ಹಕ್ಕಿ-ಪಿಕ್ಕಿ ಜನರೊಂದಿಗೆ ಮೋದಿ ಸಂವಾದ 
ರಾಜ್ಯ

ಸೂಡನ್ ನಿಂದ ಬಂದ ಹಕ್ಕಿ-ಪಿಕ್ಕಿ ಸಮುದಾಯದ ಜನರೊಂದಿಗೆ ಮೋದಿ ಸಂವಾದ; ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಕಾವೇರಿ ಮೂಲಕ ಸುಡಾನ್‌ನಿಂದ ಕರೆತರಲಾದ ಹಕ್ಕಿಪಿಕ್ಕಿ ಬುಡಕಟ್ಟು ಜನರೊಂದಿಗೆ ಸಂವಾದ ನಡೆಸಿದ್ದಾರೆ.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು 'ಆಪರೇಷನ್ ಕಾವೇರಿ' ಮೂಲಕ ಸುಡಾನ್‌ನಿಂದ ಕರೆತರಲಾದ ಹಕ್ಕಿಪಿಕ್ಕಿ ಬುಡಕಟ್ಟು ಜನರೊಂದಿಗೆ ಸಂವಾದ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸುಡಾನ್ ನಲ್ಲಿ  ತಮ್ಮ ಸಮಯೋಚಿತ ಹಾಗೂ ಸುರಕ್ಷಿತ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಥಳಾಂತರಿಸಲ್ಪಟ್ಟವರು ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಸುಡಾನ್‌ನಲ್ಲಿ ಎದುರಿಸಿದ ಕಠಿಣ ಸಂದರ್ಭಗಳು  ಮತ್ತು ತಮ್ಮ ಸುರಕ್ಷತೆ ಖಾತ್ರಿಗೆ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿ ಹೇಗೆ ಸ್ಪಂದಿಸಿದವು ಎಂಬುದನ್ನು ವಿವರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

16ನೇ ಶತಮಾನದ ದೊರೆ ಮಹಾರಾಣಾ ಪ್ರತಾಪ್ ಜೊತೆಗೆ ತಮ್ಮ ಪೂರ್ವಜರು ಹೇಗೆ ನಿಂತಿದ್ದರು ಎಂಬುದನ್ನು ಬುಡಕಟ್ಟು ಜನರಿಗೆ ನೆನಪಿಸಿಕೊಂಡ ಪ್ರಧಾನಿ, ಇಡೀ ಜಗತ್ತಿನಲ್ಲಿ ಯಾವುದೇ ಭಾರತೀಯರು ಯಾವುದೇ ರೀತಿಯ ತೊಂದರೆಯಲ್ಲಿದ್ದರೆ, ಸಮಸ್ಯೆ ಬಗೆಹರಿಯುವವರೆಗೂ ಸರ್ಕಾರ ವಿರಮಿಸುವುದಿಲ್ಲ ಎಂದು ಒತ್ತಿ ಹೇಳಿದರು.

ಕೆಲವು ರಾಜಕಾರಣಿಗಳು ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದರು. ಅಲ್ಲದೇ ಭಾರತೀಯರು ಏಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರೆ, ಹೆಚ್ಚಿನ ಅಪಾಯವನ್ನು ಎದುರಿಸಬಹುದು ಎಂಬುದು ನಮ್ಮ ಕಳವಳವಾಗಿತ್ತು. ಆದ್ದರಿಂದ ಸರ್ಕಾರವು ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸದ್ದಿಲ್ಲದೆ ಕೆಲಸ ಮಾಡಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಹಕ್ಕಿಪಿಕ್ಕಿ ಜನರು ತಮ್ಮ ಪರವಾಗಿ ನಿಂತ ದೇಶದ ಬಲವನ್ನು ಸ್ಮರಿಸಬೇಕೆಂದು ಕೋರಿದ ಪ್ರಧಾನಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮತ್ತು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಲು ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು. ವಿದೇಶದಲ್ಲಿರುವ ಜನರು ಭಾರತೀಯ ಔಷಧಿಗಳ ಮೇಲೆ ಹೇಗೆ ನಂಬಿಕೆ ಇಟ್ಟಿದ್ದಾರೆ ಮತ್ತು ನಾವು ಭಾರತೀಯರು ಎಂದು ಹೇಳಿದ ಮೇಲೆ ಅವರು ಹೇಗೆ ಸಂತೋಷಪಟ್ಟರು ಎಂಬುದನ್ನು ಸ್ಥಳಾಂತರಿಸಲ್ಪಟ್ಟ ಜನರು ಪ್ರಧಾನಿಗೆ ತಿಳಿಸಿದರು ಎಂದು ಅಧಿಕಾರಿ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel