ಪ್ರಾತಿನಿಧಿಕ ಚಿತ್ರ 
ರಾಜ್ಯ

ಮೇ 17 ರಿಂದ ಕರ್ನಾಟಕ ಸೇರಿ ದಕ್ಷಿಣದ ಹಲವು ರಾಜ್ಯಗಳಲ್ಲಿ ಮೂರು ದಿನಗಳ ಆನೆ ಗಣತಿ

ಈಗಾಗಲೇ ಹುಲಿ ಗಣತಿಯನ್ನು ಮಾಡಲಾಗಿದ್ದು, ಅರಣ್ಯ ಇಲಾಖೆಯು ಈಗ ದಕ್ಷಿಣದ ರಾಜ್ಯಗಳಲ್ಲಿ ಆನೆ ಗಣತಿಯನ್ನು ನಡೆಸಲು ಮುಂದಾಗಿದೆ. ಮೂರು ದಿನಗಳ ಗಣತಿಯು ಮೇ 17 ರಂದು ಪ್ರಾರಂಭವಾಗಲಿದೆ. 

ಬೆಂಗಳೂರು: ಈಗಾಗಲೇ ಹುಲಿ ಗಣತಿಯನ್ನು ಮಾಡಲಾಗಿದ್ದು, ಅರಣ್ಯ ಇಲಾಖೆಯು ಈಗ ದಕ್ಷಿಣದ ರಾಜ್ಯಗಳಲ್ಲಿ ಆನೆ ಗಣತಿಯನ್ನು ನಡೆಸಲು ಮುಂದಾಗಿದೆ. ಮೂರು ದಿನಗಳ ಗಣತಿಯು ಮೇ 17 ರಂದು ಪ್ರಾರಂಭವಾಗಲಿದೆ. 

ಅಖಿಲ ಭಾರತ ಗಣತಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಇನ್ನೂ ಘೋಷಿಸದ ಕಾರಣ ಕರ್ನಾಟಕ ಅರಣ್ಯ ಇಲಾಖೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಮುಂದಾಳತ್ವ ವಹಿಸಿದೆ.

ಗಣತಿಯು ನೇರ ಮತ್ತು ಪರೋಕ್ಷ ಮೌಲ್ಯಮಾಪನ ವಿಧಾನಗಳನ್ನು ಒಳಗೊಂಡಿರುತ್ತದೆ. ನೀರಿನ ಹೊಂಡಗಳಲ್ಲಿ ಎಣಿಕೆ, ಸಗಣಿ ವಿಶ್ಲೇಷಣೆ, ಸಸ್ಯವರ್ಗ ಮತ್ತು MoEFCC ಪಟ್ಟಿ ಮಾಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಗಣತಿಯನ್ನು ಒಂದೇ ಸ್ವರೂಪದಲ್ಲಿ ಮತ್ತು ಅದೇ ಸಮಯದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾದಲ್ಲಿಯೂ ಮಾಡಲಾಗುತ್ತದೆ. ಇದು ಅಲೆದಾಡುವ ಆನೆಗಳ ಸಂಖ್ಯೆಯನ್ನು ತಿಳಿಯಲು ನೆರವಾಗುತ್ತದೆ. ಕರ್ನಾಟಕದ ಆನೆಗಳು ಈ ಎರಡು ರಾಜ್ಯಗಳಲ್ಲಿ ಹೆಚ್ಚಾಗಿ ಅಲೆದಾಡುತ್ತಿರುವ ಕಾರಣ ಮಹಾರಾಷ್ಟ್ರ ಮತ್ತು ಗೋವಾವನ್ನು ಸಹ ಗಣತಿಯ ವ್ಯಾಪ್ತಿಗೆ ತರಲಾಗಿದೆ ಎಂದು ರಂಜನ್ ಹೇಳಿದರು.

ಕರ್ನಾಟಕವು ಆರೋಗ್ಯವಂತ ಹುಲಿ ಮತ್ತು ಆನೆಗಳ ತವರು. ಕಳೆದ ಗಣತಿ ವರದಿಯ ಪ್ರಕಾರ, ಕರ್ನಾಟಕದಲ್ಲಿ 6,000 ಆನೆಗಳಿದ್ದು, ಅರಣ್ಯ ಅಧಿಕಾರಿಗಳು ತಮ್ಮ ನಿರೀಕ್ಷೆಗಳನ್ನು ನಿರ್ದಿಷ್ಟಪಡಿಸದಿದ್ದರೂ, ರಾಜ್ಯವು ಏರಿಕೆಯನ್ನು ದಾಖಲಿಸುವ ನಿರೀಕ್ಷೆಯಲ್ಲಿದೆ.

ಗಣತಿಗಾಗಿ ಎಲ್ಲ ರಾಜ್ಯಗಳ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಣತಿಯನ್ನು ದಾಖಲಿಸಲಾಗುತ್ತದೆ ಮತ್ತು ಛಾಯಾಚಿತ್ರ ತೆಗೆಯಲಾಗುತ್ತದೆ. ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಸಹ ಬಳಸಲಾಗುತ್ತದೆ. ವರದಿಗಳನ್ನು ಪ್ರತಿದಿನವೂ MoEFCC ಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ನೀಲಗಿರಿ ಜೀವಗೋಳದಲ್ಲಿ ಅತಿ ಹೆಚ್ಚು ಆನೆಗಳು ನೆಲೆಸಿರುವ ನಿರೀಕ್ಷೆಯಿದೆ' ಎಂದು ಮತ್ತೊಬ್ಬ ಅರಣ್ಯಾಧಿಕಾರಿ ಹೇಳಿದರು.

ಮಾನವ-ಆನೆ ಸಂಘರ್ಷದ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ಈ ಬಾರಿ ಮೌಲ್ಯಮಾಪನಕ್ಕೆ ಸ್ವಯಂಸೇವಕರು ಅಥವಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಿರಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿಬ್ಬಂದಿ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಂಜನ್ ಹೇಳಿದ್ದಾರೆ.

ದುಬಾರೆ ಶಿಬಿರದಲ್ಲಿ ಆನೆ ಸವಾರಿ

ದುಬಾರೆ ಆನೆ ಶಿಬಿರದಲ್ಲಿ ಆನೆ ಸವಾರಿ ಆರಂಭಿಸಲು ಮುಂದಾಗಿರುವ ಅರಣ್ಯ ಇಲಾಖೆ ವಿರುದ್ಧ ಪರಿಸರ ಸಂರಕ್ಷಣಾ ವಾದಿಗಳು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ (ಆನೆಚೌಕೂರ್‌ನಿಂದ ಮುತ್ತೂರು) ಸಫಾರಿ ಬಫರ್ ವಲಯದಲ್ಲಿ ಆನೆ ಹಿಂಬದಿ ಸವಾರಿ ಆರಂಭಿಸಲು ಯೋಜಿಸಲಾಗಿತ್ತು. ಆದರೆ, ಆಕ್ಷೇಪಣೆಗಳು ವ್ಯಕ್ತವಾದ ನಂತರ ಸರ್ಕಾರವು ಈ ಕ್ರಮವನ್ನು ಕೈಬಿಟ್ಟಿತು. ಆದರೆ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

'ಮಕ್ಕಳ ಶೈಕ್ಷಣಿಕ ಮತ್ತು ಪರಿಸರ ಹಿತದೃಷ್ಟಿಯಿಂದ ಮಾತ್ರ ಇದನ್ನು ಯೋಜಿಸಲಾಗುತ್ತಿದೆ. ಮೃದುವಾದ ಮಣ್ಣಿನಲ್ಲಿ ಗಮನಾರ್ಹವಾದ ತೂಕವನ್ನು ಹೊಂದಿರುವ ಆನೆಗಳಿಗೆ ಸ್ವಲ್ಪ ವಾಕಿಂಗ್ ಮಾಡಿಸುವುದರಿಂದ ಹೆಚ್ಚು ಹಾನಿ ಉಂಟಾಗುವುದಿಲ್ಲ. ಈ ಸಂಬಂಧ ಅಂತಿಮ ನಿರ್ಧಾರ ಕೈಗೊಂಡಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT