ಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕ 8 ವರ್ಷದ ಅಮೆರಿಕಾ-ಮಂಗೋಲಿಯನ್ ಬಾಲಕ ಮತ್ತು ದಲೈ ಲಾಮ 
ರಾಜ್ಯ

ಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕ 8 ವರ್ಷದ ಅಮೆರಿಕಾ-ಮಂಗೋಲಿಯನ್ ಬಾಲಕ: ಸನ್ಯಾಸತ್ವ ಅಧ್ಯಯನಕ್ಕೆ ಶೀಘ್ರದಲ್ಲೇ ಭಾರತಕ್ಕೆ?

ಮಾರ್ಚ್ 8 ರಂದು ಧರ್ಮಶಾಲಾದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ದಲೈಲಾಮಾ ಅವರಿಂದ 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಘೋಷಿಸಿಲ್ಪಟ್ಟ ಅಮರಿಕಾ ಮೂಲದ 8 ವರ್ಷದ ಮಂಗೋಲಿಯನ್ ಬಾಲಕ ಸನ್ಯಾಸತ್ವ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು: ಮಾರ್ಚ್ 8 ರಂದು ಧರ್ಮಶಾಲಾದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ದಲೈಲಾಮಾ ಅವರಿಂದ 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಘೋಷಿಸಿಲ್ಪಟ್ಟ ಅಮರಿಕಾ ಮೂಲದ 8 ವರ್ಷದ ಮಂಗೋಲಿಯನ್ ಬಾಲಕ ಸನ್ಯಾಸತ್ವ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಸನ್ಯಾಸತ್ವ ಅಧ್ಯಯನಕ್ಕೆ ಭಾರತದಲ್ಲಿ ಉತ್ತಮ ಸೌಕರ್ಯಗಳಿಂದ ಅಧ್ಯಾತ್ಮಿಕ ಅಧ್ಯಯನಕ್ಕಾಗಿ ಬಾಲಕ ಭಾರತಕ್ಕೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಒಂಬತ್ತನೇ ಖಲ್ಖಾ ಜೆಟ್ಸುನ್ ದಂಪಾ ಶಿಮ್ಲಾದ ಜೊನಾಂಗ್ ಟಕ್ಟೆನ್ ಫುಂಟ್ಸಾಕ್ ಚೋಲಿಂಗ್ ಬೌದ್ಧ ಮಠದೊಂದಿಗೆ ಸಂಯೋಜಿತವಾಗಿದೆ. ಜೋನಾಂಗ್ ಮಠದಲ್ಲಿರುವ ಕೆಲವು ಸನ್ಯಾಸಿಗಳು ಕರ್ನಾಟಕದ ಮುಂಡಗೋಡಿನ ಡ್ರೆಪುಂಗ್ ಮಠದಲ್ಲಿ ಅಧ್ಯಯನ ಮಾಡುತ್ತಾರೆ. ಬಾಲಕ ಇವರಿಂದ ಅಧ್ಯಯನದ ನೆರವು ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ.

ಧರ್ಮಶಾಲಾದಲ್ಲಿ ಮಾರ್ಚ್ 8 ರಂದು ನಡೆದ ಸಮಾರಂಭದಲ್ಲಿ ಎಂಟು ವರ್ಷದ ಬಾಲಕನಿಗೆ ದಲೈ ಲಾಮಾ ದೀಕ್ಷೆ ನೀಡಿದ್ದು, ಬಾಲಕನೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ.

ಮಂಗೋಲಿಯಾದ ಅತಿದೊಡ್ಡ ಗಂದನ್‌ಟೆಗ್‌ಚಿನ್ಲೆನ್ ಮಠದಲ್ಲಿ ನಡೆದ ಸಮಾರಂಭದಲ್ಲಿ ಹತ್ತನೇ ಖಲ್ಕಾ ಆಗಿ  ಆಯ್ಕೆ ಮಾಡಲಾಗಿದೆ. ಮಾರ್ಚ್ 8 ರಂದು ನಡೆದ ಸಮಾರಂಭದಲ್ಲಿ ಬಾಲಕನ ಜೊತೆ ಕಾರ್ಯಕ್ರಮದಲ್ಲಿ ದಲೈ ಲಾಮ ಭಾಗವಹಿಸಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಣೆಯಾದ ಈ ಎಂಟು ವರ್ಷದ ಬಾಲಕ 2015 ರಲ್ಲಿ ಯುಎಸ್‌ನಲ್ಲಿ ಜನಿಸಿದ್ದು, ತಂದೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಈತ ಎಂದು ವರದಿಯಾಗಿದೆ. ಅಲ್ಲದೇ ಈ ಬಾಲಕನಿಗೆ ಅಮೆರಿಕಾದಲ್ಲಿ ಇಬ್ಬರು ಅವಳಿ ಸಹೋದರರು ಕೂಡ ಇದ್ದಾರೆ ಎನ್ನಲಾಗಿದೆ.

ದಲೈ ಲಾಮಾ ಅವರು ಈ ಮಗುವನ್ನು 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಪುನರ್ಜನ್ಮ (ತುಲ್ಕು) ಎಂದು ಬಣ್ಣಿಸಿದ್ದಾರೆ. ಬೌದ್ಧಧರ್ಮದಲ್ಲಿ ಧಾರ್ಮಿಕ ಮುಖಂಡರ ಪುನರ್ಜನ್ಮಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಖಲ್ಖಾ ಜೆಟ್ಸುನ್ ದಂಪಾ ಅವರು ಟಿಬೆಟಿಯನ್ ಬೌದ್ಧಧರ್ಮದ ಪ್ರಮುಖ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

1995 ರಲ್ಲಿ, ದಲೈಲಾಮಾ ಅವರು 11ನೇ ಪಂಚೆಮ್ ಲಾಮಾ ಎಂದು ಹೆಸರಿಸಿದಾಗ, ಚೀನಾದ ಅಧಿಕಾರಿಗಳು  ಪಂಚೆಮ್ ನನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿದ್ದರು. ಇದರ ನಂತರ ಆ ಕುಟುಂಬ ಕಣ್ಮರೆಯಾಗಿತ್ತು. ಇದೀಗ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕನಾಗಿ ಘೋಷಣೆ ಮಾಡಲಾಗಿದ್ದು, ಇದೀಗ ಬಾಲಕನ ಭದ್ರತೆ ಕುರಿತು ಕಳವಳಗಳು ಮೂಡತೊಡಗಿವೆ.

ಪಂಚೆಮ್ ಅವರನ್ನು ದೀಕ್ಷೆಯ ಒಂದು ತಿಂಗಳ ನಂತರ ಅಪರಹರಿಸಿದ್ದರು. ಕಳೆದ 27 ವರ್ಷಗಳಿಂದಲೂ ಇವರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!