ಸಂಗ್ರಹ ಚಿತ್ರ 
ರಾಜ್ಯ

ಕೌತುಕ ಮೂಡಿಸುವ ಬಾಹ್ಯಾಕಾಶ ತಂತ್ರಜ್ಞಾನ: ನೆಹರೂ ತಾರಾಲಯದಲ್ಲಿ 'ಗಗನಯಾನ ಸ್ಕೈ ಶೋ' ಪ್ರದರ್ಶನ

ಯುವಜನರಿಗೆ ಭಾರತದ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಆಸಕ್ತಿ ಮೂಡಿಸಲು, ಅವರಿಗೆ ಪ್ರೇರಣೆ ನೀಡುವ ಸಲುವಾಗಿ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ) ತನ್ನ ಸಭಾಂಗಣದಲ್ಲಿ ಇಂದಿನಿಂದ (ಭಾನುವಾರ) ಸ್ಕೈ ಶೋ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆರಂಭಿಸಿದೆ.

ಬೆಂಗಳೂರು: ಯುವಜನರಿಗೆ ಭಾರತದ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಆಸಕ್ತಿ ಮೂಡಿಸಲು, ಅವರಿಗೆ ಪ್ರೇರಣೆ ನೀಡುವ ಸಲುವಾಗಿ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ) ತನ್ನ ಸಭಾಂಗಣದಲ್ಲಿ ಇಂದಿನಿಂದ (ಭಾನುವಾರ) ಸ್ಕೈ ಶೋ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆರಂಭಿಸಿದೆ.

ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಭಾರತೀಯ ಅಂತರಿಕ್ಷ ಯಾತ್ರೆ ಎಂದು ಶೀರ್ಷಿಕೆ ನೀಡಲಾಗಿದ್ದು, ಶನಿವಾರ ಇದರ ಮೊದಲ ಪ್ರದರ್ಶನಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹಾಗೂ ಇಸ್ರೋ ಗಗನ್ ಯಾನ್ ಯೋಜನಾ ನಿರ್ದೇಶಕ ಆರ್.ಹಟನ್ ಅವರು ಚಾಲನೆ ನೀಡಿದರು.

ಭಾರತೀಯ ವಿಜ್ಞಾನಿಗಳ ಅಂತರಿಕ್ಷದ ಆರಂಭಿಕ ಹೆಜ್ಜೆ, ಮೈಲುಗಲ್ಲಾದ ಪಿಎಸ್ಎಲ್'ವಿ, ಜಿಎಸ್ಎಲ್'ವಿಗಳ ಉಡಾವಣೆಗಳನ್ನು ಆ್ಯನಿಮೇಷನ್, ಅತ್ಯಾಧುನಿಕ ವಿಡಿಯೋಗ್ರಫಿ ತಂತ್ರಜ್ಞಾನದ ಮೂಲಕ ಈ ಸ್ಕೈ ಶೋ ಮೂಡಿಬಂದಿದೆ.

ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (HSFC) ನಲ್ಲಿ ನಾಲ್ಕು ಗಗನಯಾತ್ರಿಗಳ ತರಬೇತಿ, HLVM3 ಉಡಾವಣಾ ವಾಹನದ ಅಭಿವೃದ್ಧಿ, ಉಡಾವಣೆಗೆ ನಿಖರವಾದ ಸಿದ್ಧತೆ ಮತ್ತು ಭಾರತೀಯ ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳುವ ವಿಧಾನವನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಇದು ವಯಸ್ಕರಿಗೆ ಮತ್ತು ಮಕ್ಕಳಿಗೆ ಬಾಹ್ಯಾಕಾಶದ ಕುರಿತು ಆಸಕ್ತಿಗಳನ್ನು ಮೂಡಿಸಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಎಎಸ್ ಕಿರಣ್ ಕುಮಾರ್ ಅವರು, 1960ರಲ್ಲಿನ ಸೌಂಡಿಂಗ್ ರಾಕೆಟ್ ನಿಂದ ಇಂದಿನ ಗಗನಯಾನದವರೆಗೆ ಮಕ್ಕಳಿಗೂ ಅರ್ಥವಾಗುವಂತೆ ಸರಳವಾಗಿ ರೂಪಿಸಲಾಗಿದೆ. ಚಂದ್ರಯಾನ-3ರ ಬಳಿಕ ವಿಶ್ವದಾದಂತ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಅದಕ್ಕೆ ಇಂತಹ ಶೋಗಳು ಹೆಚ್ಚು ನೀರೆರೆಯಲಿವೆ. ಸ್ಕೈ ಶೋ ಕೇವಲ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ)ಗೆ ಮಾತ್ರ ಸೀಮಿತವಾಗದೆ ಹೆಚ್ಚಿನ ನಗರಗಳು ಮತ್ತು ರಾಜ್ಯಗಳನ್ನು ತಲುಪಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT