ರಾಜ್ಯ

ಮಳೆ ಅಭಾವದಿಂದ ಈರುಳ್ಳಿ ಇಳುವರಿ ಕುಸಿತ; ಮುಂದಿನ ದಿನಗಳಲ್ಲಿ ಬೆಲೆ ಗನನಕ್ಕೇರುವ ಸಾಧ್ಯತೆ!

Ramyashree GN

ಶಿವಮೊಗ್ಗ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಅಭಾವದಿಂದಾಗಿ ಬೆಳೆ ಇಳುವರಿ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದ ಬಹುತೇಕ ತಾಲ್ಲೂಕುಗಳು ಭೀಕರ ಬರದಿಂದ ತತ್ತರಿಸುತ್ತಿರುವುದರಿಂದ ಈರುಳ್ಳಿ ಬೆಳೆಯುವ ಪ್ರದೇಶಗಳಾದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಗದಗ, ವಿಜಯಪುರ ಮತ್ತು ಕರ್ನಾಟಕದ ಇತರ ಭಾಗಗಳಿಗೆ ಭಾರಿ ಹೊಡೆತ ಬಿದ್ದಿದೆ. 

ರಾಜ್ಯದಲ್ಲಿ ಹೊಸ ಈರುಳ್ಳಿ ಬೆಳೆಯ ಒಟ್ಟು ಇಳುವರಿ ಕೇವಲ ಶೇ 40ರಷ್ಟಿದ್ದು, ಈಗಾಗಲೇ ಶೇ 25ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಬೆಳೆ ಹೊರತುಪಡಿಸಿ, ಇಡೀ ಈರುಳ್ಳಿ ಮಾರುಕಟ್ಟೆ ನಾಸಿಕ್ ಮತ್ತು ಮಹಾರಾಷ್ಟ್ರದ ಇತರ ಈರುಳ್ಳಿ ಬೆಳೆಯುವ ಪ್ರದೇಶಗಳನ್ನು ಅವಲಂಬಿಸಿದೆ ಎಂದು ಅವರು ಹೇಳಿದರು.

ಕಳೆದ 15 ದಿನಗಳಿಂದ ಶಿವಮೊಗ್ಗ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಸುಮಾರು 25 ರಿಂದ 30 ರೂ. ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರಿಂದ 35 ರೂ.ಗೆ ಮಾರಾಟವಾಗುತ್ತಿತ್ತು. ಸದ್ಯ ಶಿವಮೊಗ್ಗದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 32 ರಿಂದ 35 ರೂ.ಗೆ ಏರಿಕೆಯಾಗಿದೆ.

ಇದೇ ವೇಳೆ ಈರುಳ್ಳಿ ವ್ಯಾಪಾರಿ ರಾಮು ಮಾತನಾಡಿ, ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ 40ರಷ್ಟು ತೆರಿಗೆ ವಿಧಿಸಿದೆ. ಈ ಕ್ರಮವು ಮಹಾರಾಷ್ಟ್ರದ ಪ್ರಮುಖ ಮಾರಾಟಗಾರರ ಈರುಳ್ಳಿ ರಫ್ತಿನ ಮೇಲೆ ಪರಿಣಾಮ ಬೀರಿದೆ ಎಂದರು.

ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್) ಬೆಂಬಲದೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಿಂದ ಈರುಳ್ಳಿಯನ್ನು ಖರೀದಿಸುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿದೆ. ಮುಂದಿನ ನವೆಂಬರ್‌ನಿಂದ ಈರುಳ್ಳಿ ಬೆಲೆಯಲ್ಲಿ ಸ್ಥಿರವಾದ ಏರಿಕೆಗೆ ಸಾಕ್ಷಿಯಾಗಬಹುದು ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಯ ಆಧಾರದ ಮೇಲೆ ಈ ಬೆಲೆ ಬದಲಾಗಬಹುದು.

SCROLL FOR NEXT