ಬೆಂಗಳೂರು: ಈ ಬಾರಿ ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ಬರ (Drought) ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರಾಜ್ಯ ಸರ್ಕಾರವೇ ಬರಪೀಡಿತ ತಾಲೂಕುಗಳನ್ನು ಪಟ್ಟಿದೆ.
ಈ ಮಧ್ಯೆ ಬಿಜೆಪಿ ಬರ ಅಧ್ಯಯನಕ್ಕಾಗಿ ನವೆಂಬರ್ 3ರಿಂದ ರಾಜ್ಯಾದ್ಯಂತ ಪ್ರವಾಸಕೈಗೊಳ್ಳಲಿದ್ದು ನವೆಂಬರ್ 10ರವರೆಗೆ ಪ್ರವಾಸ ಕೈಗೊಳ್ಳಲಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರ 17 ತಂಡಗಳು ಬರ ಪ್ರವಾಸ ನಡೆಸಲಿವೆ.
ಬಿಎಸ್ ಯಡಿಯೂರಪ್ಪ ನೇತೃತ್ವದ ತಂಡ ತುಮಕೂರು ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದು, ಸಿ.ಟಿ.ರವಿ ನೇತೃತ್ವದ ಮತ್ತೊಂದು ತಂಡ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದೆ. ಅರವಿಂದ ಬೆಲ್ಲದ ಸದಸ್ಯರೊಂದಿಗೆ ರಾಯಚೂರು ಮತ್ತು ಯಾದಗಿರಿಗೆ ಭೇಟಿ ನೀಡಲಿದರೆ, ಕೆ ಎಸ್ ಈಶ್ವರಪ್ಪ ನೇತೃತ್ವದ ತಂಡ ಬಳ್ಳಾರಿ ಮತ್ತು ಕೊಪ್ಪಳಕ್ಕೆ ತೆರಳಲಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಮೈಸೂರು ಮತ್ತು ಚಾಮರಾಜನಗರ ತಂಡ, ಬಿವೈ ವಿಜಯೇಂದ್ರ ನೇತೃತ್ವದ ತಂಡ ಬೀದರ್ ಮತ್ತು ಕಲಬುರಗಿಗೆ ಭೇಟಿ ನೀಡಲಿದೆ. ಶ್ರೀರಾಮುಲು ತಂಡ ಹಾವೇರಿ ಮತ್ತು ಗದಗಕ್ಕೆ ಭೇಟಿ ನೀಡಲಿದ್ದು, ಅರವಿಂದ ಲಿಂಬಾವಳಿ ತಂಡ ಬೆಳಗಾವಿ ಮತ್ತು ಚಿಕ್ಕೋಡಿಗೆ ಭೇಟಿ ನೀಡಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಕೃತಕ ವಿದ್ಯುತ್ ಅಭಾವ ಸೃಷ್ಟಿ; ಜಾರ್ಜ್ಗೆ ಹೈಕಮಾಂಡ್ ಏನಾದರೂ 'ಫಿಕ್ಸ್' ಮಾಡಿದೆಯೇ?: ಎಚ್ ಡಿಕೆ
ವಿ ಸುನೀಲ್ ಕುಮಾರ್ ನೇತೃತ್ವದ ತಂಡ ಶಿವಮೊಗ್ಗ ಮತ್ತು ಉತ್ತರ ಕನ್ನಡಕ್ಕೆ ತೆರಳಲಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತಂಡ ದಾವಣಗೆರೆ ಮತ್ತು ಚಿತ್ರದುರ್ಗಕ್ಕೆ ಭೇಟಿ ನೀಡಲಿದೆ. ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಮಂಡ್ಯ ಮತ್ತು ಹಾಸನ ತಂಡ, ಗೋವಿಂದ ಕಾರಜೋಳ ಅವರ ತಂಡ ಧಾರವಾಡ ಮತ್ತು ವಿಜಯನಗರಕ್ಕೆ ಭೇಟಿ ನೀಡಲಿದೆ. ನಳಿನ್ ಕುಮಾರ್ ಕಟೀಲ್ ತಂಡ ವಿಜಯಪುರ ಮತ್ತು ಬಾಗಲಕೋಟೆಗೆ ಭೇಟಿ ನೀಡಲಿದ್ದು, ಆರಗ ಜ್ಞಾನೇಂದ್ರ ತಂಡ ಉಡುಪಿ ಮತ್ತು ಚಿಕ್ಕಮಗಳೂರಿಗೆ ಭೇಟಿ ನೀಡಲಿದೆ.
ಆರ್ ಅಶೋಕ್ ನೇತೃತ್ವದ ತಂಡವು ಮಂಗಳೂರು ಮತ್ತು ಕೊಡಗಿನಲ್ಲಿ, ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಕ್ಕೆ ತಂಡವನ್ನು ಮುನ್ನಡೆಸಲಿದ್ದಾರೆ.