ರಾಜ್ಯ

ಡೆಂಗ್ಯೂ ಪ್ರಕರಣಗಳ ಅಂದಾಜಿಗೆ ಕೃತಕಬುದ್ದಿಮತ್ತೆ ಬಳಕೆ: BBMP ಪ್ರಯೋಗ

Srinivasamurthy VN

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ಊಹಿಸಲು ಕೃತಕ ಬುದ್ಧಿಮತ್ತೆ (AI) ಅನ್ನು ಬಳಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ.

IISC ಯಲ್ಲಿನ AI ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ (ARTPARK) ಡೆಂಗ್ಯೂ ಪ್ರಕರಣಗಳನ್ನು ಊಹಿಸಲು ಅಥವಾ ಅಂದಾಜಿಸಲು BBMP ಝೂನೋಟಿಕ್ ರೋಗಗಳ ಹರಡುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ AI ಅನ್ನು ಬಳಸಲು BBMP ಒಂದು ತಿಂಗಳ ಹಿಂದೆ ARTPARK ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ವೈರಸ್‌ನ ತೀವ್ರತೆಯನ್ನು ಊಹಿಸಲು ವಿಜ್ಞಾನಿಗಳು ಹಾಟ್‌ಸ್ಪಾಟ್‌ಗಳಿಂದ ವಯಸ್ಕ ಸೊಳ್ಳೆಗಳನ್ನು ಸಂಗ್ರಹಿಸುವ ಕಂಪನಿಯೊಂದಿಗೆ ಮೊತ್ತೊಂದು ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸುತ್ತಿದೆ ಮತ್ತು ಈಗಾಗಲೇ ಎಷ್ಟು ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂಬುದನ್ನು ಪರಿಶೀಲಿಸಲೂ ಕೂಡ ಯೋಜನೆ ರೂಪಿಸಲಾಗಿದೆ. ARTPARK ನಗರದಲ್ಲಿ ಡೆಂಗ್ಯೂ ಪ್ರಕರಣಗಳ ನೈಜ-ಸಮಯದ ಡೇಟಾವನ್ನು ಪ್ರತಿಬಿಂಬಿಸುವ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಹೆಚ್ಚುವರಿಯಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಬಹುದಾದ ಪ್ರದೇಶಗಳನ್ನು ಮತ್ತು ವಾರ್ಡ್ ಮಟ್ಟದಲ್ಲಿ ವೈರಸ್‌ನ ತೀವ್ರತೆಯನ್ನು ಊಹಿಸಲು ಸಾಧ್ಯವಾಗುವಂತಹ AI ಮಾದರಿಯನ್ನು ರಚಿಸಿದೆ.

ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಈ ಬಗ್ಗೆ ಮಾತನಾಡಿ, ಇಂತಹ ಮುನ್ಸೂಚಕ ಮಾದರಿಗಳು ನಗರದಲ್ಲಿ ಡೆಂಗ್ಯೂ ಪ್ರಕರಣಗಳನ್ನು ತಗ್ಗಿಸಲು ಮತ್ತು ಸೂಕ್ತ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಡೆಂಗ್ಯೂ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಪ್ರಕರಣಗಳ ಮೇಲೆ ನಿಗಾ ಇಡಲು ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಡ್ಯಾಶ್‌ಬೋರ್ಡ್ ಇಲಾಖೆಗೆ ಸಹಾಯ ಮಾಡುತ್ತದೆ. ಡ್ಯಾಶ್‌ಬೋರ್ಡ್‌ನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ಪರಿಶೀಲನೆಯಲ್ಲಿದೆ. 

ARTPARK ನ ಕಾರ್ಯಕ್ರಮ ನಿರ್ದೇಶಕ ಡಾ ಭಾಸ್ಕರ್ ರಾಜ್‌ಕುಮಾರ್ ಅವರು ಈ ಬಗ್ಗೆ TNIEಗೆ ಮಾಹಿತಿ ನೀಡಿದ್ದು, "ಮುಂದಿನ 30 ರಿಂದ 40 ದಿನಗಳಲ್ಲಿ ನಾವು ಇದನ್ನು ಲೈವ್ ಮಾಡಲು ಸಾಧ್ಯವಾಗುತ್ತದೆ. ಅಲ್ಲಿ ಡೆಂಗ್ಯೂ ಪ್ರಕರಣಗಳನ್ನು ಪತ್ತೆಹಚ್ಚುವುದು ಬಿಬಿಎಂಪಿಗೆ ಸುಲಭವಾಗುತ್ತದೆ. ಡೆಂಗ್ಯೂ ಪ್ರಕರಣಗಳನ್ನು ಊಹಿಸಲು ಬಂದಾಗ, ಸಂಸ್ಥೆಯು ಬಿಬಿಎಂಪಿಯಿಂದ ಡೆಂಗ್ಯೂ ಬಗ್ಗೆ 3 ವರ್ಷಗಳ ದತ್ತಾಂಶ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯಿಂದ ನೀರಿನ ಲಾಗಿಂಗ್ ಪ್ರದೇಶಗಳನ್ನು ಅರ್ಥಮಾಡಿಕೊಳ್ಳಲು ಹವಾಮಾನ ಅಂಕಿಅಂಶಗಳು ಮತ್ತು ಡೆಂಗ್ಯೂನ ಜೀನೋಮ್ ಅನುಕ್ರಮದ ಕೆಲವು ವೈಜ್ಞಾನಿಕ ಡೇಟಾವನ್ನು ಸಂಸ್ಛೆ ಸಂಗ್ರಹಿಸಿದೆ ಎಂದು ಹೇಳಿದರು.

ಅಂತೆಯೇ ಈ ಡೇಟಾವನ್ನು "ಡೆಂಗ್ಯೂ ಡೇಟಾಬೇಸ್‌ನಲ್ಲಿ ಅತಿಕ್ರಮಿಸಲಾಗುವುದು" ಮತ್ತು ಕಂಪ್ಯೂಟೇಶನಲ್ ಎಪಿಡೆಮಿಯಾಲಜಿ ಎಂದು ಕರೆಯಲ್ಪಡುವ ಮುನ್ಸೂಚನೆಗಳನ್ನು ರಚಿಸಲು ಸಂಕೀರ್ಣವಾದ ವಿಶ್ಲೇಷಣಾತ್ಮಕ ವ್ಯವಸ್ಥೆಯನ್ನು ಬಳಸಲಾಗುವುದು. ಈ ಮಾದರಿಯನ್ನು ನಿರ್ಮಿಸಲು 4-6 ತಿಂಗಳು ತೆಗೆದುಕೊಳ್ಳುತ್ತದೆ ಎಂದು ARTPARK ನ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾದರಿಯನ್ನು ಅಭಿವೃದ್ಧಿಪಡಿಸಿದ ನಂತರ ಅವರ ಭವಿಷ್ಯಕ್ಕಾಗಿ ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಇತರ ಕಾಯಿಲೆಗಳಿಗೆ ಅದೇ ಮಾದರಿಯನ್ನು ಅನ್ವಯಿಸಲಾಗುತ್ತದೆ ಎಂದು ಡಾ ರಾಜ್‌ಕುಮಾರ್ ಹೇಳಿದರು. 

ರಾಜ್ಯದಲ್ಲಿ ಇದುವರೆಗೆ 1,716 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
 

SCROLL FOR NEXT