ಬಳ್ಳಾರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಕಾಡಬೊಮ್ ಹೇಡರ್ ನಾಯಿ 
ರಾಜ್ಯ

ಬಳ್ಳಾರಿ ಉತ್ಸವದಲ್ಲಿ ಅಪರೂಪದ 20 ಕೋಟಿ ರೂ. ಬೆಲೆ ಬಾಳುವ ಶ್ವಾನ, ನೋಡಲು ಮುಗಿಬಿದ್ದ ಜನ

ಬಳ್ಳಾರಿ ಉತ್ಸವದ ಎರಡನೇ ದಿನವಾದ ಭಾನುವಾರ, ಬೆಂಗಳೂರಿನ ಸತೀಶ್ ಎಂಬುವವರ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ದೇಶದ ಅತ್ಯಂತ ದುಬಾರಿ ನಾಯಿಯಾದ ಕಕೇಶಿಯನ್ ಶೆಫರ್ಡ್ (Caucasian shepherd) ಜಾತಿಗೆ ಸೇರಿದ ಶ್ವಾನವನ್ನು ನೋಡಲು ಸಾವಿರಾರು ಜನರು ನೆರೆದಿದ್ದರು.

ಬಳ್ಳಾರಿ: ಬಳ್ಳಾರಿ ಉತ್ಸವದ ಎರಡನೇ ದಿನವಾದ ಭಾನುವಾರ, ಬೆಂಗಳೂರಿನ ಸತೀಶ್ ಎಂಬುವವರ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ದೇಶದ ಅತ್ಯಂತ ದುಬಾರಿ ನಾಯಿಯಾದ ಕಕೇಶಿಯನ್ ಶೆಫರ್ಡ್ (Caucasian shepherd) ಜಾತಿಗೆ ಸೇರಿದ ಶ್ವಾನವನ್ನು ನೋಡಲು ಸಾವಿರಾರು ಜನರು ನೆರೆದಿದ್ದರು.

ಕಾಡಬೊಮ್ ಹೇಡರ್ (Cadabom Hayder) ಎಂಬ ನಾಯಿಯು 14 ತಿಂಗಳಿನದ್ದಾಗಿದ್ದು, ಭಾರತದಲ್ಲಿ ಅಪರೂಪದ ತಳಿಯಾಗಿದೆ. ಇತ್ತೀಚೆಗೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ನಾಯಿಗಾಗಿ 20 ಕೋಟಿ ರೂ. ನೀಡಿ ಖರೀದಿಸಲು ಮುಂದಾಗಿದ್ದರು ಎಂದು ಸತೀಶ್ ಹೇಳಿದ್ದಾರೆ. 

ಸದ್ಯ, 'ಇದು ದೇಶದ ಅತ್ಯಂತ ದುಬಾರಿ ನಾಯಿಯಾಗಿದೆ. ಅದರ ನಿರ್ವಹಣೆಗೆ ನಾನು ಪ್ರತಿದಿನ ಸುಮಾರು 2,000 ರೂ. ಖರ್ಚು ಮಾಡುತ್ತೇನೆ. ನಾವು ಅದನ್ನು ಬೆಂಗಳೂರಿನಿಂದ ಬಳ್ಳಾರಿಗೆ ಅತ್ಯಾಧುನಿಕ, ಹವಾನಿಯಂತ್ರಿತ ಕಾರಿನಲ್ಲಿ ಸಾಗಿಸಿದ್ದೇವೆ. ಈ ಹಿಂದೆ ನನ್ನ ಬಳಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಕೊರಿಯನ್ ದೋಸ ಮಾಸ್ಟಿಫ್ ಮತ್ತು 8 ಕೋಟಿ ರೂಪಾಯಿ ಮೌಲ್ಯದ ಅಲಾಸ್ಕನ್ ಮಲಾಮುಟ್ ಇತ್ತು. ನನ್ನ ಬಳಿ ಎರಡು ಕಕೇಶಿಯನ್ ಶೆಫರ್ಡ್ ನಾಯಿಮರಿಗಳಿವೆ ಮತ್ತು ಜನರು ಅವುಗಳನ್ನು ತಲಾ 5 ಕೋಟಿ ರೂಪಾಯಿಗೆ ಮಾರಾಟ ಮಾಡುವಂತೆ ಕೇಳುತ್ತಿದ್ದಾರೆ' ಎಂದು ಅವರು ಹೇಳಿದರು.

ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಸತೀಶ್ ಅವರಿಗೆ ಮನವಿ ಮಾಡಿದ್ದೆವು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಮೂರು ನಾಯಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು. ಶ್ವಾನ ಪ್ರದರ್ಶನದಲ್ಲಿ ಐವತ್ತೈದು ತಳಿಯ ಶ್ವಾನಗಳು ಭಾಗವಹಿಸಿದ್ದವು.

ಕುತೂಹಲಗೊಂಡ ಸ್ಥಳೀಯ ಶಾಸಕ ಸೋಮಶೇಖರ್ ರೆಡ್ಡಿ ಕೂಡ ಕಾಡಬೊಮ್ ಹೇಡರ್ ಜೊತೆ ಫೋಟೋ ತೆಗೆಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT