ಸಾಂದರ್ಭಿಕ ಚಿತ್ರ  
ರಾಜ್ಯ

ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ: ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ವಿರುದ್ಧ FIR ದಾಖಲು

ಅತ್ಯಾಚಾರ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಹಾಗೂ ಆತನ ಸ್ನೇಹಿತನ ವಿರುದ್ಧ ಆಟೋ ಚಾಲಕ ನೀಡಿರುವ ದೂರಿನ ಮೇರೆಗೆ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬೆಂಗಳೂರು: ಮೊನ್ನೆ ಭಾನುವಾರ ನಸುಕಿನ ಜಾವ ಹೆಚ್​ಎಸ್​ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿ ಮೇಲೆ ಎಫ್ಐಆರ್ ದಾಖಲಾಗಿದೆ.

ಅತ್ಯಾಚಾರ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಹಾಗೂ ಆತನ ಸ್ನೇಹಿತನ ವಿರುದ್ಧ ಆಟೋ ಚಾಲಕ ನೀಡಿರುವ ದೂರಿನ ಮೇರೆಗೆ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಅಂದು ಏನಾಯಿತು?: ಕೋರಮಂಗಲ ಪಬ್ ನಲ್ಲಿ ಸ್ನೇಹಿತನೊಂದಿಗೆ ಪಾರ್ಟಿ ಮುಗಿಸಿ ಕಾರಿನಲ್ಲಿ ತೆರಳುವಾಗ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಳು. ಈ ವೇಳೆ ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಮೂರು ವಾಹನಗಳು ಜಖಂ ಆಗಿವೆ.

ಎರಡು ಆಟೋ ಹಾಗೂ ಒಂದು ಬೈಕ್​ಗೆ ಡಿಕ್ಕಿ ಹೊಡೆದು ಕಾರನ್ನೂ ನಿಲ್ಲಿಸದೆ ಫೋರಂ ಮಾಲ್ ಕಡೆ ಚಲಾಯಿಸಿಕೊಂಡು ಹೋಗಿದ್ದಾಳೆ. ತಕ್ಷಣವೇ ಜಖಂ ಆಗಿದ್ದ ಎರಡು ಆಟೋಗಳು ಕಾರನ್ನು ಫಾಲೋ ಮಾಡಿ ಪ್ರಶ್ನಿಸಿದ್ದಾರೆ. ಆಗ ಕಾರಿನಿಂದ ಇಳಿದ ಸಂತ್ರಸ್ತೆ ಏಕಾಏಕಿ ಕಾರನ್ನು ಅಲ್ಲೇ ಬಿಟ್ಟು ತಪ್ಪಿಸಿಕೊಂಡು ಹೋಗಿದ್ದಾಳೆ. ಆಗ ಆಕೆ ಸ್ನೇಹಿತ ಚಾಲಕರ ಜೊತೆ ವಾದ ಮಾಡಿ ಪರಿಸ್ಥಿತಿ ನಿಭಾಯಿಸಿ ಬಳಿಕ ಯುವತಿಗಾಗಿ ಹುಡುಕಾಡಿದ್ದಾನೆ.

ಅಪರಿಚಿತ ವ್ಯಕ್ತಿಯಿಂದ ಡ್ರಾಪ್ ಪಡೆದ ಯುವತಿ: ಯುವತಿಯನ್ನು ಹುಡುಕಾಡುವಾಗ ಯುವತಿ ರಸ್ತೆ ಬಳಿ ಹೋಗಿ ಡ್ರಾಪ್ ಕೇಳುತ್ತಿದ್ದದ್ದನ್ನು ನೋಡಿದ ಸ್ನೇಹಿತ ವಿಚಾರಿಸಿದಾಗ, ಯುವತಿ ತಾನು ಮೊಬೈಲ್ ನ್ನು ಪಬ್​ನಲ್ಲೇ ಬಿಟ್ಟು ಬಂದಿದ್ದೇನೆ ಎಂದು ತಿಳಿಸಿದ್ದಾಳೆ. ನಂತರ ಅಪರಿಚಿತ ವ್ಯಕ್ತಿಯಿಂದ ಡ್ರಾಪ್ ಕೇಳಿ ಯುವತಿ ಅಲ್ಲಿಂದ ಹೊರಟಿದ್ದಾಳೆ. ಈ ವೇಳೆ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿದೆ. ಸದ್ಯ ಯುವತಿ ಹಾಗೂ ಆಕೆಯ ಸ್ನೇಹಿತನ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಅಜಾಗರೂಕತೆ ಮತ್ತು ಅತಿಯಾದ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!