ರಾಜ್ಯ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ: ಕೆಆರ್'ಎಸ್ ಡ್ಯಾಮ್ ನಲ್ಲಿ 100 ಅಡಿ ದಾಟಿದ ನೀರಿನ ಸಂಗ್ರಹ

Manjula VN

ಮಂಡ್ಯ: ಕಳೆದ 3 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗುತ್ತಿದ್ದು, ಇದರ ಪರಿಣಾಮ ಕೆಆರ್'ಎಸ್ ಡ್ಯಾಮ್ ನಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.

ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್‌ಎನ್‌ಎಲ್) ಅಧಿಕಾರಿಗಳ ಪ್ರಕಾರ, ಗರಿಷ್ಠ 124.80 ಅಡಿಗಳ ಪೈಕಿ ಜಲಾಶಯದಲ್ಲಿ ಇದೀಗ ನೀರಿನ ಮಟ್ಟ 100.36 ಅಡಿಗೆ ತಲುಪಿದೆ. 49.452 ಟಿಎಂಸಿ ಪೈಕಿ ಜಲಾಶಯದಲ್ಲಿ 23.095 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಜಲಾಶಯದಲ್ಲಿ 9,052 ಕ್ಯೂಸೆಕ್ ಒಳಹರಿವಿದ್ದರೆ, 1,482 ಕ್ಯೂಸೆಕ್ ಹೊರಹರಿವಿದೆ ಎಂದು ಹೇಳಿದ್ದಾರೆ.

ಕೆಲ ತಿಂಗಳುಗಳಿಂದ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಸೆಪ್ಟೆಂಬರ್ ನಿಂದ ಡ್ಯಾಮ್ ನಲ್ಲಿ ನೀರಿನ ಮಟ್ಟ ಕುಸಿದಿತ್ತು. ಜೊತೆಗೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ, ಕಾವೇರಿ ನೀರಿನ ಕುರಿತು ಆತಂಕ ಶುರುವಾಗಿತ್ತು.

ಇದೀಗ ಕೊಂಚ ಮಟ್ಟಿಗೆ ಮಳೆಯಾಗಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ 100.36 ಅಡಿಗೆ ತಲುಪಿದೆ. ತಮಿಳುನಾಡಿನ ನೀರಿನ ಖ್ಯಾತೆ ನಡುವೆ ಜಲಾಶಯದಲ್ಲಿ ಒಳಹರಿವು ಕೊಂಚ ಮಟ್ಟಿಗೆ ಏರಿಕೆಯಾಗಿರುವುದು ನಿಟ್ಟಿಸಿರು ಬಿಡುವಂತಾಗಿದೆ.

SCROLL FOR NEXT