ರಾಜ್ಯ

ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ಪ್ರತಿ 3 ಗಂಟೆಗೊಮ್ಮೆ SPG ಗೆ ಹವಾಮಾನ ವರದಿ!

Vishwanath S

ಬೆಂಗಳೂರು: ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್ಯಾಲಿ ಮತ್ತು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಡದ ರಚನೆ ಮತ್ತು ಮಳೆ ಸಂಭವ ಕುರಿತಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಪ್ರಧಾನ ಮಂತ್ರಿಗಳ ವಿಶೇಷ ರಕ್ಷಣಾ ಗುಂಪಿಗೆ (SPG) ರವಾನಿಸುತ್ತದೆ.

ಪ್ರತಿ ಮೂರು ಗಂಟೆಗೊಮ್ಮೆ ಹವಾಮಾನ ನವೀಕರಣದ ವರದಿಯನ್ನು SPGಗೆ ಒದಗಿಸುತ್ತಿದೆ. ಪ್ರತಿ ಪ್ರದೇಶದ ಹವಾಮಾನ ಪರಿಸ್ಥಿತಿಗಳನ್ನು ಜಿಲ್ಲಾಧಿಕಾರಿಗಳು(ಡಿಸಿಗಳು) ಮತ್ತು ಇತರ ಎಲ್ಲಾ ರಾಜಕೀಯ ಪಕ್ಷಗಳಿಗೆ ಕಳುಹಿಸುತ್ತಿದ್ದಾರೆ.

ಚುನಾವಣಾ ಪ್ರಚಾರದ ಆರಂಭಿಕ ಹಂತದಲ್ಲಿ ಬೇಸಿಗೆಯ ಬಿಸಿ ಉತ್ತುಂಗದಲ್ಲಿತ್ತು. ಹೀಗಾಗಿ ಯಾರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಮುಂಗಾರು ಮಳೆ ತೀವ್ರಗೊಂಡಿರುವುದರಿಂದ ಮತ್ತು ಚುನಾವಣಾ ಪ್ರಚಾರವು ವೇಗ ಪಡೆದುಕೊಳ್ಳುತ್ತಿದ್ದಂತೆ ಚುನಾವಣೆಯ ಆವರ್ತನ ಹೆಚ್ಚಾಗಿದೆ. ಹವಾಮಾನದ ಅಪಡೇಟ್ ಗಳಿಗಾಗಿ ನಾವು ದಿನಕ್ಕೆ 15ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಹೀಗಾಗಿ ನಾವು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿವಿಧ ತಂಡಗಳನ್ನು ಸಹ ರಚಿಸಿದ್ದೇವೆ ಎಂದು IMD ಯ ಅಧಿಕಾರಿಯೊಬ್ಬರು ಹೇಳಿದರು.

ರಾಷ್ಟ್ರೀಯ ನಾಯಕರು ಮತ್ತು ರಾಜಕೀಯ ಪಕ್ಷಗಳ ಮುಖ್ಯಸ್ಥರು ರೋಡ್ ಶೋ ನಡೆಸಿದಾಗ ಹವಾಮಾನ ವಿವರಗಳಿಗೆ ವಿಶೇಷ ಗಮನ ನೀಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರಿನ ಹವಾಮಾನ ನವೀಕರಣದ ಜೊತೆಗೆ ಹಾವೇರಿ, ಬಾದಾಮಿ, ಶಿವಮೊಗ್ಗ, ಮೈಸೂರು, ನಂಜನಗೂಡು ಮತ್ತು ಬಳ್ಳಾರಿಯ ವಿವರಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ಕೇಳುತ್ತಾರೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಸಾಮಾನ್ಯ ಅನುಭವಕ್ಕಿಂತ ಭಿನ್ನವಾಗಿದೆ. ಈ ಹಿಂದೆ ಅವರು ರೈತರು ಮತ್ತು ಕಾರ್ಯಕ್ರಮಗಳು, ಮದುವೆಗಳು ಮತ್ತು ಹೊರಾಂಗಣ ಪಾರ್ಟಿಗಳನ್ನು ಆಯೋಜಿಸುವ ನಾಗರಿಕರಿಂದ ಕರೆಗಳನ್ನು ಬರುತ್ತಿದ್ದವು. ಅಲ್ಲದೆ ವರ್ಷದ ಈ ಸಮಯದಲ್ಲಿ ಯಾವಾಗ ಮತ್ತು ಎಲ್ಲಿ ಮಳೆಯಾಗುತ್ತದೆ ಎಂದು ತಿಳಿಯಲು ಕರೆ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದರು.

ಆದರೆ ಈಗ ಸಾರ್ವಜನಿಕ ರ್ಯಾಲಿಗಳನ್ನು ನಿಗದಿಪಡಿಸಲು ಸೂಕ್ತವಾದ ಸಮಯವನ್ನು ನಿರ್ಧರಿಸಲು ಪಕ್ಷದ ಕಾರ್ಯಕರ್ತರು ಸಲಹೆಗಳನ್ನು ಕೇಳುತ್ತಿದ್ದಾರೆ. ಆ ಅವಧಿಗೆ ಯಾವುದೇ ಮಳೆಯ ಮುನ್ಸೂಚನೆ ಇದ್ದರೆ, ಕೆಲವರು ಮಳೆಯ ನಿಖರವಾದ ಸ್ಥಳಗಳನ್ನು ಕೇಳುತ್ತಾರೆ, ಅದನ್ನು ತಿಳಿಯಲು ಸಾಧ್ಯವಿಲ್ಲ" ಎಂದು ಅಧಿಕಾರಿಗಳು ಹೇಳಿದರು.

SCROLL FOR NEXT