ರಾಜ್ಯ

ನಕಲಿ ಪ್ರೊಫೈಲ್: ಮಹಿಳೆಗೆ 90 ಸಾವಿರ ರೂ. ಪರಿಹಾರ ನೀಡಲು ಮ್ಯಾಟ್ರಿಮೋನಿ ಸಂಸ್ಥೆಗೆ ಗ್ರಾಹಕ ಆಯೋಗ ಸೂಚನೆ

Srinivas Rao BV

ಬೆಂಗಳೂರು: ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿದ್ದ ನಕಲಿ ಪ್ರೊಫೈಲ್ ನ್ನು ಹಂಚಿದ್ದಕ್ಕಾಗಿ ಮಹಿಳೆಯೊಬ್ಬರಿಗೆ 90 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸಂಸ್ಥೆಗೆ ಗ್ರಾಹಕ ಆಯೋಗ ದಂಡ ವಿಧಿಸಿದೆ. 

ಮಹಿಳೆ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಈಕೆಗೆ ಘಟ್ಬಂಧನ್ ಮ್ಯಾಟ್ರಿಮೋನಿ ಪ್ರೈವೆಟ್ ಲಿಮಿಟೆಡ್ (ಜಿಎಂಪಿಎಲ್) ಅಸ್ತಿತ್ವದಲ್ಲೇ ಇರದ ಒಂದಷ್ಟು ಪ್ರೊಫೈಲ್ ಗಳನ್ನು ಸೂಚಿಸಿತ್ತು. 

ಈ ಸಂಸ್ಥೆ ಮಹಿಳೆಯಿಂದ ಸದಸ್ಯತ್ವಕ್ಕಾಗಿ 43,000 ರೂಪಾಯಿಗಳನ್ನು ಪಡೆದಿತ್ತು, ಸದಸ್ಯತ್ವದ ಹಣಕ್ಕೆ ವಾರ್ಷಿಕ ಶೇ.9 ರಷ್ಟು ಬಡ್ಡಿ ಸೇರಿಸಿ ಒಟ್ಟು 90 ಸಾವಿರ ರೂಪಾಯಿಗಳನ್ನು ನೀಡುವಂತೆ ಗ್ರಾಹಕ ಆಯೋಗ ನಿರ್ದೇಶನ ನೀಡಿದೆ. 

40 ವರ್ಷದ ಸಂತ್ರಸ್ತ ಮಹಿಳೆ ಆರ್ ಟಿ ನಗರದ ನಿವಾಸಿಯಾಗಿದ್ದು, 50,000 ರೂಪಾಯಿಗಳ ನಷ್ಟಪರಿಹಾರ, 30,000 ರೂಪಾಯಿಗಳ ಕಾನೂನು ವೆಚ್ಚಗಳು ಜಿಎಂಪಿಎಲ್ ನ ಸದಸ್ಯತ್ವದ ಹಣಕ್ಕೆ ಹೆಚ್ಚುವರಿಯಾಗಿ 10,000 ರೂಪಾಯಿಗಳನ್ನು ನೀಡುವಂತೆ ಸಂಸ್ಥೆಗೆ ಅಧ್ಯಕ್ಷ ಶಿವರಾಮ ಕೆ, ಸದಸ್ಯರಾದ ರಾಜು ಕೆ ಎಸ್ ಮತ್ತು ರೇಖಾ ಸಾಯಣ್ಣವರ್ ಅವರಿದ್ದ ಆಯೋಗ ಸೂಚನೆ ನೀಡಿದೆ. 

"ನೈಜವಾದ ಪ್ರೊಫೈಲ್ ಹೊಂದಿರುವ ವ್ಯಕ್ತಿಯನ್ನು ಮದುವೆಯಾಗುವ ಕನಸನ್ನು ಹೊತ್ತಿದ್ದ ಮಹಿಳೆಗೆ "ಜಿಎಂಪಿಎಲ್ ನ ಕೃತ್ಯ ಭಾವನಾತ್ಮಕ ಹಾನಿ ಮತ್ತು ಘಾಸಿಯನ್ನುಂಟುಮಾಡಿದೆ... ಈ ಬಿಡುವಿಲ್ಲದ ಜೀವನಶೈಲಿ ಮತ್ತು ಬಿಗಿಯಾದ ಸಮಯ ನಿರ್ವಹಣೆಯಲ್ಲಿ, ಜಿಎಂಪಿಎಲ್ ನಕಲಿ ಮ್ಯಾಟ್ರಿಮೋನಿಯಲ್ ಪ್ರೊಫೈಲ್‌ಗಳನ್ನು ಒದಗಿಸುವ ಮೂಲಕ ದೂರುದಾರರಿಗೆ ಮೋಸ ಮಾಡಿದೆ ಮತ್ತು ಆಕೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2 (23) ರ ಅಡಿಯಲ್ಲಿ ಉಲ್ಲೇಖಗೊಂಡಿರುವ ನೋವಿಗೆ ಸಮನಾಗಿರುತ್ತದೆ," ಎಂದು ಆಯೋಗ ಹೇಳಿದೆ. 

SCROLL FOR NEXT