ಬಿಎಂಟಿಸಿ ಬಸ್ಸು (ಪ್ರಾತಿನಿಧಿಕ ಚಿತ್ರ) 
ರಾಜ್ಯ

ವಿಡಿಯೋ: ಅನಗತ್ಯವಾಗಿ ಶಕ್ತಿ ಯೋಜನೆಯಡಿ ಟಿಕೆಟ್‌ ಹರಿದು ಬಿಸಾಡಿದ ಬಿಎಂಟಿಸಿ ಕಂಡಕ್ಟರ್ ಅಮಾನತು

ಪ್ರೊತ್ಸಾಹಧನವನ್ನು ಪಡೆಯಲು ಶಕ್ತಿ ಯೋಜನೆ ಉಚಿತ ಟಿಕೆಟ್‌ಗಳನ್ನು 'ಅನಗತ್ಯವಾಗಿ' ಹರಿದು ಎಸೆದಿರುವ ಆರೋಪದಲ್ಲಿ ಬಿಎಂಟಿಸಿ ಚಾಲಕ ಕಂ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಇವರು ಟಿಕೆಟ್ ಹರಿದು ಬಿಸಾಡಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

ಬೆಂಗಳೂರು: ಪ್ರೊತ್ಸಾಹಧನವನ್ನು ಪಡೆಯಲು ಶಕ್ತಿ ಯೋಜನೆ ಉಚಿತ ಟಿಕೆಟ್‌ಗಳನ್ನು 'ಅನಗತ್ಯವಾಗಿ' ಹರಿದು ಎಸೆದಿರುವ ಆರೋಪದಲ್ಲಿ ಬಿಎಂಟಿಸಿ ಚಾಲಕ ಕಂ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಇವರು ಟಿಕೆಟ್ ಹರಿದು ಬಿಸಾಡಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡಕ್ಟರ್ ಎಲೆಕ್ಟ್ರಿಕ್ ಟಿಕೆಟಿಂಗ್ ಯಂತ್ರದಿಂದ ಶಕ್ತಿ ಯೋಜನೆಯಡಿ ಟಿಕೆಟ್‌ಗಳನ್ನು ಹರಿದು ಹರಿದು, ಕಿಟಕಿಯಿಂದ ಹೊರಗೆ ಎಸೆಯುವುದನ್ನು ಕಾಣಬಹುದು.

ಇವು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ಶೂನ್ಯ ದರದ ಟಿಕೆಟ್‌ಗಳಾಗಿವೆ.

ಮಹಿಳಾ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ವಿಡಿಯೋ ಮಾಡಿ ಕಂಡಕ್ಟರ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನೀವು ಈ ಟಿಕೆಟ್‌ಗಳನ್ನು ಏಕೆ ಎಸೆಯುತ್ತಿದ್ದೀರಿ? ನಿಮ್ಮ ಸ್ವಂತ ಹಣದಿಂದ ನೀವು ಅವರಿಗೆ ಪಾವತಿಸುತ್ತೀರಾ?. ನೀವು ನಕಲಿ ಟಿಕೆಟ್‌ಗಳನ್ನು ಮುದ್ರಿಸುತ್ತಿರುವುದರಿಂದ ಸರ್ಕಾರವು (ಶಕ್ತಿ ಯೋಜನೆಯಿಂದಾಗಿ) ನಷ್ಟವನ್ನು ಅನುಭವಿಸುತ್ತದೆ. ಟ್ಯಾಕ್ಸ್ ಕಟ್ಟುವವರು ನಾವೇ ಅಲ್ಲವೇ? ಎಂದು ಮಹಿಳೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಎಂಟಿಸಿಯಿಂದ ಪ್ರೋತ್ಸಾಹಧನ ಪಡೆಯಲು ಕಂಡಕ್ಟರ್‌ಗಳು ಸುಳ್ಳು ಟಿಕೆಟ್‌ಗಳನ್ನು ಮುದ್ರಿಸುತ್ತಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಿಗಮವು ತನ್ನ ಬಸ್ ಸಿಬ್ಬಂದಿಗೆ ಅವರಿಗೆ ನೀಡಿದ್ದ ಗುರಿಗಳನ್ನು ಪೂರೈಸಿದರೆ ಇನ್ಸೆಂಟಿವ್ ಅನ್ನು ನೀಡುತ್ತದೆ. 

ವಿಡಿಯೋಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ, ವಿಡಿಯೋದಲ್ಲಿರುವ ಸಿಬ್ಬಂದಿ ಪ್ರಕಾಶ್ ಅರ್ಜುನ ಕೋಟ್ಯಾಲ ಆಗಿದ್ದು, ಡಿಪೋ 17, ಮಾರ್ಗ ಸಂಖ್ಯೆ 242 ಬಿ (ಮೆಜೆಸ್ಟಿಕ್-ತಾವರೆಕೆರೆ) ಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೇಂದ್ರ ಕಚೇರಿಗೆ ಕರೆದು ವಿಚಾರಣೆಯ ನಂತರ ಅವರನ್ನು ಅಮಾನತುಗೊಳಿಸಿದೆ ಎಂದು ಹೇಳಿದರು.

ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಬಸ್ ಸಿಬ್ಬಂದಿ ಯಾವುದೇ ದುರ್ವರ್ತನೆ ತೋರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಎಚ್ಚರಿಕೆ ನೀಡಿದ್ದಾರೆ ಎಂದು ನಿಗಮ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT