ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಜನ 
ರಾಜ್ಯ

ಬರಗಾಲ ಆವರಿಸುತ್ತಿದ್ದಂತೆ ಜೀವನೋಪಾಯಕ್ಕಾಗಿ ನಗರಕ್ಕೆ ಜನರ ವಲಸೆ: ಗದಗ ಜಿಲ್ಲೆಯ ಹಳ್ಳಿಗಳು ಖಾಲಿಯೋ ಖಾಲಿ!

ಭೀಕರ ಬರಗಾಲವು ಭೂಮಿಯನ್ನು ಬಂಜರುಗೊಳಿಸುತ್ತಿದ್ದು, ಗದಗ ಜಿಲ್ಲೆಯ ಹಳ್ಳಿಗಳು ವೃದ್ಧಾಶ್ರಮಗಳ ರೀತಿ ಕಾಣುತ್ತಿವೆ.  ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅನೇಕ ರೈತರು ಮತ್ತು ದಿನಗೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಗದಗ: ಭೀಕರ ಬರಗಾಲವು ಭೂಮಿಯನ್ನು ಬಂಜರುಗೊಳಿಸುತ್ತಿದ್ದು, ಗದಗ ಜಿಲ್ಲೆಯ ಹಳ್ಳಿಗಳು ವೃದ್ಧಾಶ್ರಮಗಳ ರೀತಿ ಕಾಣುತ್ತಿವೆ. ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅನೇಕ ರೈತರು ಮತ್ತು ದಿನಗೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಈ ವಲಸೆ ಹೋಗುವುದು ಪ್ರತಿ ವರ್ಷವೂ ಪುನರಾವರ್ತನೆಯಾಗುತ್ತಿದೆ, ಆದರೆ ಈ ವರ್ಷ ಪರಿಸ್ಥಿತಿ ಗಂಭೀರವಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಲಸೆ  ಕಂಡುಬರುತ್ತಿದೆ. ಮಾನ್ಸೂನ್ ವಿಫಲವಾದ ಕಾರಣ ಕೃಷಿ ಕೆಲಸಗಳು ಬೇಗನೆ ಮುಗಿದುಹೋದವು, ಕೆಲಸ ಮಾಡಬಹುದಾದ ವಯಸ್ಸಿನ ಜನರ ವಲಸೆಯು ಹೆಚ್ಚಾಗತೊಡಗಿತು.

ಇತರ ವರ್ಷಗಳಲ್ಲಿ, ಅವರು ಅಕ್ಟೋಬರ್ ಮತ್ತು ನವೆಂಬರ್ ವರೆಗೆ ಕೃಷಿ ಕೆಲಸ ಮುಂದುವರೆಸುತ್ತಿದ್ದರು,  ಆದರೆ  ಮಳೆಯ ಕೊರತೆಯಿಂದಾಗಿ ಸದ್ಯ  ಅವರಿಗೆ ಈಗ ಕೆಲಸವಿಲ್ಲ. ಹಾಗಾಗಿ ಉದ್ಯೋಗ ಅರಸಿ ಗೋವಾ, ಮಂಗಳೂರು, ಪುಣೆ, ಬೆಂಗಳೂರು ನಗರಗಳಿಗೆ ತೆರಳುತ್ತಿದ್ದಾರೆ.

ಜಿಲ್ಲೆಯ ಲಕ್ಷ್ಮೇವಾರ, ಶಿರಹಟ್ಟಿ, ಮುಂಡರಗಿ, ಗಂಜೇಂದ್ರಗಡ ಮತ್ತು ನರಗುಂದ ತಾಲೂಕುಗಳು ಹಲವು ತಾಂಡಾಗಳನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ನಿತ್ಯ ನಗರಗಳಿಗೆ ವಲಸೆ ಹೋಗುತ್ತಾರೆ.  ಗದಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಪುನರಾರಂಭಗೊಂಡಾಗ ಹಿಂತಿರುಗುತ್ತಾರೆ.

ನನ್ನ ಹೆಂಡತಿ ಮತ್ತು ಇಬ್ಬರು ಸಹೋದರಿಯರೊಂದಿಗೆ ನಾವು ಐದು ಜನರ ಕುಟುಂಬ ಉದ್ಯೋಗ ಅರಸಿ ದೊಡ್ಡ ನಗರಕ್ಕೆ ಹೋಗುತ್ತಿದ್ದೇವೆ. ಕಳೆದ ಎರಡು ತಿಂಗಳಿಂದ ಇಲ್ಲಿ ಸುಮ್ಮನೆ ಕುಳಿತಿದ್ದೇವೆ. ಮಂಗಳೂರಿಗೆ ಅಥವಾ ಬೆಂಗಳೂರಿಗೆ ಹೋದರೆ ನಮಗೆ ದಿನಕ್ಕೆ 700-800 ರೂ. ಸಿಗುತ್ತದೆ.  ಇಲ್ಲಿ ನಮಗೆ 250-300 ರೂ. 300 ರೂಪಾಯಿ ಸಿಕ್ಕರೂ ಪರವಾಗಿಲ್ಲ, ನಾವು ಕೆಲಸ ಮಾಡುತ್ತೇವೆ ಆದರೆ ಈಗ ನಮಗೆ ಇಲ್ಲಿ ಕೆಲಸವಿಲ್ಲ.

ನಾವು ಕೇವಲ ಸರ್ಕಾರದ ಖಾತರಿಗಳ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ಎಲ್ಲಾ ಐದು ಖಾತರಿಗಳು ಕಾರ್ಯರೂಪಕ್ಕೆ ಬಂದರೆ ಮತ್ತು ಮುಂದಿನ ದಿನಗಳಲ್ಲಿ ಮಳೆಯಾದರೆ ನಾವು ಖಂಡಿತವಾಗಿಯೂ ಹಿಂತಿರುಗುತ್ತೇವೆ ಎಂದು ಗದಗ ಸಮೀಪದ ಮುಳಗುಂದದ ಶಾಂತವೀರಪ್ಪ ಹುಯಿಲಗೋಳ ತಿಳಿಸಿದ್ದಾರೆ.

ನಾವು ಅನೇಕ ಮಾನವ ದಿನಗಳನ್ನು (ನರೇಗಾ ಯೋಜನೆಯಡಿ) ರಚಿಸಿದ್ದೇವೆ, ಆದರೆ ಇನ್ನೂ ಕೆಲವರು ವಲಸೆ ಹೋಗುತ್ತಿದ್ದಾರೆ. ನಮ್ಮ ಸಿಬ್ಬಂದಿ ಹಲವರಿಗೆ ಮನವರಿಕೆ ಮಾಡಿಕೊಟ್ಟು ವಲಸೆ ಹೋಗದಂತೆ ತಡೆದಿದ್ದಾರೆ ಎಂದು ಗದಗ ಜಿಲ್ಲಾ ಪಂಚಾಯಿತಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT