ರಾಜ್ಯ

ನಿರ್ಜಲೀಕರಣ ಪ್ರಕರಣಗಳಲ್ಲಿ ಹೆಚ್ಚಳ: ನಗರದಲ್ಲಿ ORS ಮಾರಾಟ ಶೇ.60ರಷ್ಟು ಏರಿಕೆ!

Rise in dehydration cases, ORS sale spikes by 60 per cent in Bengaluru

ಬೆಂಗಳೂರು: ದಿನಕಳೆಯುತ್ತಿದ್ದಂತೆ ನಗರದಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಬಿಸಿಲ ಝಳಕ್ಕೆ ಜನರು ಕಂಗಾಲಾಗಿದ್ದಾರೆ. ಈ ನಡುವೆ ನೀರಿನ ಸಮಸ್ಯೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.

ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಸಾಕಷ್ಟು ಜನರು ನಿರ್ಲಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಗರದ ಹಲವು ಆಸ್ಪತ್ರೆಗಳಿಗೆ ವಾಂತಿ ಮತ್ತು ಅತಿಸಾರ ರೋಗ ಲಕ್ಷಣಗಳೊಂದಿಗೆ ಹಲವು ಜನರು ದಾಖಲಾಗುತ್ತಿದ್ದಾರೆ. ಈ ನಡುವೆ ORSಗೆ ಬೇಡಿಕೆಗಲೂ ಹೆಚ್ಚಾಗುತ್ತಿದ್ದು, ಜನರು ಔಷಧಾಲಯಗಳಿಂದಷ್ಟೇ ಅಲ್ಲದೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೂ ಖರೀದಿ ಮಾಡುತ್ತಿದ್ದಾರೆ.

ಮಕ್ಕಳ ತಜ್ಞ ಮತ್ತು ಆತ್ರೇಯಾ ಆಸ್ಪತ್ರೆಯ ಸಂಸ್ಥಾಪಕ ಡಾ.ನಾರಾಯಣಸ್ವಾಮಿ ಮಾತನಾಡಿ, ಕಳೆದ ಕೆಲವು ವಾರಗಳಿಂದ ಸಾಕಷ್ಟು ಜನರು ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 23 ಮಕ್ಕಳು ಮತ್ತು 20 ವಯಸ್ಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಮಸ್ಯೆಯು ಎಲ್ಲಾ ವಯೋಮಾನದವರಲ್ಲೂ ಕಂಡು ಬರುತ್ತದೆ. ಆದರೆ, ಚಿಕ್ಕಮಕ್ಕಳು, ದೀರ್ಘಕಾಲಿಕ ರೋಗಳಿಂದ ಬಳಲುತ್ತಿರುವವರು ಹಾಗೂ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ತಾಪಮಾನ ಹೆಚ್ಚಾದಂತೆ ಬೆವರುವಿಕೆ ಹೆಚ್ಚಾಗುತ್ತಿದೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಯಿಂದ ದೂರ ಉಳಿಯಲು ಜನರು ಹೆಚ್ಚೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವನೆ ಮಾಡುವುದು ಮುಖ್ಯ ಎಂದು ತಿಳಿಸಿದ್ದಾರೆ.

ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಸಲಹೆಗಾರ ಡಾ.ನಿಧಿನ್ ಮೋಹನ್ ಅವರು ಮಾತನಾಡಿ ವಯಸ್ಸಾದ ವ್ಯಕ್ತಿಗಳು, ವಿಶೇಷವಾಗಿ ಬೆವರು ಸ್ರವಿಸುವಿಕೆಯನ್ನು ಕಡಿಮೆ ಮಾಡುವ ಔಷಧಿಗಳನ್ನು ಸೇವಿಸುವವರು ಮತ್ತು ಆಗಾಗ್ಗೆ ಮದ್ಯಪಾನ ಮಾಡುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆಂದು ಹೇಳಿದ್ದಾರೆ.

ದೇಹದ ಉಷ್ಣತೆ ಹೆಚ್ಚಳ, ನಾಡಿ ಬಡಿತದಲ್ಲಿ ಹೆಚ್ಚಳ ಮತ್ತು ಮಾನಸಿಕ ಗೊಂದಲದಂತಹ ರೋಗಲಕ್ಷಣಗಳಿರುವವರನ್ನು ಕನಿಷ್ಠ 48 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವ ಹಾಗೂ ತೀವ್ರ ನಿಗಾದಲ್ಲಿರುವ ಅಗತ್ಯವಿರುತ್ತದೆ, ಏಕೆಂದರೆ ತೀವ್ರ ಶಾಖದ ಹೊಡೆತವು ಮೂತ್ರಪಿಂಡಗಳಿಗೆ ಹಾನಿ ಮತ್ತು ಇತರ ಪ್ರಮುಖ ಹಾನಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಈ ನಡುವೆ ನಗರದಲ್ಲಿ ORS ನ ಮಾರಾಟವು ಶೇ.60 ರಷ್ಟು ಏರಿಕೆಯಾಗಿದೆ. ಪ್ರತಿ ದಿನ ಕನಿಷ್ಠ ನಾಲ್ಕು ಸ್ಟಾಕ್‌ಗಳ ಪೈಕಿ 2 ಸ್ಟಾಕ್ ಗಳು ಸಂಪೂರ್ಣವಾಗಿ ಮಾರಾಟವಾಗುತ್ತಿದೆ ಎಂದು ಆನ್‌ಲೈನ್ ವಿತರಣಾ ವೇದಿಕೆಗೆ ಸಂಬಂಧಿಸಿದ ಮಾರಾಟ ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಇದಲ್ಲದೆ, ಔಷಧಾಲಯಗಳಲ್ಲೂ ಕೂಡ ORS ಮಾರಾಟದಲ್ಲಿ ಹೆಚ್ಚಳಗಳು ಕಂಡು ಬಂದಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT