ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರು: ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸಿಐಎಸ್‌ಎಫ್ ಸಬ್ಇನ್ಸ್‌ಪೆಕ್ಟರ್ ಆತ್ಮಹತ್ಯೆ

ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್‌ಎಂಪಿಎ) ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಬ್ಇನ್‌ಸ್ಪೆಕ್ಟರ್ ಭಾನುವಾರ ಮುಂಜಾನೆ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್‌ಎಂಪಿಎ) ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಬ್ಇನ್‌ಸ್ಪೆಕ್ಟರ್ ಭಾನುವಾರ ಮುಂಜಾನೆ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಾಯಚೂರು ನಿವಾಸಿ ಜಾಕೀರ್ ಹುಸೇನ್ (58) ಎಂದು ಗುರುತಿಸಲಾಗಿದೆ.

ತನ್ನ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಹುಸೇನ್ ಅವರನ್ನು ಎನ್‌ಎಂಪಿಎ ಮುಖ್ಯ ಗೇಟ್‌ನಲ್ಲಿ ರಾತ್ರಿ ಪಾಳಿಯಲ್ಲಿ ನಿಯೋಜಿಸಲಾಗಿತ್ತು. ಅವರು ತಮ್ಮ ಪಾಳಿ ಮುಗಿಸಿ ಬೆಳಗಿನ ಪಾಳಿಯವರಿಗೆ ಉಸ್ತುವಾರಿಯನ್ನು ಹಸ್ತಾಂತರಿಸಿದ್ದಾರೆ.

ಬೆಳಗ್ಗೆ 6.30ರ ಸುಮಾರಿಗೆ ಮುಖ್ಯ ಗೇಟ್‌ ಪಕ್ಕದಲ್ಲಿರುವ ವಾಶ್‌ರೂಮ್‌ಗೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

ಮತ್ತೊಂದು ಗುಡ್ ನ್ಯೂಸ್: ಕದನ ವಿರಾಮದ ನಂತರ ಹಾರ್ಮುಜ್ ದಾಟಿದ ಎಲ್‌ಪಿಜಿ ಹೊತ್ತ ಭಾರತದ ಹಡಗು

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

5 ವರ್ಷದ ಬಾಲಕನ ಜೊತೆ ಅಸ್ವಾಭಾವಿಕ s*x; ವಸತಿ ಶಾಲೆ ವಿದ್ಯಾರ್ಥಿಯ ಗಂಟಲು ಸೀಳಿದ ಗಾರ್ಡ್!

SCROLL FOR NEXT