ಸಿಎಂ ಸಿದ್ದರಾಮಯ್ಯ 
ರಾಜ್ಯ

ಎಂಜಿನಿಯರ್‌ಗಳು ಸಮಾಜದ ಬೆನ್ನೆಲುಬು: ಸಿಎಂ ಸಿದ್ದರಾಮಯ್ಯ

ಎಂಜಿನಿಯರ್‌ಗಳು ದೇಶ ಮತ್ತು ಸಮಾಜದ ನಿರ್ಮಾತೃಗಳು, ದೇಶವನ್ನು ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯುವವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಬೆಂಗಳೂರು: ಎಂಜಿನಿಯರ್‌ಗಳು ದೇಶ ಮತ್ತು ಸಮಾಜದ ನಿರ್ಮಾತೃಗಳು, ದೇಶವನ್ನು ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯುವವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಬೆಂಗಳೂರಿನ ಇಂಜಿನಿಯರ್‌ಗಳ ಸಂಸ್ಥೆ (ಭಾರತ) ಶುಕ್ರವಾರ ಆಯೋಜಿಸಿದ್ದ 56ನೇ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.

"ಇಂದು ಇಂಜಿನಿಯರ್‌ಗಳ ದಿನ ಮತ್ತು ವಿಶ್ವ ಪ್ರಜಾಪ್ರಭುತ್ವ ದಿನ (ಸೆಪ್ಟೆಂಬರ್ 15), ಈ ಎರಡರ ಉದ್ದೇಶವು ಉತ್ತಮ ಸಮಾಜವನ್ನು ನಿರ್ಮಿಸುವುದಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಭವಿಷ್ಯದ ಸಮಾಜ ಹೇಗಿರಬೇಕು ಎಂಬ ದೃಷ್ಟಿಯನ್ನು ಹೊಂದಿದ್ದರು ಮತ್ತು ನಮ್ಮಲ್ಲೂ ಅದೇ ದೂರದೃಷ್ಟಿ ಇರಬೇಕು. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದಲೇ ಮೈಸೂರಿನ‌ ಅಭಿವೃದ್ಧಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾತನಾಡಿ, ಎಂಜಿನಿಯರ್‌ಗಳಿಲ್ಲದೆ ಜಗತ್ತಿಲ್ಲ. ನಮ್ಮ ಸಮಾಜದ ಪ್ರತಿಯೊಂದು ಅಂಶಗಳಲ್ಲಿ ಎಂಜಿನಿಯರ್‌ಗಳು ಅವಿಭಾಜ್ಯ ಪಾತ್ರವನ್ನು ವಹಿಸುತ್ತಾರೆ. ವಿಶ್ವದ ಇತರ ಶಾಲಾ-ಕಾಲೇಜುಗಳಿಗೆ ಸಮಾನವಾದ ಎಂಜಿನಿಯರಿಂಗ್ ಸಂಸ್ಥೆಗಳನ್ನು ನಾವು ವಿನ್ಯಾಸಗೊಳಿಸಬೇಕಾಗಿದೆ ಮತ್ತು ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.

ಕಲಾತ್ಮಕ ಕಟ್ಟಡಗಳನ್ನು ನಿರ್ಮಿಸುವ ಕುರಿತು ಮಾತನಾಡಿ, ಎಂಜಿನಿಯರ್‌ಗಳು ಖಾಸಗಿ ಸಂಸ್ಥೆಗಳಿಗೆ ಮಾತ್ರವಲ್ಲದೆ, ಸರ್ಕಾರಿ ಕಟ್ಟಡಗಳು ಮತ್ತು ಯೋಜನೆಗಳಿಗೆ ಉತ್ತಮ ವಿನ್ಯಾಸ ರಚನೆಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ 15 ಖ್ಯಾತ ಇಂಜಿನಿಯರ್‌ಗಳನ್ನು ಪುರಸ್ಕರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!