ಮೈಸೂರು ಮೃಗಾಲಯ 
ರಾಜ್ಯ

ಬಿಸಿಲ ಧಗೆಗೆ ಪ್ರಾಣಿಗಳು ಕಂಗಾಲು: ಮೈಸೂರು ಮೃಗಾಲಯದಲ್ಲಿ 'ಏರ್ ಕೂಲರ್'ಗಳ ಅಳವಡಿಕೆ

ಬೇಸಿಗೆ ಆರಂಭವಾಗುತ್ತಿದ್ದಂತೆ ತಾಪಮಾನ ಹೆಚ್ಚಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ, ಪ್ರಾಣಿಗಳು ಕೂಡ ತತ್ತರಿಸಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಆರಾಮದಾಯಕ ವಾತಾವರಣದಲ್ಲಿರುವಂತೆ ಮಾಡಲು 130 ವರ್ಷಗಳಷ್ಟು ಹಳೆಯದಾದ ಮೈಸೂರು ಮೃಗಾಲಯದಲ್ಲಿ ಏರ್ ಕೂಲರ್ ಗಳನ್ನು ಅಳವಡಿಸಲಾಗುತ್ತಿದೆ.

ಮೈಸೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ತಾಪಮಾನ ಹೆಚ್ಚಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ, ಪ್ರಾಣಿಗಳು ಕೂಡ ತತ್ತರಿಸಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಆರಾಮದಾಯಕ ವಾತಾವರಣದಲ್ಲಿರುವಂತೆ ಮಾಡಲು 130 ವರ್ಷಗಳಷ್ಟು ಹಳೆಯದಾದ ಮೈಸೂರು ಮೃಗಾಲಯದಲ್ಲಿ ಏರ್ ಕೂಲರ್ ಗಳನ್ನು ಅಳವಡಿಸಲಾಗುತ್ತಿದೆ.

ಪ್ರಾಣಿಗಳು ಸೂಕ್ಷ್ಮವಾಗಿರುವುದರಿಂದ ಏರ್ ಕೂಲರ್ ಗಳ ಅಳವಡಿಕೆ ಅವುಗಳು ಆರಾಮದಾಯಕವಾಗಿರುವಂತೆ ಮಾಡಲಿದೆ. ಮನೆಯಲ್ಲಿ ಬಳಸುವ ಎಸಿಗಳಂತೆಯೇ ಇವೂ ಇರಲಿವೆ. ಅತಿಯಾದ ತಾಪಮಾನವು ಪ್ರಾಣಿಗಳು ನಿರ್ಜಲೀಕರಣ ಎದುರಿಸುವಂತೆ ಮಾಡುತ್ತದೆ. ಹೀಗಾಗಿ ಇದನ್ನು ತಡೆಗಟ್ಟಲು ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ಕೂಡ ನೀಡುವ ಕೆಲಸ ಮಾಡುತ್ತಿದ್ದೇವೆಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ ಕುಲಕರ್ಣಿ ಅವರು ಹೇಳಿದ್ದಾರೆ.

ಮೃಗಾಲಯದಲ್ಲಿ  624 ಸಸ್ತನಿಗಳು, 731 ಪಕ್ಷಿಗಳು ಮತ್ತು 100 ಸರೀಸೃಪಗಳು ಸೇರಿದಂತೆ 1,455 ಪ್ರಾಣಿಗಳನ್ನು ಹೊಂದಿದೆ. ನಾಲ್ಕು ಬೋರ್ನಿಯನ್ ಒರಾಂಗುಟನ್, ಆರು ಚಿಂಪಾಂಜಿಗಳು, ಎರಡು ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳೂ ಕೂಡ ಇವೆ, ಇವುಗಳನ್ನು ಮಲೇಷ್ಯಾ, ಜರ್ಮನಿ ಮತ್ತು ಇತರ ದೇಶಗಳಿಂದ ಕರೆತರಲಾಗಿದೆ.

ಬಿಸಿಲು ಹೆಚ್ಚಾಗಿದ್ದ ಸಮಯದಲ್ಲಿ ತೆರೆದ ಆವರಣಗಳಲ್ಲಿ ಇರಿಸಲಾಗಿರುವ ಪ್ರಾಣಿಗಳ ನಿರ್ವಹಣೆ ಕಷ್ಟಕರವಾಗಿರುತ್ತದೆ. ಸಸ್ಯಾಹಾರಿಗಳಿಗೆ ಆಶ್ರಯ ಮತ್ತು ಸ್ಪ್ರಿಂಕ್ಲರ್ಗಳನ್ನು ಒದಗಿಸಲಾಗಿದೆ. ಪಕ್ಷಿಗಳು ಮತ್ತು ಸರೀಸೃಪಗಳಿಗೆ ಫಾಗರ್ಸ್ ಮತ್ತು ನೀರು ಸಿಂಪಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆನೆಗಳು, ಹಿಪ್ಪೋಗಳು ಮತ್ತು ಗೌರ್‌ಗಳಂತಹ ದೊಡ್ಡ ಸಸ್ತನಿಗಳನ್ನು ತಂಪಾಗಿರಿಸಲು ಮಣ್ಣಿನ ಗೋಡೆಗಳನ್ನು ನಿರ್ಮಿಸಲಾಗಿದೆ, ಅಲ್ಲಿ ಪ್ರಾಣಿಗಳು ಮಣ್ಣಿನ ಸ್ನಾನ ಮಾಡಲಿವೆ. ನೀರಿನಲ್ಲಿ ಆಟವಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಂದು ಕುಲಕರ್ಣಿ ತಿಳಿಸಿದ್ದಾರೆ.

ಪ್ರಾಣಿಗಳ ಆಹಾರ ಪದ್ಧತಿಯನ್ನೂ ಬದಲಾಯಿಸಲಾಗಿದ್ದು, ಬೇಸಿಗೆಗೆ ಸೂಕ್ತವಾದ ಆಹಾರಗಳನ್ನು ಒದಗಿಸಲಾಗುತ್ತಿದೆ. ಕಲ್ಲಂಗಡಿ, ಸೀತಾಫಲ ಮತ್ತು ಸಿಟ್ರಸ್‌ನಂತಹ ಹಣ್ಣುಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಪಶುವೈದ್ಯರು ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡುತ್ತಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT