ವಿಶೇಷ ಮತಗಟ್ಟೆ 
ರಾಜ್ಯ

Lok Sabha Election 2024 Voting: ಗಮನ ಸೆಳೆದ ಕನಕಪುರ: ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಮತಗಟ್ಟೆ, "ಹಸಿರು ಉಳಿಸಿ" ಅಭಿಯಾನ

ಲೋಕಸಭೆ ಚುನಾವಣೆ 2024 ರ ಎರಡನೇ ಹಂತ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕನಕಪುರ ಮತಗಟ್ಟೆಯಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಅರಣ್ಯ ಥೀಮ್‌ನೊಂದಿಗೆ ವಿಶೇಷ ಮತಗಟ್ಟೆ ಸ್ಥಾಪಿಸಿದ್ದಾರೆ.

ಕನಕಪುರ: ಲೋಕಸಭೆ ಚುನಾವಣೆ 2024 ರ ಎರಡನೇ ಹಂತ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕನಕಪುರ ಮತಗಟ್ಟೆಯಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶೇಷ ಅರಣ್ಯ ಥೀಮ್‌ನೊಂದಿಗೆ ವಿಶೇಷ ಮತಗಟ್ಟೆ ಸ್ಥಾಪಿಸಿದ್ದಾರೆ.

ಹಸಿರು ಉಳಿಸಿ ಅಭಿಯಾನದಲ್ಲಿ ಮತದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನಕಪುರ ಅರಣ್ಯ ಇಲಾಖೆಯು ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ವಿಶಿಷ್ಟ ಉಪಕ್ರಮವನ್ನು ಅನಾವರಣಗೊಳಿಸಿದ್ದು, 'ಅಡವಿ' (ಅರಣ್ಯ ಎಂದರ್ಥ) ಎಂದು ಹೆಸರಿಸಲಾದ ವಿಶೇಷ ಮತದಾನ ಕೇಂದ್ರ ಸ್ಥಾಪನೆ ಮಾಡಿದೆ.

ಮಾತ್ರವಲ್ಲದೇ ಇಲ್ಲಿ ಮತಗಟ್ಟೆಯಲ್ಲಿ ಮತದಾನ ಮಾಡುವ ಪ್ರತೀ ಮತದಾರರಿಗೂ ಸಸಿಗಳನ್ನು ನೀಡುವ ಮೂಲಕ ಅರಣ್ಯ ಉಳಿಸಿ ಅಭಿಯಾನಕ್ಕೆ ಮತ್ತಷ್ಟು ಮೆರುಗು ತಂದಿದೆ.

ಕನಕಪುರದ ಜಿಟಿಟಿಸಿ ಮತಗಟ್ಟೆ ಸಂಖ್ಯೆ-79 ರಲ್ಲಿ ಈ ವಿಶೇಷ ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಅರಣ್ಯ ಥೀಮ್ ನಲ್ಲಿ ಈ ಮತಗಟ್ಟೆ ನಿರ್ಮಿಸಲಾಗಿದೆ. ಇದು ಹಚ್ಚ ಹಸಿರಿನ ನಡುವೆ ಇರುವಂತಹ ಅಪೂರ್ವ ಅನುಭವವನ್ನು ಮತದಾರರಿಗೆ ನೀಡುತ್ತದೆ. ಸಾಂಪ್ರದಾಯಿಕ ಮತಗಟ್ಟೆಯನ್ನು ಸ್ಥಳೀಯ ಸಸ್ಯ ಮತ್ತು ವಿಷಯಾಧಾರಿತ ಅಲಂಕಾರಗಳೊಂದಿಗೆ ಸಂಪೂರ್ಣವಾದ ಪ್ರಶಾಂತ ಅರಣ್ಯ ವ್ಯವಸ್ಥೆಯಾಗಿ ಪರಿವರ್ತಿಸಲಾಗಿದೆ.

ಈ ಕುರಿತು ಮಾತನಾಡಿರುವ ಕನಕಪುರ ಪಾಲಿಕೆ ಆಯುಕ್ತ ಮಹದೇವ ಸ್ವಾಮಿ, 'ಹವಾಮಾನ ವೈಪರೀತ್ಯ ದೊಡ್ಡ ಸಮಸ್ಯೆಯಾಗಿರುವುದರಿಂದ ಕನಕಪುರದಲ್ಲಿ ಅರಣ್ಯ ವಿಷಯದ ಮೇಲೆ ಈ ಬೂತ್ ಸ್ಥಾಪಿಸಿದ್ದೇವೆ... ಅರಣ್ಯ ಉಳಿಸಲು ಹಾಗೂ ನೀರು ಹರಿಸಲು ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಅರಣ್ಯ ಮತ್ತು ಜಲ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮತದಾರರಿಗೆ ಅಧಿಕಾರಿಗಳು ಇಲ್ಲಿ ಸಸಿಗಳನ್ನು ವಿತರಿಸುತ್ತಿದ್ದಾರೆ ಎಂದರು.

ಇಡೀ ಮತಗಟ್ಟೆಯನ್ನು ಗಿಡಗಳಿಂದ ಸಿಂಗರಿಸಲಾಗಿದ್ದು, ಗೋಡೆಗಳಿಗೆ ಹಸಿರು ಎಲೆಗಳಿಂದ ತೋರಣ ನಿರ್ಮಿಸಲಾಗಿದೆ. ಮತದಾನ ಮಾಡುತ್ತಿದ್ದವರಿಗೆ ಒಂದೊಂದು ಸಸಿಗಳನ್ನು ಕೂಡ ನೀಡಲಾಗುತ್ತಿತ್ತು. ಅರಣ್ಯ ಇಲಾಖೆ ಮತ್ತು ಚುನಾವಣಾ ಆಯೋಗದ ಕ್ರಮ ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT