತ್ವದ ಸೂಚನೆ; ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ; ಹಡಗು ನಿರ್ಮಾಣ, ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಬ್ಬರ ಬಂಧನ

SCROLL FOR NEXT