ಶಿವಮೊಗ್ಗ ಜಿಲ್ಲೆಯ ಮತಗಟ್ಟೆಯಲ್ಲಿ ಮತಚಲಾಯಿಸಲು ಬಂದಿದ್ದ ಮತದಾರರು 
ರಾಜ್ಯ

ಕರ್ನಾಟಕ ವಿಧಾನಸಭೆ ಚುನಾವಣೆ: ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ, ರಾಮನಗರದಲ್ಲಿ ಅತಿಹೆಚ್ಚು!

224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಬೆಂಗಳೂರು: 224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಈ ಪೈಕಿ, ರಾಮನಗರದಲ್ಲಿ ಅತಿ ಹೆಚ್ಚು ಅಂದರೆ ಶೇ 63.36 ರಷ್ಟು ಮತದಾನವಾಗಿದೆ. ಬೆಂಗಳೂರು ನಗರದಲ್ಲಿ ಮತದಾರ ಆಸಕ್ತಿ ತೋರಿಸದಿರುವಂತೆ ಕಾಣಿಸುತ್ತಿದ್ದು, ಅತಿ ಕಡಿಮೆ ಅಂದರೆ ಶೇ 41.82ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದ ಮೊದಲ ಆರು ಗಂಟೆಗಳಲ್ಲಿ ಶೇ 37.25ರಷ್ಟು ಮತದಾನವಾಗಿತ್ತು. ಇದೀಗ ಅತಿಹೆಚ್ಚು ಮತದಾನ ಮಾಡಲು ಮತದಾರರು ಮತಗಟ್ಟೆಗಳತ್ತ ತೆರಳುತ್ತಿದ್ದಾರೆ. 1 ಗಂಟೆ ಸುಮಾರಿಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ ಶೇ 47.79 ರಷ್ಟು ಮತದಾನವಾಗಿತ್ತು.

ಇನ್ನುಳಿದಂತೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಶೇ 60.14ರಷ್ಟು, ಬೆಂಗಳೂರು ನಗರದಲ್ಲಿ ಶೇ 41.82, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 56.42ರಷ್ಟು, ಬೆಳಗಾವಿಯಲ್ಲಿ ಶೇ 53.93, ಬಳ್ಳಾರಿಯಲ್ಲಿ ಶೇ 53.31, ಬೀದರ್‌ನಲ್ಲಿ ಶೇ 50.64, ವಿಜಯಪುರದಲ್ಲಿ ಶೇ 49, ಚಾಮರಾಜನಗರದಲ್ಲಿ ಶೇ 51.75, ಚಿಕ್ಕಬಳ್ಳಾಪುರ ಶೇ 58.74, ಚಿಕ್ಕಮಗಳೂರು ಶೇ 57.28, ಚಿತ್ರದುರ್ಗ ಶೇ 53.05, ದಕ್ಷಿಣ ಕನ್ನಡ ಶೇ 57.48, ದಾವಣಗೆರೆ ಶೇ 55.80, ಧಾರವಾಡ ಶೇ 50.25 ಮತ್ತು ಗದಗದಲ್ಲಿ ಶೇ 55.04 ರಷ್ಟು ಮತದಾನವಾಗಿದೆ.

ಇನ್ನುಳಿದಂತೆ, ಹಾಸನದಲ್ಲಿ ಶೇ 59.15ರಷ್ಟು, ಹಾವೇರಿಯಲ್ಲಿ ಶೇ 57.21ರಷ್ಟು, ಕೊಡಗಿನಲ್ಲಿ ಶೇ 58.24, ಕೋಲಾರದಲ್ಲಿ ಶೇ 54.81, ಕೊಪ್ಪಳದಲ್ಲಿ ಶೇ 56.45, ಮಂಡ್ಯದಲ್ಲಿ ಶೇ 58.39, ಮೈಸೂರಿನಲ್ಲಿ ಶೇ 52.45, ರಾಯಚೂರಿನಲ್ಲಿ ಶೇ 52.73, ಶಿವಮೊಗ್ಗದಲ್ಲಿ ಶೇ 56.10, ತುಮಕೂರಿನಲ್ಲಿ ಶೇ 58.45, ಉಡುಪಿಯಲ್ಲಿ ಶೇ 60.29, ಉತ್ತರ ಕನ್ನಡದಲ್ಲಿ ಶೇ 54.94, ವಿಜಯನಗರ ಜಿಲ್ಲೆಯಲ್ಲಿ ಶೇ 56.29 ಮತ್ತು ಯಾದಗಿರಿಯಲ್ಲಿ ಶೇ 46.61ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT