ನ್ಯಾಯಾಧೀಶರು ಮತ್ತು ವಕೀಲರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ. 
ರಾಜ್ಯ

ಕನ್ನಡದ ಕಾನೂನು ನಿಘಂಟು ಸಿದ್ಧಪಡಿಸಲು ತಜ್ಞರ ಸಮಿತಿ ರಚನೆ: ಸಿಎಂ ಬೊಮ್ಮಾಯಿ

ವಿವಿಧ ನ್ಯಾಯಾಲಯಗಳು ಕನ್ನಡದಲ್ಲಿ ತೀರ್ಪು ನೀಡಬೇಕು ಎಂದು ಒತ್ತಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಲವು ಪ್ರಕರಣಗಳಲ್ಲಿ ಇದರ ಕೊರತೆಯಿಂದ ಗೊಂದಲ ಉಂಟಾಗಿದೆ. ತೀರ್ಪುಗಳು ಮತ್ತು ಆದೇಶಗಳನ್ನು ಕನ್ನಡದಲ್ಲಿ ಭಾಷಾಂತರಿಸಲು ಅವಕಾಶವಿರಬೇಕು ಎಂದು ಭಾನುವಾರ ಹೇಳಿದರು.

ಬೆಂಗಳೂರು: ವಿವಿಧ ನ್ಯಾಯಾಲಯಗಳು ಕನ್ನಡದಲ್ಲಿ ತೀರ್ಪು ನೀಡಬೇಕು ಎಂದು ಒತ್ತಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಲವು ಪ್ರಕರಣಗಳಲ್ಲಿ ಇದರ ಕೊರತೆಯಿಂದ ಗೊಂದಲ ಉಂಟಾಗಿದೆ. ತೀರ್ಪುಗಳು ಮತ್ತು ಆದೇಶಗಳನ್ನು ಕನ್ನಡದಲ್ಲಿ ಭಾಷಾಂತರಿಸಲು ಅವಕಾಶವಿರಬೇಕು ಎಂದು ಭಾನುವಾರ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಾಧೀಶರು ಮತ್ತು ವಕೀಲರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದಿನನಿತ್ಯ ನ್ಯಾಯಾಲಯದಲ್ಲಿ ಕನ್ನಡದ ಬಳಕೆಯಾಗಲು ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು. ಸಮಾನಾಂತರ ಕನ್ನಡ ಶಬ್ದಗಳು ರಚನೆಯಾದರೆ ಅವುಗಳನ್ನು ಬಳಸಲು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ. ಹಲವಾರು ಇಂಗ್ಲಿಷ್ ಶಬ್ಧಗಳಿಗೆ ನೇರವಾದ ಕನ್ನಡದ ಪದಗಳಿಲ್ಲ. ಮಾತೃಭಾಷೆಯಲ್ಲಿ ತೀರ್ಪು ಬರುವ ಅವಶ್ಯಕತೆ ಇದೆ.

ದಿನನಿತ್ಯದ ಆಧಾರದ ಮೇಲೆ ಅನೇಕ ಕಾನೂನು ಪದಗಳನ್ನು ಬಳಸಲಾಗುತ್ತದೆ. ಕೆಲವು ಕಾನೂನು ಪರಿಭಾಷೆಗಳಿಗೆ ಕನ್ನಡ ಪದಗಳನ್ನು ಬಳಸಬಹುದಾದ ನಿಘಂಟನ್ನು ಪ್ರಕಟಿಸುವ ಅವಶ್ಯಕತೆಯಿದೆ. ಇದು ನ್ಯಾಯಾಧೀಶರು ಮತ್ತು ಇತರರಿಗೆ ಸಹಾಯ ಮಾಡುತ್ತದೆ. ಹಲವು ತೀರ್ಪುಗಳಿಗೆ ಕನ್ನಡದಲ್ಲಿ ಸಮಾನ ಪದಗಳಿಲ್ಲ. ಕಾನೂನು ಜ್ಞಾನ ಕೇವಲ ವಕೀಲರಿಗೆ ಮಾತ್ರ ಸೀಮಿತವಾಗದೆ ಆಡಳಿತಾಧಿಕಾರಿಗಳಿಗೂ ಲಭ್ಯವಾಗುವಂತೆ ಮಾಡಬೇಕು. ಕನ್ನಡದಲ್ಲಿ ತೀರ್ಪು ಅಥವಾ ಆದೇಶಗಳನ್ನು ನೀಡುವುದು ಸುಲಭದ ಕೆಲಸವಲ್ಲ ಎಂದು ಹೇಳಿದರು.

“ಪ್ರಕರಣಗಳ ತೀರ್ಪು ಕನ್ನಡದಲ್ಲಿ ಬಾರದಿದ್ದರೆ ಎಷ್ಟೊ ಸಮಸ್ಯೆಗಳಾಗುತ್ತವೆ. ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆಗೊಳಿಸುವ ವ್ಯವಸ್ಥೆಯಾಗಬೇಕು. ಅವುಗಳನ್ನು ಎಲ್ಲಾ ನ್ಯಾಯಾಲಯಗಳ ಗ್ರಂಥಾಲಯಗಳಿಗೆ ಕಳುಹಿಸಬೇಕು. ಕನಿಷ್ಠ ಪಕ್ಷ ತರ್ಜುಮೆಯಾದ ತೀರ್ಪುಗಳನ್ನು ನೋಡಿಕೊಳ್ಳುವ ಅವಕಾಶವಿರಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT