ಬೆಂಗಳೂರು: ದಾಸರಹಳ್ಳಿಯಲ್ಲಿ ಬಾಲಕಿಯರ ಜೋಡಿ ಹತ್ಯೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ.
ಮಲತಂದೆಯೇ ಮಚ್ಚಿನಿಂದ ಇಬ್ಬರು ಹೆಣ್ಣುಮಕ್ಕಳನ್ನು ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಉತ್ತರ ಭಾರತ ಮೂಲದ ಈ ಕುಟುಂಬ ದಾಸರಹಳ್ಳಿಯ ಕಾವೇರಿ ಬಡಾವಣೆಯೊಂದರ ಮನೆಯಲ್ಲಿ ವಾಸವಿತ್ತು.
ಮಲತಂದೆ ಸುಮಿತ್ ಎಂಬಾತ ಸುಮಾರು 14 ಹಾಗೂ 15 ವರ್ಷದ ಹೆಣ್ಣು ಮಕ್ಕಳನ್ನ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದಾನೆ.
ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಸಜೀತ್, ಡಾಗ್ ಸ್ಕ್ವಾಡ್, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.