ಭಾರತೀಯ ರೈಲ್ವೆ ಸಾಂದರ್ಭಿಕ ಚಿತ್ರ 
ರಾಜ್ಯ

ವೃದ್ಧ ತಂದೆ-ತಾಯಿಗೆ ತೊಂದರೆ: ಬೆಂಗಳೂರಿನ ವ್ಯಕ್ತಿಗೆ ಪರಿಹಾರ ನೀಡುವಂತೆ ರೈಲ್ವೆಗೆ ಗ್ರಾಹಕ ಆಯೋಗ ನಿರ್ದೇಶನ 

ಟಿಕೆಟ್ ಕಾಯ್ದಿರಿಸಿದರೂ ವೃದ್ಧ ತಂದೆ-ತಾಯಿ ಪ್ರಯಾಣಿಸಲು ದಂಡ ಪಾವತಿಸುವಂತೆ ಮಾಡಿದ್ದಕ್ಕಾಗಿ ಬೆಂಗಳೂರಿನ ನಿವಾಸಿಯೊಬ್ಬರಿಗೆ 10,000 ರೂ ವ್ಯಾಜ್ಯ ವೆಚ್ಚದೊಂದಿಗೆ 30,000 ರೂಪಾಯಿ ಪರಿಹಾರ ನೀಡುವಂತೆ ನೈಋತ್ಯ ರೈಲ್ವೆ (SWR) ಮತ್ತು IRCTC ಗೆ ಗ್ರಾಹಕ ಆಯೋಗ ನಿರ್ದೇಶನ ನೀಡಿದೆ.

ಬೆಂಗಳೂರು: ಟಿಕೆಟ್ ಕಾಯ್ದಿರಿಸಿದರೂ ವೃದ್ಧ ತಂದೆ-ತಾಯಿ ಪ್ರಯಾಣಿಸಲು ದಂಡ ಪಾವತಿಸುವಂತೆ ಮಾಡಿದ್ದಕ್ಕಾಗಿ ಬೆಂಗಳೂರಿನ ನಿವಾಸಿಯೊಬ್ಬರಿಗೆ 10,000 ರೂ ವ್ಯಾಜ್ಯ ವೆಚ್ಚದೊಂದಿಗೆ 30,000 ರೂಪಾಯಿ ಪರಿಹಾರ ನೀಡುವಂತೆ ನೈಋತ್ಯ ರೈಲ್ವೆ (SWR) ಮತ್ತು IRCTC ಗೆ ಗ್ರಾಹಕ ಆಯೋಗ ನಿರ್ದೇಶನ ನೀಡಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನೆಲೆಸಿರುವ ಅಲೋಕ್ ಕುಮಾರ್  ಸಲ್ಲಿಸಿರುವ ದೂರನ್ನು ಭಾಗಶಃ ಅನುಮತಿಸಿದ ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ,  ನೈರುತ್ಯ ರೈಲ್ವೆ ಮುಖ್ಯ ಬುಕಿಂಗ್ ಅಧಿಕಾರಿ ಮತ್ತು ಬೆಂಗಳೂರಿನ ಐಆರ್‌ಸಿಟಿಸಿ ಮಾರ್ಚ್ 21,2022 ರಿಂದ ವರ್ಷಕ್ಕೆ ಶೇ. 9 ರಷ್ಟು ಬಡ್ಡಿಯಂತೆ  ರೂ. 22, 300 ರೂಪಾಯಿ ಪಾವತಿಸಲು ಹೊಣೆಗಾರರಾಗಿದ್ದಾರೆ ಎಂದು ಹೇಳಿದೆ. ಅಲ್ಲದೇ,  ಮಾನಸಿಕ ಸಂಕಟಕ್ಕೆ ಪರಿಹಾರವಾಗಿ ರೂ 30,000 ಮತ್ತು ದೂರುದಾರರಿಗೆ ದಾವೆ ವೆಚ್ಚಕ್ಕೆ ರೂ. 10,000 ಪಾವತಿಸುವಂತೆ ಸೂಚಿಸಿದೆ. 

ಐಆರ್ ಸಿಟಿಸಿ ಅಥವಾ ನೈರುತ್ಯ ರೈಲ್ವೆ ವೆಬ್ ಸೈಟ್ ಹ್ಯಾಕಿಂಗ್ ಮಾಡಿರಬಹುದು ಎಂದು ನಾನವು ಭಾವಿಸುತ್ತೇವೆ. ಇದಲ್ಲದೆ, ದೂರುದಾರರ ಪೋಷಕರನ್ನು ತೊಂದರೆಗೆ ಒಳಪಡಿಸಿ, ದಂಡ ಪಾವಿತಿಸುವಂತೆ ಮಾಡಲಾಗಿದೆ. ಟಿಕೆಟ್ ಕಾಯ್ದಿರಿಸುವಾಗ, IRCTC ಯಿಂದ  ದೃಢಿಕೃತ ಟಿಕೆಟ್‌ಗಳನ್ನು ನೀಡಲಾಗಿದೆ. ಆದ್ದರಿಂದ, ದೃಢಪಡಿಸಿದ ಟಿಕೆಟ್ ಹೇಗೆ ಅಮಾನ್ಯವಾಯಿತು ಎಂಬುದು ತಿಳಿದುಬಂದಿಲ್ಲ. ಆದ್ದರಿಂದ, ಅವರ ಕಡೆಯಿಂದ ಸೇವೆಯ ಕೊರತೆಯಿದೆ ಎಂದು ನಾವು ಭಾವಿಸುತ್ತೇವೆ ಎಂದು ಅಧ್ಯಕ್ಷ ಶಿವರಾಮ ಕೆ, ಸದಸ್ಯರಾದ ಚಂದ್ರಶೇಖರ ಎಸ್ ನೂಲ ಮತ್ತು ರೇಖಾ ಸಾಯಣ್ಣವರ್ ಅವರನ್ನೊಳಗೊಳಗೊಂಡ ಆಯೋಗ ಹೇಳಿತು.

ದೂರುದಾರರು ತಮ್ಮ ಪೋಷಕರಿಗೆ ಮಾರ್ಚ್ 15, 2022 ರಂದು ರೂ 6,995 ಪಾವತಿಸಿ ಐಆರ್‌ಸಿಟಿಸಿ ಮೂಲಕ ದೃಢೀಕೃತ ಟಿಕೆಟ್ ನ್ನು ಮೇ 21 ರ ಪ್ರಯಾಣಕ್ಕಾಗಿ ಬುಕ್ ಮಾಡಿದ್ದರು. ಹೇಳಿದ ದಿನದಂದು ಪೋಷಕರು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ನವದೆಹಲಿ ಜಂಕ್ಷನ್‌ನಿಂದ ಬರೌನಿ ಜಂಕ್ಷನ್‌ಗೆ (BJU) ಹತ್ತಿದರು. ನಂತರ ಇತರ ಕೆಲವು ಪ್ರಯಾಣಿಕರು ದೂರುದಾರರು ಬುಕ್ ಮಾಡಿದ ಅದೇ ಸೀಟ್ ನಂಬರ್‌ ನಮ್ಮದು ಎಂದು ಹೇಳಿದ್ದರು. ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿದ ನಂತರ ಪಿಎನ್ ಆರ್ ನಂಬರ್ ಸರಿಯಾಗಿಯೇ ಇತ್ತು. ಆದರೆ, ಟಿಕೆಟ್ ನ ಪ್ರಸ್ತುತ ಸ್ಥಿತಿ 'ನೋ ರೂಮ್' ಎಂದು ತೋರಿಸಿತ್ತು . ಆದ್ದರಿಂದ ದಂಡ ಪಾವತಿಸಿ, ಇಲ್ಲವೇ ರೈಲಿನಿಂದ ಕೆಳಗೆ ಇಳಿಯಿರಿ ಎಂದು ದೂರುದಾರ ಪೋಷಕರಿಗೆ ಟಿಟಿಇ ಹೇಳಿದ್ದರು. 

ಯಾವುದೇ ಆಯ್ಕೆಯಿಲ್ಲದೆ, ದೂರುದಾರರು 6,995 ರೂ ಪಾವತಿಸಿದ ರೈಲಿನಲ್ಲಿಯೇ  ಪೋಷಕರು ರೂ. 22, 330 ಪಾವತಿಸಿ ಪ್ರಯಾಣಿಸಿದ್ದರು. ನಂತರ ದೂರುದಾರರು ರೈಲ್ವೆ ಅಧಿಕಾರಿಗಳಿಗೆ ಸಮಸ್ಯೆಯನ್ನು ವರದಿ ಮಾಡಿದ್ದರು. ಆದರೆ, ಅದಕ್ಕೆ ನಾವು ಹೊಣೆಯಲ್ಲ ಎಂದು ಹೇಳಿ ಅಧಿಕಾರಿಗಳು ಹಣ ಪಾವತಿಸಲು ನಿರಾಕರಿಸಿದ್ದರು.  ಆದಾಗ್ಯೂ, ಭಾರತೀಯ ರೈಲ್ವೆ ಮುಂಗಡ ವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ದೃಢೀಕೃತ ಟಿಕೆಟ್ ಅನ್ನು ಇನ್ನೊಬ್ಬ ಪ್ರಯಾಣಿಕರಿಗೆ ಮಾರಾಟ ಮಾಡಲಾಗಿದೆ ಎಂದು ದೂರುದಾರರು ವಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT