ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು 
ರಾಜ್ಯ

ವಿಶ್ವ ಆರ್ಥಿಕತೆಯಲ್ಲಿ ಭಾರತ ದೇಶ ಅಗ್ರ 3ರ ಸ್ಥಾನಕ್ಕೇರಲು ರಾಜಕೀಯ ಸ್ಥಿರತೆ ಬೇಕು: ನಿರ್ಮಲಾ ಸೀತಾರಾಮನ್

2004ರಿಂದ 2014ರವರೆಗೆ ಯುಪಿಎ ಮೈತ್ರಿಕೂಟದ ಆಡಳಿತವನ್ನು ಕರಾಳ ದಶಕ ಎಂದು ಬಣ್ಣಿಸಿದ ಅವರು ಆರ್ಥಿಕತೆಯು ಕೆಟ್ಟ ಸ್ಥಿತಿಗೆ ಹೋಗಿತ್ತು. 2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಂದ ಮೇಲೆ ಈಗ ನಾವು ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿ ಮಾರ್ಪಟ್ಟಿದ್ದೇವೆ.

ಬೆಂಗಳೂರು: ದೇಶದ ಆರ್ಥಿಕತೆಯನ್ನು ಪೋಷಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಸೂಚಿಯಾಗಿದ್ದು, ಇದನ್ನು ಆದ್ಯತೆಯ ಮೇಲೆ ತೆಗೆದುಕೊಂಡಿರುವ ಬಿಜೆಪಿ ಸರ್ಕಾರವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯ ಮಾಡಿದ್ದಾರೆ.

2004ರಿಂದ 2014ರವರೆಗೆ ಯುಪಿಎ ಮೈತ್ರಿಕೂಟದ ಆಡಳಿತವನ್ನು ಕರಾಳ ದಶಕ ಎಂದು ಬಣ್ಣಿಸಿದ ಅವರು ಆರ್ಥಿಕತೆಯು ಕೆಟ್ಟ ಸ್ಥಿತಿಗೆ ಹೋಗಿತ್ತು. 2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಂದ ಮೇಲೆ ಈಗ ನಾವು ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿ ಮಾರ್ಪಟ್ಟಿದ್ದೇವೆ. ಮುಂದಿನ ಕೆಲವು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಏರುವ ವಿಶ್ವಾಸವಿದೆ. ಇದಕ್ಕೆ ನಮ್ಮಲ್ಲಿ ರಾಜಕೀಯ ಸ್ಥಿರತೆ ಬೇಕು ಎಂದರು.

ಬೆಂಗಳೂರಿನಲ್ಲಿ ನಿನ್ನೆ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರದ ಭ್ರಷ್ಟಾಚಾರ ಅಥವಾ ನಿರ್ಧಾರದ ತಪ್ಪು ಹೆಜ್ಜೆಗಳನ್ನು ಕಂಡುಹಿಡಿಯಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿದ್ದರೂ ಅವರಿಗೆ ಸಾಧ್ಯವಾಗುತ್ತಿಲ್ಲ" ಎಂದರು.

ಪ್ರಧಾನಿ ಮೋದಿಯವರು 2047 ರ ವೇಳೆಗೆ ‘ವಿಕಸಿತ ಭಾರತ’ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. “ನಮ್ಮ ಯುವಕರು ಶಿಕ್ಷಣ, ಉದ್ಯೋಗ ಮತ್ತು ಇತರ ಅವಕಾಶಗಳಲ್ಲಿ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಭಾರತವು ಒಂದಾಗಲಿದೆ ಎಂದರ್ಥ. 2013-14ರಲ್ಲಿ ಮತ್ತು ಈಗ ನಾವು ಭಾರತವನ್ನು ನೋಡಿದ್ದರಲ್ಲಿ ಇದು ಗಮನಾರ್ಹ ಬದಲಾವಣೆಯಾಗಿದೆ. ಪ್ರಯತ್ನವಿಲ್ಲದೆ ಅಭಿವೃದ್ಧಿ ಆಗುವುದಿಲ್ಲ ಎಂದರು.

ಜನರು ಶ್ರಮಿಸುತ್ತಿದ್ದಾರೆ. ಆದರೆ ನಾಯಕತ್ವವು ಜನರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದಾಗ, ಬೆಳವಣಿಗೆಯು ನಿಶ್ಚಲವಾಗಿರುತ್ತದೆ. ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತ ದೇಶ ಒಂದು ಎನಿಸಿಕೊಳ್ಳಲು ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ಸಚಿವೆ ಎತ್ತಿ ತೋರಿಸಿದರು. ನಮಗೆ ಸ್ಪಷ್ಟ ದೃಷ್ಟಿ ಬೇಕು. ಆರ್ಥಿಕತೆಯ ಪ್ರತಿಯೊಂದು ಅಂಶದಲ್ಲೂ ನಮಗೆ ತೀವ್ರವಾದ ಕ್ರಮದ ಅಗತ್ಯವಿದೆ ಎಂದರು.

ಮತದಾರರ ಬಹುಮತದ ಜನಾದೇಶದಿಂದಾಗಿ ಭಾರತವು ದೊಡ್ಡ ನ್ಯೂನತೆಯಿಂದ ಹೊರಬಂದಿದೆ. ನಾಯಕತ್ವವು ಈಗ ರಾಷ್ಟ್ರಕ್ಕೆ ಆದ್ಯತೆ ನೀಡುತ್ತದೆಯೇ ಹೊರತು ಕುಟುಂಬಕ್ಕಲ್ಲ. 2009 ಮತ್ತು 2014 ರ ನಡುವೆ ಭಾರತವು ದುಪ್ಪಟ್ಟು ದರದ ಹಣದುಬ್ಬರವನ್ನು ಕಂಡಿದೆ ಎಂದರು. "ಕಾರ್ಪೊರೇಟ್ ಹೂಡಿಕೆಗಳು ಕಡಿಮೆಯಾಗಿದೆ, ರೆಡ್-ಟ್ಯಾಪಿಸಂ ಮತ್ತು ತೆರಿಗೆ ಭಯೋತ್ಪಾದನೆ ದುರ್ಬಲ ಆರ್ಥಿಕತೆಯ ಎಲ್ಲಾ ಅಂಶಗಳಾಗಿವೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳಲ್ಲಿ 24,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ, ಆದರೆ ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಅದು 16,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿತ್ತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT