ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಫುಡ್ ಡೆಲಿವರಿ ಬಾಯ್ ದರೋಡೆ ಮಾಡಿದ ದುಷ್ಕರ್ಮಿಗಳು!

ಗ್ರಾಹಕರ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಫುಡ್ ಡೆಲಿವರಿ ಬಾಯ್'ನನ್ನು ದರೋಡೆ ಮಾಡಿರುವ ಘಟೆ ನಗರದಲ್ಲಿ ನಡೆದಿದೆ.

ಸಂಗ್ರಹ ಚಿತ್ರ
Manjula VN
Updated On : 3 May 2023, 3:03 pm

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಫುಡ್ ಡೆಲಿವರಿ ಬಾಯ್'ನನ್ನು ದರೋಡೆ ಮಾಡಿರುವ ಘಟೆ ನಗರದಲ್ಲಿ ನಡೆದಿದೆ.

ಆನ್ ಲೈನ್ ಮೂಲಕ ಆರೋಪಿಗಳು ಫುಡ್ ಆರ್ಡರ್ ಮಾಡಿದ್ದಾರೆ. ಇದರಂತೆ ಎ ಇಂದದೂರ್ ಎಂಬ ಫುಡ್ ಡೆಲಿವರಿ ಬಾಯ್ ಆಹಾರ ತಲುಪಿಸಲು ಸರ್ಜಾಪುರ ರಸ್ತೆಗೆ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆತನಿಗೆ ಕಿರುಕುಳ ನೀಡಿದ್ದು. ಬೆದರಿಕೆ ಹಾಗಿ ಆತನ ಖಾತೆಯಲ್ಲಿದ್ದ ರೂ.3,000ಯನ್ನು ಯುಪಿಐ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

ಬಳಿಕ ಡೆಲಿವರಿ ಬಾಯ್ ಬಳಿಯಿದ್ದ ಮೊಬೈಲ್ ಫೋನ್'ನ್ನೂ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಬೆಳ್ಳಂದೂರು ಪೊಲೀಶ್ ಠಾಣೆಗೆ ದೂರು ನೀಡಿದ್ದಾರೆ.

Advertisement

Advertisement

ಇದನ್ನೂ ಓದಿ: ಕಾಲೇಜು ಸಾಂಸ್ಕೃತಿಕ ಉತ್ಸವದ ವೇಳೆ ವಿದ್ಯಾರ್ಥಿ ಹತ್ಯೆ ಪ್ರಕರಣ: ಇಬ್ಬರ ಬಂಧನ

ಆರೋಪಿಗಳನ್ನು ಸುರೇಶ್, ಮಹೇಶ್, ಮುಸ್ತಫಾ ಎಂದು ಗುರ್ತಿಸಲಾಗಿದ್ದು, ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಸರ್ಜಾಪುರ ರಸ್ತೆಯ ದೊಡ್ಡಕನಹಳ್ಳಿಯ ಭೋಗನಹಳ್ಳಿ ರಸ್ತೆಯಲ್ಲಿ ಶುಕ್ರವಾರ ನಸುಕಿನ 2.40 ರಿಂದ 3.30 ರ ನಡುವೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement