ಪ್ರಮುಖ ಆರೋಪಿ 'ಜೋಕರ್' ಫೆಲಿಕ್ಸ್ ಮತ್ತು ಆತನ ಸಹಚರರನ್ನು ಪೊಲೀಸರು ಬುಧವಾರ ಬಂಧಿಸಲಾಗಿದೆ 
ರಾಜ್ಯ

ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಕೇಸು: ರ್ಯಾಪರ್, ಮಾಡೆಲ್ ಎಂದು ಜೋಕರ್ ಅನುಕರಣೆ ಮಾಡುತ್ತಿದ್ದ ಆರೋಪಿ ಫೆಲಿಕ್ಸ್

ಮೊನ್ನೆ ಮಂಗಳವಾರ ಸಂಜೆ ಹೊತ್ತಿಗೆ ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಬರೀಶ್ ಅಲಿಯಾಸ್ ಫೆಲಿಕ್ಸ್ (27 ವ) 12 ವರ್ಷಗಳಿಂದ ತನ್ನ ಬ್ರಾಡ್‌ಬ್ಯಾಂಡ್ ಕಂಪನಿ ಗ್ನೆಟ್ ಬ್ರಾಡ್‌ಬ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. 

ಬೆಂಗಳೂರು: ಮೊನ್ನೆ ಮಂಗಳವಾರ ಸಂಜೆ ಹೊತ್ತಿಗೆ ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಬರೀಶ್ ಅಲಿಯಾಸ್ ಫೆಲಿಕ್ಸ್ (27 ವ) 12 ವರ್ಷಗಳಿಂದ ತನ್ನ ಬ್ರಾಡ್‌ಬ್ಯಾಂಡ್ ಕಂಪನಿ ಗ್ನೆಟ್ ಬ್ರಾಡ್‌ಬ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. 

ಫೆಲಿಕ್ಸ್ ಶಾಲೆಗೆ ಹೋಗುವುದು ಬಿಟ್ಟ ನಂತರ ಸ್ವಯಂ ಘೋಷಿತ ಕನ್ನಡ ರಾಪರ್ ಮತ್ತು ಮಾಡೆಲ್ ಆಗಿದ್ದನು. "ಜೋಕರ್ ಎಂಬ ಮಾನಿಕರ್ ನ್ನು ತನ್ನ ಆನ್ ಲೈನ್ ವೇದಿಕೆಯ ಹೆಸರನ್ನಾಗಿ ಮಾಡಿಕೊಂಡಿದ್ದನು. ಆತನ Instagram ಪ್ರೊಫೈಲ್ ನಲ್ಲಿ joker_felix_rapper_ ಹೆಸರಿನೊಂದಿಗೆ, 16,600 ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾನೆ. 9,000 ಚಂದಾದಾರರನ್ನು ಹೊಂದಿರುವ JK media ಎಂಬ YouTube ಚಾನಲ್ ನ್ನು ಸಹ ಹೊಂದಿದ್ದಾನೆ. 

ಆತನ ಅನೇಕ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಫೆಲಿಕ್ಸ್  'ದಿ ಡಾರ್ಕ್ ನೈಟ್' (2008) ಚಿತ್ರದಲ್ಲಿ ಅಪರಾಧದ ಸೈಕೋಪಾಥಿಕ್ ಕ್ಲೌನ್ ಪ್ರಿನ್ಸ್ - ಜೋಕರ್ ಆಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪಾತ್ರದಲ್ಲಿ ಪೌರಾಣಿಕ ನಟ ಹೀತ್ ಆಂಡ್ರ್ಯೂ ಲೆಡ್ಜರ್ ನ್ನು ಅನುಕರಿಸಿ ಮಾಡಿದ್ದೇ ಹೆಚ್ಚಾಗಿದೆ. ಗ್ನೆಟ್ ಬ್ರಾಡ್‌ಬ್ಯಾಂಡ್ ವ್ಯವಹಾರವನ್ನು ವಿಸ್ತರಿಸಲು ಕಾಶಿಗೆ ಸಹ ಹೋಗಿ ಬಂದಿದ್ದ. ಅಂದಿನಿಂದ ಅವನ ಮುಖ ಮತ್ತು ದೇಹದ ಮೇಲೆ ಬೂದಿ ಬಳಿದುಕೊಂಡಿದ್ದ. ವಾರಣಾಸಿಯ ಗಂಗಾನದಿಯಲ್ಲಿ ಬೋಟ್‌ನಲ್ಲಿ ಪೋಸ್ ಮಾಡುತ್ತಾ ಯೂಟ್ಯೂಬ್‌ನಲ್ಲಿ ಕನ್ನಡ ರಾಪ್ ಹಾಡು ‘ನಾನ್ ಶಿವ’ ನ್ನು ಹಾಡಿದ್ದ. 

ಡಬಲ್ ಮರ್ಡರ್ ಮಾಡಿದ ತಕ್ಷಣ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಎರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಇಒ ವಿನು ಕುಮಾರ್ ಅವರ ಅವಳಿ ಕೊಲೆಗಳ ಪ್ರಾದೇಶಿಕ ಟಿವಿ ಸುದ್ದಿ ಕ್ಲಿಪ್ಪಿಂಗ್ ನ್ನು ಪೋಸ್ಟ್ ಮಾಡಿದ್ದಾರೆ. 

ಅಮೃತಹಳ್ಳಿಯಲ್ಲಿ ಹಗಲು ಹೊತ್ತಿನಲ್ಲಿ ತಣ್ಣೀರೆರಚಿ ಕೊಲೆ ಮಾಡುವ ಕೆಲವೇ ಗಂಟೆಗಳ ಮೊದಲು ಫೆಲಿಕ್ಸ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ  “ಜನರು ಯಾವಾಗಲೂ ಹೊಗಳುತ್ತಾರೆ ಮತ್ತು ಮೋಸ ಮಾಡುತ್ತಾರೆ. ಹಾಗಾಗಿ ನಾನು ಈ ಗ್ರಹದ ಜನರನ್ನು ನೋಯಿಸುತ್ತೇನೆ. ನಾನು ಕೆಟ್ಟ ಜನರನ್ನು ಮಾತ್ರ ನೋಯಿಸುತ್ತೇನೆ. ನಾನು ಯಾವುದೇ ಒಳ್ಳೆಯ ಜನರನ್ನು ನೋಯಿಸಲಿಲ್ಲ (sic)” ಎಂದು ಬರೆದುಕೊಂಡಿದ್ದಾನೆ.

ಈತ ಇತ್ತೀಚೆಗೆ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದ್ದು ಅದರ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!