ಉಡುಪಿ: ಎಲೆಕ್ಟ್ರಾನಿಕ್ಸ್ ಶೋರೂಮ್ ನಲ್ಲಿ ಭದ್ರತಾ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ತನ್ನ ಮೇಲ್ವಿಚಾರಕನನ್ನು ಇರಿದು ಕೊಂದಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಕೆಲಸದ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ತಾರಕಕ್ಕೇರಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆ.10 ರಂದು ಈ ಘಟನೆ ನಡೆದಿದ್ದು, ರಾನ್ಸನ್ ಎವರೆಸ್ಟ್ ಡಿಸೋಜಾ ಅವರ ಕುತ್ತಿಗೆ ಮತ್ತು ಕಾಲಿಗೆ ಸಣ್ಣ ಇರಿತದ ಗಾಯಗಳಾಗಿವೆ. ದಾಳಿಕೋರ ಪ್ರಸಾದ್ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಕೆಲವೇ ಗಂಟೆಗಳಲ್ಲಿ ಕೃಷ್ಣ ದೇವಸ್ಥಾನದ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಉಡುಪಿ ಟೌನ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸೆಕ್ಯುರಿಟಿ ಗಾರ್ಡ್ ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಕೆಲಸ ಕಳೆದುಕೊಳ್ಳುವ ಬಗ್ಗೆ ಕಳವಳ ಹೊಂದಿದ್ದರಿಂದ ಕ್ಲಸ್ಟರ್ ಮ್ಯಾನೇಜರ್ ಡಿಸೋಜಾ ಅವರನ್ನು ಸಂಪರ್ಕಿಸಿ ತಮ್ಮ ಸ್ಥಾನದಿಂದ ತೆಗೆದುಹಾಕದಂತೆ ಮನವಿ ಮಾಡಿದರು.
ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ಸಲ್ಲಿಸುವುದಾಗಿ ಡಿಸೋಜ ಪ್ರಸಾದ್‌ಗೆ ಭರವಸೆ ನೀಡಿದ್ದರು. ಆದರೆ, ಆಗಸ್ಟ್ 10 ರಂದು ಸಂಜೆ 7.30 ರ ಸುಮಾರಿಗೆ ಡಿಸೋಜಾ ಶೋರೂಮ್‌ನಿಂದ ಹೊರಡಲು ಮುಂದಾದಾಗ, ಪ್ರಸಾದ್ ಅವರನ್ನು ಮತ್ತೆ ಎದುರುಗೊಂಡು ಮಾತನಾಡುತ್ತಿದ್ದರು. ಈ ವೇಳೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಪ್ರಸಾದ್ ಡಿಸೋಜ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆತನನ್ನು ಪೊಲೀಸರು ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಿಂದ ಆ.11 ರಂದು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.