ರಾಜ್ಯ

ಬೆಂಗಳೂರಿನಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ: ಈ ಮಾರ್ಗಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಗಮನಿಸಿ

Sumana Upadhyaya

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಶಾ ಅವರ ಸುಗಮ ಸಂಚಾರಕ್ಕಾಗಿ ಬೆಂಗಳೂರಿನ ಕೆಲವು ರಸ್ತೆ ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾಯಿಸಲಾಗಿದೆ. 

ಅಮಿತ್‌ ಶಾ ಅವರು ಬೆಂಗಳೂರಿನ ಕಮ್ಮಘಟ್ಟದಲ್ಲಿ ಇವತ್ತು ಶೇಖರ್‌ ಸಮೃದ್ಧಿ ಸೌಧದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮಾರ್ಗದಲ್ಲಿ ಅವರು ಸಂಚರಿಸುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಸಾರ್ವಜನಿಕ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇಂದು ಇಂದು ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 4 ಗಂಟೆಯವರಿಗೆ ಅನ್ವಯವಾಗಿಲಿದ. 

ಸಂಚಾರ ನಿರ್ಬಂಧ ರಸ್ತೆಗಳು: ಹಳೆ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ಎನ್ ಆರ್ ರಸ್ತೆ, ನೃಪತೃಂಗ ರಸ್ತೆ, ಶೇಷಾದ್ರಿ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಕೆಂಗೇರಿ ಯಿಂದ ಕೊಮ್ಮಘಟ್ಟ ರಸ್ತೆಗಳಲ್ಲಿ ಮಧ್ಯಾಹ್ನ 12ರಿಂದ ಅಪರಾಹ್ನ 4 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಟೌನ್ ಹಾಲ್ ಕಡೆಯಿಂದ ಎನ್ ಆರ್ ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಚರಿಸುವ ಲಘು, ಮಧ್ಯಮ ಮತ್ತು ಭಾರಿ ಸರಕು ವಾಹನಗಳನ್ನು ನಿರ್ಬಂಧಿಸಲಾಗಿದೆ.

ನಾಯಂಡಹಳ್ಳಿ ಜಂಕ್ಷನ್ ನಿಂದ ಬೆಂಗಳೂರು ನಗರದ ಒಳಭಾಗ ಮತ್ತು ಹೊರಭಾಗಕ್ಕೆ ಸಂಚಿಸುವ ಲಘು, ಮಧ್ಯಮ ಮತ್ತು ಭಾರಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ

ಕುಂಬಳಗೋಡು ಕಡೆಯಿಂದ ಕೆಂಗೇರಿ ಕಡೆಗೆ (ಬೆಂಗಳೂರು ನಗರದ ಒಳಕ್ಕೆ) ಸಂಚರಿಸುವ ಲಘು, ಮಧ್ಯಮ ಮತ್ತು ಭಾರಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ

ಪರ್ಯಾಯ ಮಾರ್ಗ: ಟೌನ್ ಹಾಲ್ ಜಂಕ್ಷನ್ ನಿಂದ ಎನ್ ಆರ್ ರಸ್ತೆಯ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಚರಿಸುವ ವಾಹನಗಳು ಲಾಲ್ ಬಾಗ್ ರಸ್ತೆಯ ಮೂಲಕ ಸಂಚರಿಸಬಹುದು

ನಾಯಂಡಹಳ್ಳಿ ಜಂಕ್ಷನ್ ನಿಂದ ಬೆಂಗಳೂರು ನಗರದ ಒಳ ಮತ್ತು ಹೊರಭಾಗಕ್ಕೆ ಸಂಚರಿಸುವವರು ನಾಗರಭಾವಿ-ಸುಮ್ಮನಹಳ್ಳಿ ರಿಂಗ್ ರಸ್ತೆಯ ಮಾರ್ಗವಾಗಿ ಸಂಚರಿಸಬಹುದು

ಕುಂಬಳಗೋಡುಕಡೆಯಿಂದ ಕೆಂಗೇರಿ ಕಡೆಗೆ (ಬೆಂಗಳೂರು ನಗರ ಒಳಭಾಗಕ್ಕೆ) ಸಂಚರಿಸುವವರು ನೈಸ್ ರಸ್ತೆಯ ಮೂಲಕ ಸಂಚರಿಸಬಹುದು.

ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಮತ್ತು ಲಿಂಗಾಯತ ಸಮಾಜ ಸುಧಾರಕ ಬಸವೇಶ್ವರ ಸೇರಿದಂತೆ ಮೂರು ಪ್ರತಿಮೆಗಳನ್ನು ಅಮಿತ್‌ ಶಾ ಇವತ್ತು ಅನಾವರಣಗೊಳಿಸಲಿದ್ದಾರೆ.

SCROLL FOR NEXT