ಗೃಹ ಸಚಿವ ಡಾ. ಜಿ ಪರಮೇಶ್ವರ್‌ 
ರಾಜ್ಯ

ಜೈನ ಮುನಿಗಳ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ; ಗೃಹ ಸಚಿವ ಡಾ. ಜಿ ಪರಮೇಶ್ವರ್‌

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಸೋಮವಾರ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಸೋಮವಾರ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿಗಳ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಜೈನ ಮುನಿಗಳ ಹತ್ಯೆ ಪ್ರಕರಣದಲ್ಲಿ ಯಾರೂ ರಾಜಕೀಯ, ತಾರತಮ್ಯ ಮಾಡುವುದಿಲ್ಲ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದು ಸ್ವಾಭಾವಿಕ ಪದ್ದತಿ, ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕೂಳಿತಿದ್ದಾರೆ. ಅವರ ಬೇಡಿಕೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.

ನಮ್ಮ ಗೃಹ ಇಲಾಖೆ ಸಮರ್ಥವಾಗಿದೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು ತನಿಖೆ ಶುರುವಾಗಿದೆ. ಪ್ರಕರಣವನ್ನು ಸಿಬಿಐಗೆ ನೀಡುವ ಅಗತ್ಯ ಇಲ್ಲ. ಗೃಹ ಇಲಾಖೆಯೇ ಸಮರ್ಥವಾಗಿದೆ. ನಮ್ಮ ಇಲಾಖೆಯ ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದರು.

ಸುಮ್ಮನೆ ನಮ್ಮ ವಿರುದ್ಧ ಅಪವಾದ ಹೊರಿಸುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಅವರಲ್ಲಿ ಆಂತರಿಕ ಒಳಜಗಳ ಇದೆ‌. ಅವರಿಗೆ ಎಷ್ಟರ ಮಟ್ಟಿಗೆ ಜವಾಬ್ದಾರಿ ಇದೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

Iran War: 'ಮಾತುಕತೆ ಪ್ರಶ್ನೆಯೇ ಇಲ್ಲ.. ಅಮೆರಿಕ, ಇಸ್ರೇಲ್ ಶರಣಾಗಲೇಬೇಕು..': Mojtaba Khamenei ಎಚ್ಚರಿಕೆ

KD ಚಿತ್ರ ವಿವಾದ: 'ಅನುವಾದ ಮಾತ್ರ ನನ್ನದು.. ಹಾಡು ಪ್ರೇಮ್ ಅವರದ್ದು..' 'ಇದೊಂದರಿಂದ ಅವಮಾನವಾಗುತ್ತಿದೆ'..: ಗೀತ ರಚನೆಕಾರ ಶಾಕಿಂಗ್ ಹೇಳಿಕೆ

ಯಾರಾಗಲಿದ್ದಾರೆ ಭಾರತದ ಮುಂದಿನ CDS?: ಇಲ್ಲಿದೆ ಮಾಹಿತಿ

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

SCROLL FOR NEXT