ರಾಜ್ಯ

ವಿದೇಶದಲ್ಲಿರುವ ಮಕ್ಕಳಿಗೆ ಕೊಡವ ಭಾಷೆ ಕಲಿಸಲು ಆನ್'ಲೈನ್ ವೇದಿಕೆ ಸೃಷ್ಟಿ

Manjula VN

ಮಡಿಕೇರಿ: ಕೊಡಗಿನ ಹೊರಗೆ ನೆಲೆಸಿರುವ ಮಕ್ಕಳಲ್ಲಿ ಮಾತೃಭಾಷೆಯ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯು ಆನ್‌ಲೈನ್ ವೇದಿಕೆಯೊಂದನ್ನು ಸೃಷ್ಟಿಸಿದೆ.

'ಉಂಬಕ್ ಎಂತಾ' ಎಂಬ ಆನ್'ಲೈನ್ ವೇದಿಕೆಯನ್ನು ಸೃಷ್ಟಿಸಲಾಗಿದ್ದು, ಇಲ್ಲಿ ಮಕ್ಕಳಿಗೆ 'ಕೊಡವ ತಕ್ಕ್' (ಕೊಡವ ಭಾಷೆ) ಪಾಠಗಳನ್ನು ಹೇಳಿಕೊಡಲಾಗುತ್ತಿದೆ.

"ದುಬೈನಲ್ಲಿ ವಾಸಿಸುವ ನನ್ನ ಅಳಿಯ ಮತ್ತು ಸೊಸೆಯಂದಿರು ಕೊಡಗಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ, ಆದರೆ, ಅವರಿಗೆ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದು ತಿಳಿಯುತ್ತಿರಲಿಲ್ಲ. ಇದರಿಂದ ವಯಸ್ಸಾದವರ ಜೊತೆಗೆ ಸಂವಹನದ ಕೊರತೆ ಎದುರಾಗಿ ಅಂತರಕ್ಕೆ ಕಾರಣವಾಗುತ್ತಿತ್ತು. ಮೊದಲಿಗೆ ನಾನು ಅವರಿಗೆ ನಮ್ಮ ಕೊಡವ ಭಾಷೆಯನ್ನು ಕಲಿಸಲು ಆರಂಭಿಸಿದ್ದೆ. ಇದೀಗ ಮತ್ತಷ್ಟು ಜನರಿಗೆ ಕಲಿಸಲು ಮುಂದಾಗಿದ್ದೇನೆಂದು 'ಉಂಬಕ್ ಎಂತಾ' ಆನ್‌ಲೈನ್ ವೇದಿಕೆ ಸಂಸ್ಥಾಪಕ ಕಳೆಂಗ ಬೋಪಣ್ಣ ವಿವರಿಸಿದ್ದಾರೆ.

ಕೆಲ ವಿಷಯಗಳನ್ನು ಹಿಡಿದು ಫುಡ್ ಬ್ಲಾಗ್ ನಲ್ಲಿ ಬರೆಯುತಿದ್ದ ಕಳೆಂಗ ಬೋಪಣ್ಣ ಅವರ ಪತ್ನಿ ಶಿಲ್ಪಾ ಬೋಪಣ್ಣ ಅವರು ಕೂಡ ಪತಿಯೊಂದಿಗೆ ಕೈಜೋಡಿಸಿದ್ದಾರೆ.

ಕನಿಷ್ಠ ಶುಲ್ಕದೊಂದಿಗೆ, 5 ರಿಂದ 15 ವರ್ಷದೊಳಗಿನ ಮಕ್ಕಳು ಆನ್‌ಲೈನ್ ಪಾಠಗಳನ್ನು ಕೇಳಬಬಹುದಾಗಿದೆ. ಈ ಮೂಲಕ ಅವರ ಮಾತೃಭಾಷೆಯನ್ನು ಕಲಿಯಬಹುದು. ತರಗತಿಯ ಮೊದಲ ತಿಂಗಳು ಮೂಲ ಕೊಡವ ಪದಗಳಿಂದ ಹಿಡಿದು ಸಂಖ್ಯೆಗಳವರೆಗೆ ಇರುತ್ತದೆ. ಈ ಪಾಠವು ಭಾಷೆಯ ಮೂಲಭೂತ ಜ್ಞಾನದ ಸುತ್ತ ಸುತ್ತುತ್ತದೆ ಎಂದು ಕಳೆಂಗ ಬೋಪಣ್ಣ ಮಾಹಿತಿ ನೀಡಿದ್ದಾರೆ.

"ಫೆಬ್ರವರಿ 4 ರಿಂದ ತರಗತಿಗಳು ಪ್ರಾರಂಭವಾಗಲಿದ್ದು, ಒಟ್ಟು 31 ವಿದ್ಯಾರ್ಥಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಅಮೆರಿಕಾ, ಬ್ರಿಟನ್ ಮತ್ತು ಹಾಂಗ್ ಕಾಂಗ್ ನಲ್ಲಿನವರು ಹೆಚ್ಚು ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ನಿಂದಲೂ ಕೆಲವರು ನೋಂದಾಯಿಸಿಕೊಂಡಿದ್ದಾರೆ.

ಈ ವೇದಿಕೆಯಲ್ಲಿ ಕೊಡವ ಥಾಕ್ ಕಲಿಸುವುದರ ಜೊತೆಗೆ, ಕೊಡವ ಸಮುದಾಯದ 'ಪದ್ದತಿಗಳು', ಆಚರಣೆಗಳನ್ನು ಬೋಧಿಸಲಾಗುತ್ತದೆ. "ಆನ್‌ಲೈನ್ ತರಗತಿಗಳು ವಾರದಲ್ಲಿ ಒಂದು ಗಂಟೆಗಳ ಕಾಲ ನಡೆಯಲಿದೆ. ಆದರೆ, ನಾಲ್ಕನೇ ವಾರದಲ್ಲಿ ನಾವು ಕೊಡವ ಸಮುದಾಯದ ಆಚಾರ-ವಿಚಾರ ಮತ್ತು ಸಂಸ್ಕೃತಿಯ ಬಗ್ಗೆ ತರಗತಿ ಪಾಠ ಮಾಡುತ್ತೇವೆಂದು ತಿಳಿಸಿದ್ದಾರೆ.

"ನೋಂದಣಿ ಮಾಡುವವರಲ್ಲಿ ಹೆಚ್ಚಿನವರು ಮಕ್ಕಳೇ ಇದ್ದರೂ ನಾಲ್ವರು ವಯಸ್ಕರು ಮಾತೃಭಾಷೆಯನ್ನು ಕಲಿಸಲು ನಮ್ಮೊಂದಿಗಿದ್ದಾರೆ. ಭಾಷಾ ತರಗತಿಗಳನ್ನು ಭಾಷೆಯನ್ನು ಚೆನ್ನಾಗಿ ತಿಳಿದಿರುವ ಗೃಹಿಣಿಯರು ಕಲಿಸುತ್ತಾರೆ. ಸಂಸ್ಕಾರಗಳ ತರಗತಿಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT