ಬಸವರಾಜ ಹೊರಟ್ಟಿ 
ರಾಜ್ಯ

ಮತದಾರರೇ ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ: ಹೊರಟ್ಟಿ ಆರೋಪ

ರಾಜಕಾರಣಿಗಳಿಂದ ಉಚಿತ ಕೊಡುಗೆಗಳನ್ನು ಸ್ವೀಕರಿಸುವುದು ಅಥವಾ ಬೇಡಿಕೆ ಇಡುವ ಮೂಲಕ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ. 

ವಿಜಯಪುರ: ರಾಜಕಾರಣಿಗಳಿಂದ ಉಚಿತ ಕೊಡುಗೆಗಳನ್ನು ಸ್ವೀಕರಿಸುವುದು ಅಥವಾ ಬೇಡಿಕೆ ಇಡುವ ಮೂಲಕ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ. 

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊರಟ್ಟಿ, ಕೆಲವು ಮಂದಿ ತಮ್ಮ ಇಡೀ ಜೀವನವೇ ಉಚಿತ ಕೊಡುಗೆಗಳ ಮೇಲೆ ಅವಲಂಬಿತವಾಗಿದೆ ಎಂಬಂತೆ ವರ್ತಿಸುತ್ತಾರೆ. 

ಚುನಾವಣೆಗಳನ್ನು ಭ್ರಷ್ಟಮುಕ್ತವಾಗಿ ನಡೆಯಬೇಕೆಂದು ಪ್ರಯತ್ನಿಸಿದರೂ ಜನರು ಎಲ್ಲಿಯವರೆಗೆ ಉಡುಗೊರೆಗಳನ್ನು ಪಡೆಯುವುದು ಸರಿಯಲ್ಲ ಎಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೂ ಈ ಕೆಟ್ಟ ಸಂಸ್ಕೃತಿ ಮುಂದುವರೆಯುತ್ತದೆ. ನೀವು ರಾಜಕಾರಣಿಗಳಿಂದ ಉಡುಗೊರೆ ಪಡೆದರೆ, ಚುನಾಯಿತ ಪ್ರತಿನಿಧಿಗಳು ಜನರು ಉಚಿತವಾಗಿ ಮತ ನೀಡಿಲ್ಲ, ಉಡುಗೊರೆ ಪಡೆದು ಮತ ಹಾಕಿದ್ದಾರೆರೆಂದು ಹೇಳುತ್ತಾರೆ ಎಂದು ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. 

ಜನರು ಬಯಸಿದಲ್ಲಿ, ರಾಜಕಾರಣಿಗಳು ನೀಡುವ ಉಡುಗೊರೆ, ಆಮಿಷಗಳನ್ನು ತಿರಸ್ಕರಿಸಿ ಚುನಾವಣೆಯಲ್ಲಿ ಪಾರದರ್ಶಕತೆ ತರಬಹುದು ಎಂದು ಹೇಳಿದ್ದಾರೆ. 

ಜನತೆಗಾಗಿ ಕೆಲಸ ಮಾಡುತ್ತಿರುವ ಜನರೊಂದಿಗೆ ಇರುವಂತಹ ರಾಜಕಾರಣಿಗಳಿಗೆ ಮತ ಹಾಕಿ, ಚುನಾವಣೆಯಲ್ಲಿ ಗೆದ್ದ ನಂತರ ಜನರೊಟ್ಟಿಗೆ ಇರುವುದನ್ನು ಬಿಟ್ಟು ಹಣ ಮಾಡುವುದಕ್ಕಾಗಿಯೇ ರಾಜಧಾನಿಯಲ್ಲಿ ಕುಳಿತುಕೊಳ್ಳುವ ರಾಜಕಾರಣಿಗಳಿಗೆ ಮತ ಹಾಕಬೇಡಿ ಎಂದು ಜನತೆಗೆ ಹೊರಟ್ಟಿ ಕರೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್