ರಾಜ್ಯ

ಚಿಕ್ಕಮಗಳೂರು: ಕೀಟನಾಶಕ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ, ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ಪೊಲೀಸರು

Ramyashree GN

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

17 ವರ್ಷದ ಸಂತ್ರಸ್ತೆ ಡೆತ್ ನೋಟ್ ಬರೆದಿಟ್ಟಿದ್ದು, ಆತ್ಮಹತ್ಯೆಗೆ ಆರೋಪಿ ನಿತೇಶ್ ಕಾರಣ ಎಂದು ಆರೋಪಿಸಿದ್ದಾಳೆ.

ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆ, ಕೀಟನಾಶಕ ಸೇವಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಜನವರಿ 14 ರಂದು ಮೃತಪಟ್ಟಿದ್ದಳು.

ತಾನು ಪ್ರೀತಿಸುತ್ತಿದ್ದೇನೆ ಎಂದು ನಿತೇಶ್ ಸುಳ್ಳು ಹೇಳಿದ್ದಾನೆ. ಅಲ್ಲದೆ, ತನಗೆ ಮೋಸ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.

ದೀಪ್ತಿ ಜ.10ರಂದು ಕೀಟನಾಶಕ ಸೇವಿಸಿದ್ದು, ಆಕೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರಂಭದಲ್ಲಿ, ಕುದುರೆಮುಖ ಪೊಲೀಸರು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ ಎಂದು ಆಕೆಯ ಕುಟುಂಬ ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮಧ್ಯಪ್ರವೇಶಿಸಿದ ನಂತರವೇ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪೋಷಕರು ಪೊಲೀಸರಿಗೆ ಒತ್ತಾಯಿಸಿದ್ದರು.

ನಿತೇಶ್ ಮತ್ತು ಸಂತ್ರಸ್ತೆ ಜಗಳವಾಡುತ್ತಿದ್ದರು.  ಮತ್ತು ಆಕೆಯ ಕರೆಗೆ ಉತ್ತರಿಸುವುದನ್ನು ನಿತೇಶ್ ನಿಲ್ಲಿಸಿದ್ದರು. ತನಿಖೆಯಿಂದ ಅವರ ಮೇಲಿನ ಆರೋಪಗಳ ಬಗ್ಗೆ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT