ರಾಜ್ಯಸಭೆಯಲ್ಲಿ ಅಜಯ್ ಮಾಕನ್ 
ರಾಜ್ಯ

ರಾಜ್ಯಸಭೆಯಲ್ಲಿ ಕೊಡವ ಹಾಕಿ ಪ್ರತಿಧ್ವನಿ: ವಿಷಯ ಪ್ರಸ್ತಾಪಿಸಿದ ಅಜಯ್ ಮಾಕನ್

ಕೊಡಗು ಅಥವಾ ಕೂರ್ಗ್ ಅನ್ನು ಸಾಮಾನ್ಯವಾಗಿ "ಭಾರತೀಯ ಹಾಕಿಯ ತೊಟ್ಟಿಲು" ಎಂದು ಕರೆಯಲಾಗುತ್ತದೆ, ಏಳು ಒಲಿಂಪಿಯನ್‌ಗಳು ಸೇರಿದಂತೆ 50 ಅಂತಾರಾಷ್ಟ್ರೀಯ ಹಾಕಿ ಆಟಗಾರರನ್ನು ಕೊಡಗು ನಿರ್ಮಿಸಿದೆ ಎಂದು ಮಾಕನ್ ಒತ್ತಿ ಹೇಳಿದರು.

ಬೆಂಗಳೂರು: ಮಾಜಿ ಕೇಂದ್ರ ಕ್ರೀಡಾ ಸಚಿವ ಮತ್ತು ಕರ್ನಾಟಕದ ರಾಜ್ಯಸಭಾ ಸಂಸದ ಅಜಯ್ ಮಾಕನ್ ಗುರುವಾರ ರಾಜ್ಯಸಭೆಯಲ್ಲಿ ಪ್ರಮುಖ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಕೊಡವ ಹಾಕಿ ಬಗ್ಗ ಪ್ರಸ್ತಾಪಿಸಿದ ಮಾಕೇನ್ ಈ ಕ್ರೀಡೆಗೆ ಬೆಂಬಲ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಪಂದ್ಯಾವಳಿಯ ಮಹತ್ವದ ಬಗ್ಗೆ ಮಾತನಾಡಿದ ಮಾಕನ್ 1997 ರಲ್ಲಿ ಪ್ರಾರಂಭವಾದ ಕೊಡವ ಹಾಕಿ ಅತಿದೊಡ್ಡ ಹಾಕಿ ಪಂದ್ಯಾವಳಿಯಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದೆ, ಸುಮಾರು 4,834 ಆಟಗಾರರು ಭಾಗವಹಿಸಿದ್ದಾರೆ. ಕೊಡಗು ಅಥವಾ ಕೂರ್ಗ್ ಅನ್ನು ಸಾಮಾನ್ಯವಾಗಿ "ಭಾರತೀಯ ಹಾಕಿಯ ತೊಟ್ಟಿಲು" ಎಂದು ಕರೆಯಲಾಗುತ್ತದೆ, ಏಳು ಒಲಿಂಪಿಯನ್‌ಗಳು ಸೇರಿದಂತೆ 50 ಅಂತಾರಾಷ್ಟ್ರೀಯ ಹಾಕಿ ಆಟಗಾರರನ್ನು ಕೊಡಗು ನಿರ್ಮಿಸಿದೆ ಎಂದು ಮಾಕನ್ ಒತ್ತಿ ಹೇಳಿದರು.

ಭಾರತೀಯ ಹಾಕಿಗೆ ಗಣನೀಯ ಕೊಡುಗೆ ನೀಡಿರುವ ಈ ಪ್ರದೇಶವನ್ನು ಬೆಂಬಲಿಸಲು ಅನುದಾನ ಅಥವಾ ಮೂಲಸೌಕರ್ಯ ಅಭಿವೃದ್ಧಿ ನಿಧಿಗಳನ್ನು ಒದಗಿಸಲು ಪರಿಗಣಿಸುತ್ತೀರಾ ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಉಪ ಸಚಿವ ರಕ್ಷಾ ಕಾಡ್ಸೆ. ಕೂರ್ಗ್ ಹಾಕಿ ಪಂದ್ಯಾವಳಿ ಗಿನ್ನೆಸ್ ದಾಖಲೆ ಮಾಡಿರುವುದನ್ನು ಒಪ್ಪಿಕೊಂಡರು. ಆದರೆ ಇದಕ್ಕೆ ರಾಜ್ಯವು ಮನವಿ ಮಾಡದ ಹೊರತು ನೇರವಾಗಿ ಹಣ ನೀಡಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.

ಮತ್ತೆ ಮುಂದುವಿದು ಮಾತನಾಡಿದ ಅಜಯ್ ಮಾಕೆನ್, ಕ್ರೀಡೆಗಳಿಗೆ ನೇರವಾಗಿ ಧನಸಹಾಯ ಮಾಡಲು ಹಲವು ಮಾರ್ಗಗಳಿವೆ ಎಂದು ವಾದಿಸಿದರು ಮತ್ತು ಫುಟ್‌ಬಾಲ್‌ನಂತಹ ಕ್ರೀಡೆಗಳು ನೇರ ಹಣವನ್ನು ಪಡೆದ ಉದಾಹರಣೆಗಳನ್ನು ಉಲ್ಲೇಖಿಸಿದರು. ನಾನು ಕ್ರೀಡಾ ಸಚಿವನಾಗಿದ್ದಾಗ ತಮಿಳುನಾಡಿನ ಕೂನೂರು ಜಿಲ್ಲೆಯಲ್ಲಿ ಮಹತ್ವದ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ , ಅದೇ ರೀತಿ ಇಲ್ಲಿಯೂ ಸ್ಥಾಪಿಸಬಹುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT