ರಾಜ್ಯ

ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಬಿಬಿಎಂಪಿ ಆಯುಕ್ತ

Manjula VN

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಸಿಎಸ್‌ಆರ್ ನಿಧಿಗಳು ಮತ್ತು ಇತರ ವಿಷಯಗಳ ಕುರಿತು ಅಧಿಕಾರಿಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ತುಷಾರ್ ಗಿರಿನಾಥ್ ಅವರು, ಗುರುವಾರ ಮಾಹಿತಿ ಪಡೆದುಕೊಂಡರು.

ವಿಶೇಷ ಆಯುಕ್ತ (ಶಿಕ್ಷಣ) ಪ್ರೀತಿ ಗೆಹ್ಲೋಟ್, ವಿಶೇಷ ಆಯುಕ್ತರಾದ ಡಾ. ಆರ್ ಎಲ್ ದೀಪಕ್, ಉಜ್ವಲ್ ಕುಮಾರ್ ಘೋಷ್, ಶ್ರೀ ರವೀಂದ್ರ, ಶ್ರೀ ರೆಡ್ಡಿ ಶಂಕರ್ ಬಾಬು ಸೇರಿದಂತೆ ಶಿಕ್ಷಣ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಇದು ಆಂತರಿಕ ಸಭೆಯಾಗಿದ್ದು, ಪರಿಶೀಲನೆ ಉದ್ದೇಶಕ್ಕಾಗಿ ನಡೆಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಸಿಎಸ್‌ಆರ್ ನಿಧಿಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿಸಿದರು.

ಇಲಾಖೆಯಲ್ಲಿರುವ ಆಸ್ತಿಗಳ ಸಂಖ್ಯೆ, ಶೈಕ್ಷಣಿಕ ವರ್ಷಗಳ ತಯಾರಿ, ಶಾಲೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರ ವಿತರಣೆ, ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸ್ಪಷ್ಟತೆ ಮತ್ತು ಇತರ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದು ಎಂದು ಮಾಹಿತಿ ನೀಡಿದರು.

SCROLL FOR NEXT