ಸಾಂದರ್ಭಿಕ ಚಿತ್ರ 
ರಾಜ್ಯ

ಕರಾವಳಿ ಕರ್ನಾಟಕದಲ್ಲಿ ನಿಷೇಧಿತ ಡ್ರಗ್ ಸಾಗಣೆ: ಪೊಲೀಸರಿಂದ ಇಬ್ಬರ ಬಂಧನ

ಕರ್ನಾಟಕ-ಕೇರಳ ಗಡಿಯಲ್ಲಿ ವಾಹನ ತಪಾಸಣೆ ನಡೆಸಿದಾಗ ನಿಷೇಧಿತ ಮೆಥಾಂಫೆಟಮೈನ್ ಹೊಂದಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮಂಗಳೂರು: ಕರ್ನಾಟಕ-ಕೇರಳ ಗಡಿಯಲ್ಲಿ ವಾಹನ ತಪಾಸಣೆ ನಡೆಸಿದಾಗ ನಿಷೇಧಿತ ಮೆಥಾಂಫೆಟಮೈನ್ ಹೊಂದಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಗಳನ್ನು ತಲಪಾಡಿಯ ಅಬ್ದುಲ್ ರಶೀದ್ (41) ಮತ್ತು ನಗರದ ದೇರಳಕಟ್ಟೆಯ ಪಿ ಆರಿಫ್ (40) ಎಂದು ಗುರುತಿಸಲಾಗಿದೆ.

ಕರ್ನಾಟಕ-ಕೇರಳ ಗಡಿಯ ನೆತ್ತಿಲಪದವು ಬಳಿ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ 20 ಗ್ರಾಂ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಅವರು ಬಳಸುತ್ತಿದ್ದ ಸ್ಕೂಟರ್ ಅನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ಡ್ರಗ್ ಮೌಲ್ಯ 1,06,500 ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ಮುಕ್ಕ ಚೆಕ್‌ಪೋಸ್ಟ್ ಬಳಿಯ ಲಾಡ್ಜ್ ಕೊಠಡಿಯಲ್ಲಿ ಜೂಜಾಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಕೃತ್ಯಕ್ಕೆ ಸಹಕರಿಸಿದ ಲಾಡ್ಜ್‌ನ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ.

ಅವರ ಬಳಿಯಿದ್ದ ನಗದು, ಮೊಬೈಲ್ ಫೋನ್‌ಗಳು, ಕಾರು ಮತ್ತು ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ, ಇದು ನಾನು ನಿಲ್ಲಿಸಿದ 10 ನೇ ಯುದ್ಧ- ಟ್ರಂಪ್

ಲೋಕಸಭೆಯ ಸ್ಥಾನಗಳು 850ಕ್ಕೆ ಏರಿಕೆಯಿಂದ ಏನು ಲಾಭ?: ಅಮಿತ್ ಶಾ ಹೇಳಿದ್ದಿಷ್ಟು...

ರಾಮ-ಲಕ್ಷ್ಮಣರು ಕದ್ದು ಹಣ್ಣು ತಿಂದರು, ಅದಕ್ಕೆ ಯುದ್ಧ ಆಯ್ತು: ನಗೆಪಾಟಲಿಗೀಡಾದ ಪ್ರಕಾಶ್ ರಾಜ್, Video

ದೇವಸ್ಥಾನಗಳಲ್ಲಿರುವ ಟನ್ ಗಟ್ಟಲೆ ಚಿನ್ನವನ್ನು ಹೊರತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು- ಫಾದರ್ ಪೌಲ್ ಥೆಲಕ್ಕಟ್

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

SCROLL FOR NEXT