ರಾಜ್ಯ

ಸನಾತನ ಧರ್ಮ ನಿರ್ಮೂಲನೆಗೆ ಕರೆ: ಉದಯನಿಧಿ ಹೇಳಿಕೆ ಖಂಡಿಸಿದ ಪೇಜಾವರ ಶ್ರೀ

Lingaraj Badiger

ಮಂಗಳೂರು: ಸನಾತನ ಧರ್ಮದ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೋಮವಾರ ಖಂಡಿಸಿದ್ದಾರೆ.

'ಸನಾತನ ಧರ್ಮದ ನಿರ್ಮೂಲನೆ ಬಗ್ಗೆ ಮಾತನಾಡುವವರಿಗೆ ಸಮಾಜದಲ್ಲಿ ಶಾಂತಿ ಬೇಕಾಗಿಲ್ಲ. ಈ ಹೇಳಿಕೆ ಮತ್ತು ಮನಸ್ಥಿತಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಒಬ್ಬ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜದಲ್ಲಿ ವಿಷ ಬೀಜ ಬಿತ್ತುವುದು ಸರಿಯಲ್ಲ ಎಂದು ಪೇಜಾವರ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸನಾತನ ಎಂದರೆ ಶಾಶ್ವತವಾದದ್ದು. ಸಮಾಜದ ಎಲ್ಲಾ ಜನರು ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ಸಮಾಜದಲ್ಲಿ ಪ್ರತಿಯೊಬ್ಬರ ಒಳಿತಿಗಾಗಿ ಶ್ರಮಿಸುವುದೇ ಸನಾತನ ಧರ್ಮದ ಸಾರವಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಅವರು ಸನಾತನ ಧರ್ಮವನ್ನು ಕೊರೋನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದಾರೆ ಮತ್ತು ಅಂತಹ ವಿಷಯಗಳನ್ನು ವಿರೋಧಿಸಬಾರದು. ಆದರೆ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.

SCROLL FOR NEXT