ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ನಗರದಲ್ಲಿ ಕೇವಲ 1.9 ಲಕ್ಷ ಕಟ್ಟಡಗಳಲ್ಲಿ ಮಾತ್ರ ಮಳೆನೀರು ಕೊಯ್ಲು ಅಳವಡಿಕೆ!

2021 ರಲ್ಲಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿ 60×40 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಮಳೆನೀರನ್ನು ಕೊಯ್ಲನ್ನು ಆಂತರಿಕ ಉದ್ದೇಶಗಳಿಗಾಗಿ ಬಳಸುವುದು ಕಡ್ಡಾಯ ಮಾಡಲಾಗಿತ್ತು.

ಬೆಂಗಳೂರು: 2021 ರಲ್ಲಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿ 60×40 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಮಳೆನೀರನ್ನು ಕೊಯ್ಲನ್ನು ಆಂತರಿಕ ಉದ್ದೇಶಗಳಿಗಾಗಿ ಬಳಸುವುದು ಕಡ್ಡಾಯ ಮಾಡಲಾಗಿತ್ತು.

ಇಲ್ಲಿಯವರೆಗೆ, ಬೆಂಗಳೂರಿನಲ್ಲಿ ಕೇವಲ 1,93,186 ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಮಳೆನೀರು ಕೊಯ್ಲು (RWH) ವ್ಯವಸ್ಥೆಯನ್ನು ಸ್ಥಾಪಿಸಿವೆ. ಹೆಚ್ಚುವರಿ ವೆಚ್ಚ ಮತ್ತು ಸರ್ಕಾರದ ಸಹಾಯಧನದ ಅಲಭ್ಯತೆ ಕಾರಣ ನೀಡಿ ನಾಗರಿಕರು ಮಳೆ ನೀರು ಕೊಯ್ಲು ಘಟಕವನ್ನು ಇನ್ನೂ ಸ್ಥಾಪನೆ ಮಾಡಿಲ್ಲ. 

39,146 ಘಟಕಗಳು ಕಾನೂನಿನ ಪ್ರಕಾರ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಿಲ್ಲ. ಹೀಗಾಗಿ ಅದರ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಅಲ್ಲದೆ, ಕೆಲವು ಮಾಲೀಕರು ಮತ್ತು ಹೌಸಿಂಗ್ ಸೊಸೈಟಿಗಳು ಭಾರಿ ದಂಡವನ್ನು ತಪ್ಪಿಸಲು ಮೂಲಭೂತ, ಅವೈಜ್ಞಾನಿಕ ವ್ಯವಸ್ಥೆಗಳನ್ನು ಮಾತ್ರ ಸ್ಥಾಪಿಸಿವೆ ಎಂದು ಆರ್‌ಡಬ್ಲ್ಯೂಹೆಚ್ ಸಿಸ್ಟಮ್‌ಗಳನ್ನು ಸ್ಥಾಪಿಸುವಲ್ಲಿ ತೊಡಗಿರುವವರು ಹೇಳುತ್ತಾರೆ. 

ಟೆರಾಗ್ರೀನ್‌ನ ಮಾಲೀಕ ಅನೂಪ್ ವಯತ್, TNIE ಜೊತೆ ಮಾತನಾಡಿ, ಪರಿವರ್ತನೆ ದರವು ತುಂಬಾ ಕಡಿಮೆಯಾಗಿದೆ. ಅತಿ ಕಡ್ಡಾಯ ಮತ್ತು ಪರಿಸ್ಥಿತಿ ಪ್ರತಿಕೂಲವಾದಾಗ ಮಾತ್ರ ಮಳೆನೀರು ಕೊಯ್ಲಿನಲ್ಲಿ ಹೂಡಿಕೆ ಮಾಡುವುದನ್ನು ನಾವು ನೋಡುತ್ತೇವೆ. ಒಂದು ಪ್ರಮುಖ ಕಾರಣವೆಂದರೆ ಹೌಸಿಂಗ್ ಸೊಸೈಟಿಗಳು 5-10 ಲಕ್ಷ ರೂಪಾಯಿಗಳನ್ನು ಅಥವಾ ಸಣ್ಣ ಮನೆ ಮಾಲೀಕರಿಗೆ 30,000 ರೂಪಾಯಿಗಳನ್ನು ಅಂತಹ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಅವರು ಇದನ್ನು ದೀರ್ಘಾವಧಿಯ ಹೂಡಿಕೆಯಾಗಿ ನೋಡುವುದಿಲ್ಲ ಎನ್ನುತ್ತಿದ್ದಾರೆ. 

ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ ನಗರದಲ್ಲಿ ಒಟ್ಟು 1,95,31,000 ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಹೊಸ ಕಟ್ಟಡಗಳು ಅಳವಡಿಸಬೇಕಿರುವುದರಿಂದ ಹಳೆಯ ಕಟ್ಟಡಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಅನೇಕರು ನೆಪಮಾತ್ರದ ಆರ್‌ಎಚ್‌ಡಬ್ಲ್ಯೂ ಸಿಸ್ಟಮ್‌ಗಳನ್ನು ಅಳವಡಿಸಿದ್ದಾರೆ, ಅಲ್ಲಿ ಟೆರೇಸ್‌ನಿಂದ ಪೈಪ್ ನ್ನು ನೆಲದಲ್ಲಿ ಇರಿಸಲಾಗಿದೆ ಆದರೆ ಬಾವಿಗಳು ರೀಚಾರ್ಜ್ ಆಗುತ್ತಿಲ್ಲ, ಮಣ್ಣಿನ ವಿವಿಧ ಪದರಗಳನ್ನು ಭೂಗತ ಪಿಟ್‌ಗೆ ಹಾಕಲಾಗಿಲ್ಲ ಆದ್ದರಿಂದ ಪ್ರಯತ್ನವು ಫಲಪ್ರದವಲ್ಲ ಅವೈಜ್ಞಾನಿಕವಾಗಿದೆ ಎಂದು ಶ್ರೀನಿವಾಸ್ ರವೀಂದ್ರನ್ ಹೇಳಿದರು. 

ಚಿತ್ರವಿನಾ ಎನ್ ರವಿಕಿರಣ್, ಸಿಇಒ, ಪ್ಲಾನೆಟ್ ಸಿಂಫನಿ ಪರಿಸರ ವಕೀಲರ ಗುಂಪು, "ನಾಗರಿಕರಿಗೆ ತೆರಿಗೆ ವಿನಾಯಿತಿ ಅಥವಾ ತೆರಿಗೆ ಕಡಿತವನ್ನು ನೀಡಬಹುದು. ಅದನ್ನು ಪರಿಸರ ಪ್ರೋತ್ಸಾಹ ಎಂದು ಕರೆಯಬಹುದು. ಮಳೆ ನೀರು ಕೊಯ್ಲು ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಲು ಸಾರ್ವಜನಿಕರನ್ನು ಪ್ರೋತ್ಸಾಹಿಸಬಹುದು. ಮಳೆ ನೀರು ಕೊಯ್ಲಿನ ದೀರ್ಘಕಾಲೀನ ಪ್ರಭಾವದ ಬಗ್ಗೆ ನಮಗೆ ಹೆಚ್ಚಿನ ಅರಿವು ಬೇಕು ಎಂದರು. 

ಬಿಡಬ್ಲ್ಯುಎಸ್ಎಸ್ ಬಿ 2011 ರಲ್ಲಿ ಜಯನಗರ 5 ನೇ ಬ್ಲಾಕ್‌ನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರೈನ್ ವಾಟರ್ ಹಾರ್ವೆಸ್ಟಿಂಗ್ ಥೀಮ್ ಪಾರ್ಕ್ ನ್ನು ನಿರ್ಮಿಸಿದೆ. ಅಧಿಕಾರಿಗಳು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ನಿಯಮಿತವಾಗಿ ಭೇಟಿ ನೀಡುತ್ತಾರೆ. ಅವರಿಗೆ ಮಳೆ ನೀರು ಕೊಯ್ಲು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳ ಅನುಕೂಲಗಳ ಕುರಿತು ಡೆಮೊಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. 

ತಮ್ಮ ವಸತಿ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು ಘಟಕಗಳನ್ನು ಸ್ಥಾಪಿಸಲು ನಾಗರಿಕ ಸಮಾಜಗಳನ್ನು ಸಹ ಆಹ್ವಾನಿಸಲಾಗಿದೆ. ಥೀಮ್ ಪಾರ್ಕ್ ಇದುವರೆಗೆ 88 ಸೆಷನ್‌ಗಳನ್ನು ಆಯೋಜಿಸಿದೆ. ನಮಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ. ದಂಡ ವಿಧಿಸಿದ್ದರೂ ಅನೇಕರಿಗೆ ತಿಳಿದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT