ಸಂಗ್ರಹ ಚಿತ್ರ 
ರಾಜ್ಯ

ದಂಡದ ಎಚ್ಚರಿಕೆ ನೀಡಿದ BWSSB: ಏರೇಟರ್‌ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ

ನೀರಿನ ದುಂದು ವೆಚ್ಚ ತಗ್ಗಿಸಲು ಬೆಂಗಳೂರು ಜಲ ಮಂಡಳಿಯು ನಲ್ಲಿಗಳಿಗೆ ಕಡ್ಡಾಯಗೊಳಿಸಿರುವ ಏರೇಟರ್‌ ಅಳವಡಿಕೆಯ ಗಡುವಿನ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದೆ.

ಬೆಂಗಳೂರು: ನೀರಿನ ದುಂದು ವೆಚ್ಚ ತಗ್ಗಿಸಲು ಬೆಂಗಳೂರು ಜಲ ಮಂಡಳಿಯು ನಲ್ಲಿಗಳಿಗೆ ಕಡ್ಡಾಯಗೊಳಿಸಿರುವ ಏರೇಟರ್‌ ಅಳವಡಿಕೆಯ ಗಡುವಿನ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದೆ.

ಏಪ್ರಿಲ್ 30ರವರೆಗೂ ಜಲ ಮಂಡಳಿ ಕಾಲಾವಕಾಶ ನೀಡಿದ್ದು, ಎಲ್ಲೆಡೆ ನಲ್ಲಿಗಳಿಗೆ ಏರೇಟರ್‌ ಅಳವಡಿಸಬೇಕು ಎಂದು ಸೂಚನೆ ನೀಡಿದೆ.

ನೀರಿನ ಅಭಾವದ ಹಿನ್ನೆಲೆಯಲ್ಲಿ ಜಲಮಂಡಳಿಯು ವಾಣಿಜ್ಯ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು, ಧಾರ್ಮಿಕ ಸ್ಥಳಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಮಾ 31ರೊಳಗೆ ಏರಿಯೇಟರ್‌ ಅಳವಡಿಸುವಂತೆ ಆದೇಶಿಸಿತ್ತು.

ಗ್ರಾಹಕರ ಮನವಿಗೆ ಸ್ಪಂದಿಸಿ ಏ. 7ರವರೆಗೆ ಗಡುವು ವಿಸ್ತರಿಸಲಾಗಿತ್ತು. ಆದರೆ, ನಗರದ ಹಲವೆಡೆ ಏರೇಟರ್‌‌ಗಳ ಅಳವಡಿಕೆ ಆಗಿಲ್ಲ. ಅಲ್ಲದೇ, ಗ್ರಾಹಕರು ಮತ್ತೆ ಕಾಲಾವಕಾಶ ನೀಡಲು ಕೋರಿರುವ ಹಿನ್ನೆಲೆಯಲ್ಲಿ ಜಲಮಂಡಳಿಯು ಏ. 30ರವರೆಗೆ ಗಡುವನ್ನು ವಿಸ್ತರಿಸಿದೆ.

ಈ ಅವಧಿಯೊಳಗೆ ಕಡ್ಡಾಯವಾಗಿ ನಲ್ಲಿಗಳಿಗೆ ಏರೇಟರ್‌ ಅಳವಡಿಸಬೇಕು. ಇಲ್ಲವಾದಲ್ಲಿ, ಜಲಮಂಡಳಿ ಕಾಯಿದೆ 1964ರ ಕಲಂ 109ರಂತೆ 5000 ರೂ. ದಂಡ ಮತ್ತು ಪ್ರತಿ ದಿನ ಹೆಚ್ಚುವರಿಯಾಗಿ 500 ರೂ. ದಂಡ ವಿಧಿಸಲಾಗುವುದು ಎಚ್ಚರಿಕೆ ನೀಡಲಾಗಿದೆ.

ಅಲ್ಲದೆ, 1964ರ ಕಲಂ 53ರಂತೆ ಮಂಡಳಿಯು ಸರಬರಾಜು ಮಾಡುತ್ತಿರುವ ನೀರಿನಲ್ಲಿ ಶೇ 50ರಷ್ಟನ್ನು ಕಡಿತಗೊಳಿಸಲಾಗುವುದು. ವಸತಿ ಸಮುಚ್ಚಯಗಳೂ ಏರೇಟರ್‌ ಅಳವಡಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿನ ನಲ್ಲಿಗಳಿಗೆ ಮಂಡಳಿ ವತಿಯಿಂದಲೇ ಏರೇಟರ್‌ ಅಳವಡಿಸಿ, ಅದಕ್ಕೆ ತಗುಲುವ ವೆಚ್ಚವನ್ನು ಗ್ರಾಹಕರ ನೀರಿನ ಶುಲ್ಕದಲ್ಲಿ ಸಂಗ್ರಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT