ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: 2 ಸಾವಿರ ಕೆಜಿ ಡ್ರಗ್ಸ್ ನಾಶಪಡಿಸಿದ ಪೊಲೀಸರು!

ವಿಶ್ವ ಮಾದಕವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ವಿಶೇಷ ಅಭಿಯಾನ ನಡೆಸಿದ ನಗರದ ಪೊಲೀಸರು, ಸೋಮವಾರ ರೂ. 21 ಕೋಟಿ ಮೌಲ್ಯದ 2,117 ಕೆ.ಜಿ ಡ್ರಗ್ಸ್ ನಾಶಪಡಿಸಿದರು.

ಸಂಗ್ರಹ ಚಿತ್ರ
Manjula VN
Updated On : 27 Jun 2023, 4:59 pm

ಬೆಂಗಳೂರು: ವಿಶ್ವ ಮಾದಕವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ವಿಶೇಷ ಅಭಿಯಾನ ನಡೆಸಿದ ನಗರದ ಪೊಲೀಸರು, ಸೋಮವಾರ ರೂ. 21 ಕೋಟಿ ಮೌಲ್ಯದ 2,117 ಕೆ.ಜಿ ಡ್ರಗ್ಸ್ ನಾಶಪಡಿಸಿದರು.

ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 2,053 ಕೆ.ಜಿ ಗಾಂಜಾ, 9 ಕೆ.ಜಿ ಹಶೀಷ್, 12 ಕೆ.ಜಿ ಅಫೀಮು, 9 ಕೆ.ಜಿ ಚರಸ್, 568 ಗ್ರಾಂ ಕೊಕೇನ್, 13 ಗ್ರಾಂ ಹೆರಾಯಿನ್, 5 ಕೆ.ಜಿ ಎಂಡಿಎಂಎ ಅನ್ನು ಕೋರ್ಟ್‌ ಆದೇಶ ಪಡೆದು ನಾಶಪಡಿಸಿದ್ದಾರೆ.

ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ 2022ರ ಜನವರಿಯಿಂದ 2023ರ ಜೂನ್‌ವರೆಗೆ 6,191 ಪ್ರಕರಣ ದಾಖಲಾಗಿದೆ. ಈ ಸಂಬಂಧ 7,723 ಭಾರತೀಯರು, 159 ವಿದೇಶಿಯರನ್ನು ಬಂಧಿಸಿದ್ದು,ರೂ. 117 ಕೋಟಿ ಮೌಲ್ಯದ 6,261 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.

Advertisement

Advertisement

ಇದನ್ನೂ ಓದಿ: 70 ಕೋಟಿ ರೂ. ಮೌಲ್ಯದ ಡ್ರಗ್ಸ್ ದಂಧೆ ಪ್ರಕರಣ: ಬಿಜೆಪಿ ಮುಖಂಡನ ಪುತ್ರ ಬಂಧನ?

‘ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಡ್ರಗ್ಸ್ ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ’ ಕುರಿತು ಸಮಾವೇಶದ ಭಾಗವಾಗಿ ರೂ.92 ಕೋಟಿ ಮೌಲ್ಯದ 4,397 ಕೆ.ಜಿ ಡ್ರಗ್ಸ್ ನಾಶಪಡಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಹೇಳಿದರು.

ಅಲ್ಲದೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ 388 ಶಾಲೆಗಳು, 253 ಕಾಲೇಜುಗಳು ಮತ್ತು 51 ವೃತ್ತಿಪರ ಕಾಲೇಜುಗಳಿಗೆ ಭೇಟಿ ನೀಡಿದ್ದು, 1.73 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾದಕವಸ್ತುಗಳಿಂದಾಗುವ ದುಷ್ಪರಿಣಾಮಗಳು ಮತ್ತು NDPS ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments